ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾದ ಹಣ ದುರುಪಯೋಗ ದೂರ ಸಲ್ಲಿಕೆ
ಬೀದರ ತಾಲೂಕಿನ ಶ್ರೀಮಂಡಲ ಮೆಥೋಡಿಸ್ಟ್ ಚರ್ಚ್ನ ಹತ್ತಿರ ಸಮುದಾಯ ಭವನ ಹಾಗೂ ಸುತ್ತುಗೋಡೆ ನಿರ್ಮಾಣ ಮಾಡಲು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರೂ. 60.00 ಲಕ್ಷ ಮಂಜೂರಾಗಿದ್ದು, ದಿನಾಂಕ: 05-05-2022 ರಂದು ರೂ. 7.50 ಲಕ್ಷ, ದಿನಾಂಕ: 12-10-2022 ರಂದು ರೂ. 2.40 ಲಕ್ಷ ಮತ್ತು ದಿನಾಂಕ: 27-02-2023 ರಂದು ರೂ. 25.00 ಲಕ್ಷ ಹೀಗೆ ಒಟ್ಟು ರೂ. 34.90 ಲಕ್ಷ ಅನುದಾನವನ್ನು ಮೆಥೋಡಿಸ್ಟ್ ಚರ್ಚ್ ಸಮಿತಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ ಜಮಾ ಆಗಿದೆ.
ಮಂಜೂರಾಗಿ ಬಿಡುಗಡೆಯಾಗಿರುವ ರೂ. 34.90 ಲಕ್ಷ ಹಣವನ್ನು ಮೆಥೋಡಿಸ್ಟ್ ಚರ್ಚ್ ಸಮಿತಿಯ ಪದಾಧಿಕಾರಿಗಳ ಗಮನಕ್ಕೆ ತರದೇ ಮತ್ತು ಸಮಿತಿಯ ಸಭೆಯಲ್ಲಿ ಚರ್ಚಿಸದೇ ಕೇವಲ ಅಧ್ಯಕ್ಷ ಮತ್ತು ಕಾರ್ಯದರ್ಶಿ ಇಬ್ಬರು ಕೂಡಿಕೊಂಡು, ಸದರಿ ಹಣವನ್ನು ಹಂತ ಹಂತವಾಗಿ ಬ್ಯಾಂಕಿನಿAದ ವಿಥಡ್ರಾ ಮಾಡಿರುವುದು ಗಮನಕ್ಕೆ ಬಂದಿದೆ. ವಿಥಡ್ರಾ ಮಾಡಿದ ಹಣದಿಂದ ಯಾವುದೇ ರೀತಿಯ ಕೆಲಸ ಕಾರ್ಯಗಳು ಮಾಡಿರುವುದಿಲ್ಲ. ಈ ಬಗ್ಗೆ ನಾನು ಉಲ್ಲೇಖ (1) ರಂದು ದೂರು ಸಲ್ಲಿಸಿದ್ದು, ನಾನು ದೂರು ದಾಖಲಿಸಿರುವುದನ್ನು ಅರಿತು ಶ್ರೀಮಂಡಲ ಮೆಥೋಡಿಸ್ಟ್ ಚರ್ಚಿನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಕೂಡಿ ದಿನಾಂಕ: 23-08-2023 ರಂದು ಸಮುದಾಯ ಭವನ ನಿರ್ಮಾಣಕ್ಕೆ ಕಳಪೆ ಮಟ್ಟದ ಕಾಮಗಾರಿ ಪ್ರಾರಂಭಿಸಿರುತ್ತಾರೆ.
ಕೇವಲ ಮೂರೇ ದಿವಸಗಳಲ್ಲಿ 14 ಪಿಲ್ಲರ್ ಹಾಕಿ, ಅದಕ್ಕೆ ಸರಿಯಾದ ರೀತಿಯಲ್ಲಿ ತಳಪಾಯ ಕಡ ಮಾಡದೇ, ತಮ್ಮ ಮನಬಂದAತೆ ತರಾತುರಿಯಲ್ಲಿ ಪಿಲ್ಲರ್ ಹಾಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಮಾಡಲು ಯತ್ನಿಸುತ್ತಿದ್ದಾರೆ. ಬ್ಯಾಂಕಿಗೆ ಜಮಾ ಆಗಿರುವ ರೂ. 34.90 ಲಕ್ಷ ಹಣದಲ್ಲಿ ದಿನಾಂಕ: 27-07-2023 ಕ್ಕೆ ರೂ. 4,21,783.40 ಮೊತ್ತ ಬಾಕಿ ಇದ್ದು, ರೂ. 30.68 ಲಕ್ಷ ಹಣವನ್ನು ಕಳೆದ ಒಂದುವರೆ ವರ್ಷದಿಂದ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ. ಸರ್ಕಾರದ ಹಣ ಈ ರೀತಿ ತಮ್ಮ ಸ್ವಂತಕ್ಕೆ ಬಳಸಿಕೊಂಡು, ಯಾವುದೇ ರೀತಿಯ ಕಾಮಗಾರಿ ಮಾಡದೇ ಇದ್ದರೂ ಈ ಬಗ್ಗೆ ಮಾನ್ಯ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು, ಬೀದರ ಇವರು ಯಾವುದೇ ರೀತಿಯ ಕ್ರಮ ಜರುಗಿಸದೇ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿರುತ್ತದೆ ಮತ್ತು ಇವರೂ ಕೂಡ ಹಣ ದುರುಪಯೋಗದಲ್ಲಿ ಶಾಮಿಗಾಗಿರುವ ಶಂಕೆ ಇದೆ. ಕಾರಣ ಉಲ್ಲೇಖ (1) ರಿಂದ (3) ರ ವರೆಗೆ ದೂರು ಸಲ್ಲಿಸಿದರೂ ಇದುವರೆಗೆ ಹಣ ದುರುಪಯೋಗ ಮಾಡಿಕೊಂಡಿರುವ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರ ಮೇಲೆ ಶಿಸ್ತಿನ ಕ್ರಮ ಜರುಗಿಸುವುದಾಗಲೀ ಅಥವಾ ಕಾಮಗಾರಿ ಆಗಿರುವ ಬಗ್ಗೆ ಪರಿಶೀಲನೆ ಮಾಡುವುದಾಗಲೀ ಮಾಡದೇ, ಸುಮ್ಮನೆ ಕುಳಿತಿದ್ದರಿಂದಲೇ ಸರ್ಕಾರದ ಯೋಜನೆ ಹಳ್ಳ ಹಿಡಿಯುವಂತಾಗಿದೆ.
ಈ ಹಣ ಅವರ ಸ್ವಂತಕ್ಕಾಗಿ ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಇದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಸಮಸ್ತ ಗ್ರಾಮಸ್ಥರ ಸಮ್ಮುಖದಲ್ಲಿ ಅನುದಾನದ ಬಳಕೆ ಬಗ್ಗೆ ಸಭೆ ಕರೆದು, ಚರ್ಚಿಸಿ ಉತ್ತಮ ಹಾಗೂ ಗುಣಮಟ್ಟದ ಕಾಮಗಾರಿಯಾಗಬೇಕಾಗಿದೆ.
ಶ್ರೀಮಂಡಲ ಮೆಥೋಡಿಸ್ಟ್ ಚರ್ಚ್
ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರನ್ನು ವಿಚಾರಣೆ ಮಾಡಿ, ವಿಥಡ್ರಾ ಮಾಡಿದ ಹಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗಿ ಮತ್ತು ಸಾರ್ವಜನಿಕ ಹಣವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗದೇ ಕಳೆದ ಒಂದುವರೆ ವರ್ಷದಿಂದ ಹಣ ದುರುಪಯೋಗ ಮಾಡಿಕೊಂಡಿರುವುದರಿAದ ಬಡ್ಡಿ ಸೇರಿಸಿ ಹಣ ವಸೂಲಿ ಮಾಡಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದು ಮತ್ತು ಸರ್ಕಾರದ ಅನುದಾನವನ್ನು ಸಮಾಜದ ಉದ್ದೇಶಕ್ಕಾಗಿ ಸದ್ಬಳಕೆಯಾಗುವ ನಿಟ್ಟಿನಲ್ಲಿ ತಾವುಗಳು ಸಂಬAಧಪಟ್ಟವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಇಂದು ಮೆಥೋಡಿಸ್ಟ್ ಚರ್ಚ ಖಜಾಂಚಿಯಾದ ಪೀಟರ್ ಬಾಬು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.