ಸಮಸ್ತ ರೈತರ ಪರವಾಗಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರಧಾನಮಂತ್ರಿಗಳಿಗೆ ಧನ್ಯವಾದ
ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ನಿನ್ನೆ ದೇಶದ 8 ಕೋಟಿ ರೈತರ ಖಾತೆಗೆ ರೂ. 16000 ಕೋಟಿ ಪ್ರೋತ್ಸಾಹಧನವನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ 14ನೇ ಕಂತಿನ ಹಣವನ್ನು ಜಮೆ ಮಾಡಿದ್ದಾರೆ, ಇದರಲ್ಲಿ ಬೀದರ ಲೋಕಸಭಾ ಕ್ಷೇತ್ರದ 2,11,000 ಸಾವಿರ ರೈತರಿಗೆ 42.20 ಕೋಟಿ ಪ್ರೋತ್ಸಾಹಧನವನ್ನು ಜಮೆಯಾಗಿರುತ್ತದೆ, ಸಮಸ್ತ ರೈತರ ಪರವಾಗಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಇದರ ಜೊತೆಗೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರೈತರಿಗಾಗಿ ಯಾವಾಗಲೂ ವಿನೂತನ ಕಾರ್ಯಕ್ರಮಗಳು ರೂಪಿಸುತ್ತಿದೆ, ಇದರಲ್ಲಿ ಹೊಸ ಸೇರ್ಪಡೆಯಾಗಿ ದೇಶದಲ್ಲಿ ಒಟ್ಟು 1,25,000 ಕೃಷಿ ಸಮೃದ್ಧಿ ಕೇಂದ್ರಗಳು ಪ್ರಾರಂಭಗೊಳಿಸಿ, ಈ ಕಿಸಾನ್ ಸಮೃದ್ಧಿ ಕೇಂದ್ರದಲ್ಲಿ ರೈತರಿಗೆ ಗೊಬ್ಬರ, ಕಿಟನಾಶಕ, ಬಿಜ ಇತ್ಯಾದಿಗಳು ಒಂದೆ ಮಳಿಗೆಯಲ್ಲಿ ದೊರೆಯವಂತೆ ಮಾಡಲಾಗಿದೆ ಮತ್ತು ಕಡಿಮೆ ದರದಲ್ಲಿ ದೊರೆಯುತ್ತವೆ, ಮತ್ತು ನನ್ನ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯದಿಂದ ಹೊಸದಾಗಿ ಯೂರಿಯಾ ಗೊಲ್ಡ್ (ಸಲ್ಫರ್ ಕೋಟೇಡ್ ಯೂರಿಯಾ) ಇದು ಮಣ್ಣಿನಲ್ಲಿರುವ ಸಲ್ಫರ್ ಅಂಶವನ್ನು ಹೆಚ್ಚಿಸುತ್ತದೆ. ಈ ಯೋರಿಯಾ ಗೋಲ್ಡ್ ಅನ್ನು ಮಾರುಕಟ್ಟೆಗೆ ಪ್ರಧಾನಮಂತ್ರಿಗಳ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಗಿದೆ, ಇದನ್ನು ಹೊಲದಲ್ಲಿ ಬಳಕೆ ಮಾಡುವುದರಿಂದ ಉತ್ತಮ ಬೆಳೆ ಪಡೆಯಬಹುದು, ಆದ್ದರಿಂದ ಎಲ್ಲಾ ರೈತರು ಯೂರಿಯಾ ಗೋಲ್ಡ್ ಅನ್ನು ಬಳಸಬೇಕು ಮತ್ತು ಕಿಸಾನ್ ಸಮೃದ್ಧಿ ಕೇಂದ್ರದ ಸದೂಪಯೋಗ ಪಡೆದುಕೊಳ್ಳಬೇಕೆಂದು ಸಚಿವರು ರೈತರಲ್ಲಿ ಕೋರಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೀದರ ಲೋಕಸಭಾ ಕ್ಷೇತ್ರದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕು, ಇದು ನಿಮ್ಮ ಬೆಳೆಗಳ ರಕ್ಷಕವಾಗಿದೆ, ವಿಮೆ ಮಾಡಿಸಿಕೊಳ್ಳಲು ಇದೇ ತಿಂಗಳು 31 ಕೊನೆಯ ದಿನವಾಗಿದ್ದು, ಇನ್ನು ಕೇವಲ ಎರಡ್ಮೂರು ದಿನಗಳು ಬಾಕಿ ಇದ್ದು, ಶಿಘ್ರದಲ್ಲಿ ತಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್ ಶಾಖೆ, ಪಿ.ಕೆ.ಪಿ.ಎಸ್. ಗ್ರಾಮ್ ಓನ್ ಕೇಂದ್ರಗಳು ಅಥವಾ ಸಿ.ಎಸ್.ಸಿ. ಕೇಂದ್ರಗಳಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕೆಂದು ರೈತರಲ್ಲಿ ಸಚಿವರು ಮನವಿ ಮಾಡಿಕೊಂಡಿದ್ದಾರೆ.