ಬೀದರ್

ಸರ್ಕಾರಿ ಶಾಲೆಗಳು ವ್ಯವಸ್ಥಿತವಾಗಿ ನಡೆಯಲಿ: ಶಾಸಕ ಪ್ರಭು ಚವ್ಹಾಣ

ಬೀದರ, ಜೂ.19:- ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜೂನ್ 19ರಂದು ಔರಾದ(ಬಿ) ವಿಧಾನಸಭಾ ಕ್ಷೇತ್ರದ ಹಲವೆಡೆ ಗ್ರಾಮ ಸಂಚಾರ ನಡೆಸಿ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
 ಸಾವರಗಾಂವ, ಬಾವಲಗಾಂವ, ಹೊಕ್ರಾಣಾ, ನಂದಿಬಿಜಲಗಾAವ, ಚಿಕ್ಲಿ(ಯು), ಖೇಮಾ ನಾಯಕ್ ತಾಂಡಾ, ಗಂಗನಬೀಡ, ದಾಬಕಾ(ಸಿ), ಮುತಖೇಡ್, ಹಂದಿಕೇರಾ, ಡೊಂಗರಗಾAವ, ಮುರ್ಕಿ, ಕಮಲನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ವೀಕ್ಷಿಸಿದರು. ಶಾಲಾ ಕಾಲೇಜುಗಳು ಆರಂಭವಾಗಿದ್ದು, ಬೋಧನಾ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯಬೇಕು. ಶಿಕ್ಷಕರೆಲ್ಲ ಸಮಯ ಪಾಲನೆ ಮಾಡಬೇಕು. ಶಿಕ್ಷಕರು ನಿಗದಿತ ವೇಳೆಗೆ ಶಾಲೆಯಲ್ಲಿ ಹಾಜರಾಗಿ ಪಾಠ ಬೋಧನೆ ಮಾಡಬೇಕು. ಶಿಕ್ಷಕರ ಕೆಲಸದ ಬಗ್ಗೆ ಯಾವುದೇ ರೀತಿಯ ದೂರುಗಳು ಬಾರದಂತೆ ಕೆಲಸ ಮಾಡಬೇಕೆಂದು ಸೂಚಿಸಿದರು.
 ಶಾಸಕರು ತಾವು ಭೇಟಿ ನೀಡಿದ ಶಾಲೆಗಳ ಆವರಣದಲ್ಲಿ ಸಂಚರಿಸಿ ಸ್ವಚ್ಛತೆ ಒಳಗೊಂಡು ಮತ್ತಿತರೆ ವ್ಯವಸ್ಥೆಗಳನ್ನು ವೀಕ್ಷಿಸಿದರು. ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆ ಅತಿಮುಖ್ಯವಾಗಿರುತ್ತದೆ. ಹಾಗಾಗಿ ತಮ್ಮ ಶಾಲೆಯ ಆವರಣವನ್ನು ಶುಚಿಯಾಗಿಟ್ಟುಕೊಳ್ಳುವ ಜೊತೆಗೆ ಮಕ್ಕಳಲ್ಲಿಯೂ ಸ್ವಚ್ಛತೆಯ ಜಾಗೃತಿ ಮೂಡಿಸಬೇಕೆಂದು ನಿರ್ದೇಶನ ನೀಡಿದರು. ಶಾಲೆಯಲ್ಲಿನ ಶಿಕ್ಷಕರ ಹಾಜರಾತಿಯ ಬಗ್ಗೆ ಮಾಹಿತಿ ಪಡೆದು, ಗೈರಾಗಿರುವ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚನೆ ನೀಡಿದರು. ಶಾಲೆಗಳಲ್ಲಿ ಏನೇನು ಕೊರತೆಯಿದೆ ಎನ್ನುವ ಪಟ್ಟಿಯನ್ನು ನೀಡಿದಲ್ಲಿ ಅಗತ್ಯ ಉಪಕರಣಗಳನ್ನು ಒದಗಿಸಲಾಗುವುದೆಂದು ತಿಳಿಸಿದರು.
 ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಕಾಣಬಹುದಾಗಿದೆ. ಆದ್ದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣ ಉತ್ತಮ ರೀತಿಯಿಂದ ನೀಡಬೇಕು. ಎಲ್ಲ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.
 ಅಂಗನವಾಡಿ ಸೌಲಭ್ಯ ಸರಿಯಾಗಿ ತಲುಪಿಸಿಶಾಸಕರು ಗ್ರಾಮ ಸಂಚಾರದ ವೇಳೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಅಲ್ಲಿನ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ, ಅಂಗನವಾಡಿ ಕೇಂದ್ರದಿAದ ಏನೇನು ಸೌಲಭ್ಯಗಳು ಸಿಗುತ್ತಿವೆ ಎಂದು ಮಾಹಿತಿ ಪಡೆದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸರಿಯಾಗಿ ಕೆಲಸ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕೆಂದು ಸೂಚಿಸಿದರು.
10 ಕೋಟಿಯ ಅಭಿವೃದ್ಧಿ ಕೆಲಸಗಳಿಗೆ ಚಾಲನೆಬೋಂತಿ ತಾಂಡಾ, ಸಾವರಗಾಂವ, ಬಾವಲಗಾಂವ, ಹೊಕ್ರಾಣಾ, ನಂದಿಬಿಜಲಗಾAವ, ಚಿಕ್ಲಿ(ಯು), ಖೇಮಾ ನಾಯಕ್ ತಾಂಡಾ, ಗಂಗನಬೀಡ, ದಾಬಕಾ(ಸಿ), ಮುತಖೇಡ್, ಹಂದಿಕೇರಾ, ಡೊಂಗರಗಾAವ, ಮುರ್ಕಿ, ಕಮಲನಗರ, ಸೋನಾಳ, ಹೊಳಸಮುದ್ರ, ಬೆಳಕೋಣಿ(ಬಿ), ಭವಾನಿ ಬಿಜಲಗಾಂವ ಸೇರುದಂತೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪ್ಯಾನಲ್ ಅಳವಡಿಕೆ, ಹೆಚ್ಚುವರಿ ತರಗತಿ ಕೊಣೆಗಳು, ಪೀಠೋಪಕರಣಗಳ ಅಳಡಿಕೆ, ಸಿಸಿ ರಸ್ತೆ, ಚರಂಡಿ ಕಾಮಗಾರಿ ಒಳಗೊಂಡು ಸುಮಾರು 10 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದೊಂಡಿಬಾ ನರೋಟೆ,À ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಸತೀಷ ಪಾಟೀಲ, ಕೇರಬಾ ಪವಾರ್, ಶಿವಕುಮಾರ ವಡ್ಡೆ, ಶಿವು ಝುಲ್ಫೆ, ಸಂಜುಕುಮಾರ ಮುರ್ಕೆ, ಸಚಿನ್ ಬಿರಾದಾರ, ರಂಗರಾವ ಜಾಧವ, ಬಸವರಾಜ ಪಾಟೀಲ ಕಮಲನಗರ, ನಾಗೇಶ ಪತ್ರೆ, ಮಲ್ಲಪ್ಪ ದಾನಾ, ಸಚಿನ್ ರಾಠೋಡ್, ಸುಜಿತ್ ಪವಾರ್, ಸುರೇಶ ಭೋಸ್ಲೆ, ಅಶೋಕ ಹಲಮಂಡಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!