“ಸರ್ಕಾರಿ ಶಾಲೆ ಸಮಸ್ಯೆಯ ಬಗ್ಗೆ ಹೇಳೋರು ಕೇಳೋರಿಲ್ಲ “
ಚಿಂಚೋಳಿ ಚಂದಾಪುರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯ ಬಗ್ಗೆ ಯಾವೊಬ್ಬ ಜನಪ್ರತಿನಿಧಿ ಇದಕ್ಕೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾರೊಬ್ಬರೂ ಕೂಡ ಇಲ್ಲಿವರೆಗೆ ಸಮಸ್ಯೆ ಸ್ಪಂದಿಸಿಲ್ಲ ಹಲವು ಬಾರಿ ಸುದ್ದಿ ಪ್ರಕಟಣೆ ಮಾಡಿದರು ಕೂಡ ಇಲ್ಲಿವರೆಗೆ ಈ ಸಮಸ್ಯೆಗಳು ಬಗೆಹರಿದಿಲ್ಲ, ಸರ್ಕಾರಿ ಶಾಲೆಯ ಅಸಡ್ಡೆನಾ ಕೆಲವು ದಿನಗಳ ಹಿಂದೆ ನಡೆದಂತ ಪುರಸಭೆ ಜನಸ್ಪಂದನ ಕಾರ್ಯಕ್ರಮದಲ್ಲಿ ಕೂಡ ಶಾಸಕರಿಗೆ ಮನವಿ ಪತ್ರಸಲ್ಲಿಸಿ ದಿನಗಳು ಕಳೆದರೂ ಕೂಡ ಇಲ್ಲಿಯವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಲಿ ಜನಪ್ರತಿನಿಧಿಗಳಾಗಲಿ, ಈ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ, ಪೋಷಕರಾದ ಮೊಮ್ಮದ್ ಖಾನ್ ಪ್ರತಿಕ್ರಿಯಿಸಿ ಸರಕಾರ ಎಷ್ಟೊಂದು ಅನುದಾನ ತಂದೆ ಸರ್ಕಾರ ಶಾಲೆಯ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಹಲವಾರು ಯೋಜನೆ ತಂದಿದ್ದರು ಕೂಡ ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ಅತಿ ಹೆಚ್ಚು ಮಕ್ಕಳು ಓದುತ್ತಿರುವಂತ ಈ ಶಾಲೆಯಲ್ಲಿ ಮಳೆಗಾಲದಲ್ಲಿ ಮೈದಾನದಲ್ಲಿ ನೀರು ತುಂಬಿ ನನ್ನ ಮಗನು ಬಿದ್ದಿ ಗಾಯಗಳಾಗಿವೆ, ಸರಿಯಾದ ಶೌಚಾಲಯ ವ್ಯವಸ್ಥೆ ಕೂಡ ಇಲ್ಲ, ಅದೇ ರೀತಿ ಕೊಠಡಿಯ ಮುಂಭಾಗ ನೀರು ನಿಲ್ಲುತ್ತವೆ ಈಗಲಾದರೂ ಕಣ್ಣು ಕಾಣದ ಕಿವಿಯು ಕೇಳದಂತಹ ಜನಪ್ರತಿನಿಧಿಗಳು ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕು ಒಂದು ವೇಳೆ ಈ ಸಮಸ್ಯೆ ಪರೇಹರಿಸದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಹತ್ತಿರ ಪೋಷಕರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.