ಸರ್ಕಾರಿ ಪ್ರೌಢಶಾಲೆ ಚಿಂತಾಕಿ ಯಲ್ಲಿ ಸೇವಾ ನಿವೃತ್ತಿ ಮತ್ತು ಬೀಳ್ಕೊಡುವ ಸಮಾರಂಭ
ಮುಖ್ಯ ಗುರುಗಳಾದ ಶ್ರೀ ಕೃಷ್ಣಾರೆಡ್ಡಿ ರವರು ಸೇವಾ ನಿವೃತ್ತಿ ಹೊಂದಿದರು ಆದ ಕಾರಣ ಶಾಲೆಯ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳು ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರು. ಗ್ರಾಮ ಪಂಚಾಯತ್ ಅಧ್ಯಕ್ಷರು ರಾಮರೆಡ್ಡಿ.ಉಪಾಧ್ಯಕ್ಷರು ಅಶ್ವಿನಿ ಅನಿಲ್ ಹಾಗೂ ಸರ್ವ ಸದಸ್ಯರು ಗ್ರಾಮದ ಹಿರಿಯ ಮುಖಂಡರು ಹಾಗೂ ಹಳೆಯ ವಿದ್ಯಾರ್ಥಿಗಳು ಹಾಗೂ ಯುವ ಮುಖಂಡರು ಎಲ್ಲರೂ ಈ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಜೀವನ ಸುಂದರವಾಗಿರಲಿ ಎಂದು ಹಾರೈಸಿದರು.
ಹಾಗೇನೆ ವರ್ಗಾವಣೆಗೊಂಡ ಶಿಕ್ಷಕರಾದ ಶ್ರೀ ವೆಂಕಟರಾವ್, ಶ್ರೀ ಶ್ರೀ ಕೊಟ್ರೇಶ್ ಬಾಣದ, ಶ್ರೀ ಸಂತೋಷ್ ಜಾದವ್ ಶಿಕ್ಷಕರಿಗೂ ಕೂಡ ಅದ್ದೂರಿಯಾಗಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಗುರುನಾಥ ರೆಡ್ಡಿ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ರಾಜ್ಯ ಒಕ್ಕೂಟ ( ರಿ ) ಬೆಂಗಳೂರು ಹಾಜರಿದ್ದರು.