ಸನಾತನ ಧರ್ಮ ರಕ್ಷಣೆಯೇ ನನ್ನ ಜೀವನದ ಪರಮ ಗುರಿ: ಈಶ್ವರಸಿಂಗ್ ಠಾಕೂರ್
ಬೀದರ್: ಹಿಂದು ಧರ್ಮ, ಸಂಸ್ಕøತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ರಕ್ಷಿಸುವುದು ನನ್ನ ಜೀವನದ ಪರಮ ಗುರಿಯಾಗಿದೆ ಎಂದು ಹಿಂದು ಸಾಮ್ರಾಟರೆಂದೆ ಖ್ಯಾತರಾದ ಭಾರತೀಯ ಜನತಾ ಪಕ್ಷದ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಹೇಳಿದರು.
ಇತ್ತಿಚೀಗೆ ವಿಜಯನಗರ ಜಿಲ್ಲೆಯ ಉಜ್ಜಯನಿ ಸುಕ್ಷೇತ್ರಕ್ಕೆ ತೆರಳಿ ಅಲ್ಲಿಯ ಜಗದ್ಗುರುಗಳ ದರುಶನ ಪಡೆದು, ಜಗದ್ಗುರುಗಳಿಂದ ಸನ್ಮಾನಿತರಾಗಿ ಮಾತನಾಡಿದ ಅವರು, ಜೀವನದಲ್ಲಿ ನನಗೆ ಯಾವುದೇ ಗುರಿ ಇಲ್ಲ, ಗುರುವಿನ ಸೇವೆ, ಪರಮಾತ್ಮನ ಸೇವೆ ಮಾಡುವುದೇ ನನ್ನ ಜೀವನದ ಉಸಿರು ಎಂದುಕೊಳ್ಳುತ್ತೇನೆ. ಮುಂಬರುವ ದಿನಗಳಲ್ಲಿ ಪಂಚ ಜಗದ್ಗುರುಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಕರುಣಿಸಬೇಕೆಂದು ಠಾಕೂರ್ ಜಗದ್ಗುರುಗಳಲ್ಲಿ ಮನವಿ ಮಾಡಿದರು.
ಸನ್ಮಾನ ಮಾಡಿ ಮಾತನಾಡಿದ ಉಜ್ಜಯನಿ ಜಗದ್ಗುರುಗಳು, ಈ ಕಾಲದಲ್ಲಿ ಧರ್ಮ ರಕ್ಷಣೆ ಮಾಡುವವರ ಸಮಖ್ಯೆ ತೀರ ವೀರಳವಾಗಿದೆ. ಇಂಥದರಲ್ಲಿ ಧರ್ಮ ರಕ್ಷಣೆಯೇ ತನ್ನ ಜೀವನದ ಪರಮ ಧ್ಯೆಯ ಎಂದು ಹೇಳುವ ನಿಮಗೆ ಜಗದಾದಿ ಜಗದ್ಗುರು ಶ್ರೀ ರೇಣುಕ ಭಗವತ್ಪಾದರ ಕೃಪಾಶಿರ್ವಾದ ಹಾಗೂ ಪಂಚಾಚಾರ್ಯರ ಬಲ ನಿಮ್ಮನ್ನು ಇನ್ಮಷ್ಟು ಎತ್ತರೆತ್ತರಕ್ಕೆ ಕೊಂಡೊಯ್ಯಲಿದೆ ಎಂದರಲ್ಲದೇ ಜಗದಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಐದು ಜಗದ್ಗುರುಗಳ ಮೂರ್ತಿ ಸ್ಥಾಪನೆ ಮಾಡುವಂತೆ ಅಲ್ಲಿಯೆ ಇದ್ದ ಪುಣ್ಯಾಶ್ರಮದ ಸಂಚಾಲಕ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿಯವರಿಗೆ ಆದೇಶಿಸಿದರು.
ಆಶ್ರಮದ ಟ್ರಸ್ಟಿಗಳಾದ ಶಿವಕುಮಾರ ಸ್ವಾಮಿ, ಶ್ರೀಕಾಂತ ಸ್ವಾಮಿ ಸೋಲಪುರ, ಕಾರ್ತಿಕ ಮಠಪತಿ, ಬಸವಕುಮಾರ ಸ್ವಾಮಿ, ಮಹೇಶ ಕೌಠಾ ಹಾಗೂ ಇತರರು ಈ ಸಂದರ್ಭದಲ್ಲಿ ಜಗದ್ಗುರುಗಳಿಂದ ರುದ್ರಾಕ್ಷಿ ಮಾಲೆ ಸ್ವೀಕರಿಸಿ ದರುಶನ ಪಡೆದುಕೊಂಡರು.