ಬೀದರ್

ಸತ್ಯಂ, ಶಿವಂ, ಸುಂದರ ಪ್ರಶಸ್ತಿ ಪ್ರದಾನ

ಭಾರತ ಸ್ವತಂತ್ರಾ ನಂತರ ಒಳ್ಳೆಯವರಿಗೆ ನೆಲೆ-ಬೆಲೆ ಕಡಿಮೆಯಾದ್ದರಿಂದ ಇಲ್ಲಿ ಒಳ್ಳೆಯವರ ಸಂಖ್ಯೆ ಕುಗ್ಗಲು ಕಾರಣವಾಗಿದೆ. ಒಳ್ಳೆಯವರಿಗೆ ಪ್ರೋತ್ಸಾಹಿಸುವ, ಉತ್ತೇಜಿಸುವ ನಿಟ್ಟಿನಲ್ಲಿ ಲಾಲಧರಿ ಆಶ್ರಮದಿಂದ ಕೊಡಮಾಡುತ್ತಿರುವ ಸತ್ಯಂ, ಶಿವಂ, ಸುಂದರA ಪ್ರಶಸ್ತಿ ಒಳ್ಳೆಯವರಿಗೆ ಪ್ರೋತ್ಸಾಹದ ಜೊತೆ ಅವರ ಮನೋಬಲ, ಇಚ್ಛಾಬಲ ಹೆಚ್ಚಿಸಿ  ಅವರಿಗೆ ಪ್ರಚಾರವೂ ಒದಗಿಸುತ್ತಿದೆ. ಇದು ಜನಮಾನಸದಲ್ಲಿ ಸತ್ಪರಿಣಾಮ ಬೀರಿ ಒಳ್ಳೆಯವರಿಂದ ಒಳ್ಳೆಯ ಕರ‍್ಯಗಳು ಹೆಚ್ಚಾಗಲು ಪ್ರೇರೇಪಿಸುತ್ತಿದೆ. ಆಶ್ರಮದಲ್ಲಿ ಅರ್ಹರಿಗೆ ಪ್ರಶಸ್ತಿಗಾಗಿ ಆರಿಸಿ ಪಾರದರ್ಶಕತೆ ಕೂಡ ಕಾಯ್ದುಕೊಂಡು ಬರಲಾಗುತ್ತಿದೆ. ಇದು ಸ್ತುತ್ಯಾರ್ಹವಾದ ಕರ‍್ಯವಾಗಿದೆ ಎಂದು ಹಿಂದೂ ಮಹಾ ಸಭಾದ ಕರ್ನಾಟಕ ರಾಜ್ಯಾಧ್ಯಕ್ಷರಾದ ವಿವೇಕಾನಂದ ಸ್ವಾಮಿಗಳು ಹೇಳಿದರು. ಅವರು ದಿನಾಂಕ : 14.08.2023ರಂದು ಸಂಜೆ ಹುಮನಾಬಾದ ಹತ್ತಿರದ ಲಾಲಧರಿ ಆಶ್ರಮದಲ್ಲಿ ಜರುಗಿದ ಪ್ರೊ.ವೆಂಕಣ್ಣ ಡೊಣ್ಣೆಗೌಡರಿಗೆ ಸಮಾಜ ಕ್ಷೇತ್ರದ ‘ಸುಂದರA’ ಪ್ರಶಸ್ತಿ, ಯರಬಾಗದ ಅನೀಲಕುಮಾರ ಸ್ವಾಮಿಗಳಿಗೆ ಅಧ್ಯಾತ್ಮಿಕ ಕ್ಷೇತ್ರದ ‘ಶಿವಂ’ ಪ್ರಶಸ್ತಿ ಹಾಗೂ ಶಿವಶಂಕರ ತರನಳ್ಳಿಯವರಿಗೆ ಮಾಧ್ಯಮ ಕ್ಷೇತ್ರದ ‘ಸತ್ಯಂ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿದ ಕಲ್ಲೂರು ಹಿರೇಮಠದ ಮೃತ್ಯುಂಜಯ ಸ್ವಾಮಿಗಳು ಮಾತನಾಡುತ್ತಾ, ಭಾರತ ಸಂಸ್ಕೃತಿಯಲ್ಲಿ ಗುರುಸ್ಥಾನಕ್ಕೆ ದೈವಿಕ ಸ್ಥಾನಮಾನವಿದೆ. ಗುರುಗಳಿಂದ ಬಂದುದೆಲ್ಲ ಪ್ರಸಾದ ರೂಪ ಪಡೆಯುತ್ತದೆ. ಹಾಗಾಗಿ ಗುರುಸ್ಥಾನದ ಮಠಪೀಠ ಆಶ್ರಮಗಳು ಸದಾ ಒಳ್ಳೆ ಕರ‍್ಯಗಳಲ್ಲಿರುವ ನಿಷ್ಕಾಮಕರ್ಮಿ ಸಾಧಕÀರಿಗೆ ರಕ್ಷಾಕವಚವಾಗಿ ನಿಲ್ಲಬೇಕು. ಹಾಗಾದಾಗ ಸಾಧಕರಲ್ಲಿ ಹೆಚ್ಚಿನ ವೈರಾಗ್ಯ, ಆತ್ಮಬಲ, ಆತ್ಮಾನಂದ ಮೂಡುತ್ತದೆ. ಲಾಲಧರಿ ಆಶ್ರಮ ಈ ಪ್ರಶಸ್ತಿಗಳ ಮೂಲಕ ಒಳ್ಳೆಯವರ ಕರ‍್ಯಗಳಿಗೆ ಗುರುಕೃಪೆ, ಗುರುರಕ್ಷಣ ದಯಪಾಲಿಸುತ್ತಿವುದು ಶ್ಲಾಘ್ಯವಾದುದಾಗಿದೆ ಎಂದರು. ಏಕೆಂದರೆ ಲಾಲಧರಿ ಶ್ರೀಗಳು ದೈವಿಪುರುಷರಾಗಿ ಈ ಬಾಗದಲ್ಲಿ ಜನಾನುರಾಗಿಯಾಗಿದ್ದಾರೆ. ಅವರ ಕೃಪೆಗೆ ಪಾತ್ರರಾದವರು ಮಹತ್ತರವಾದುದನ್ನು ಸಾಧಿಸಿದ್ದಾರೆ. ಅವರ ಕೃಪೆ ಈಗ ಈ ಪ್ರಶಸ್ತಿ ರೂಪದಲ್ಲಿ ಹರಿದುಬರುತ್ತಿದೆ. ಹಾಗಾಗಿ ಈ ಪ್ರಶಸ್ತಿ ಪುರಸ್ಕೃತರು ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆಂದು ನಾವು ಆಶಿಸಬಹುದಾಗಿದೆ ಎಂದರು.    ಸದ್ಲಾಪೂರ ಹಿರೇಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಪ್ರಶಸ್ತಿ ವಿತರಿಸಿ ಮಾತನಾಡುತ್ತಾ, ಇವತ್ತು ಒಳ್ಳೆ ಕರ‍್ಯ ಮಾಡುತ್ತಿರುವವರಿಗೆ, ಸ್ವಾರ್ಥಿಗಳಿಂದ, ವಿಕೃತ ಮನಸ್ಸಿನವರಿಂದ, ಕಷ್ಟ ಕಾರ್ಪಣ್ಯಗಳು, ಟೀಕೆ-ಟಿಪ್ಪಣಿಗಳು, ಅಪಹಾಸ್ಯಗಳು, ನಿರಂತರ ಹೆಚ್ಚಾಗುತ್ತಿವೆ. ಹಾಗಾಗಿ ಒಳ್ಳೆಯ ಕರ‍್ಯಗಳಲ್ಲಿರುವ ಸಾಧಕರಿಗೆ ಮನೋಬಲ, ಆತ್ಮಸ್ಥೆöÊರ್ಯ ತುಂಬಿಸುವ ಕರ‍್ಯ ಸಮಾಜದ ಕೆಳಸ್ತರದವರಿಂದ ಹಿಡಿದು ಸಮಾಜದ ಮೇಲಸ್ತರದವರೆಗೂ ನಡೆಯಬೇಕಾಗಿದೆ. ಲಾಲಧರಿ ಆಶ್ರಮದಿಂದ ಒಳ್ಳೆಯವರಿಗೆ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಮಾದರಿಯಾಗಿದೆ ಎಂದರು.       ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ  ಯರಬಾಗದ ಚನ್ನವೀರ ಸ್ವಾಮಿಗಳು ಮಾತನಾಡುತ್ತಾ, ಇವತ್ತು ನಕಾರಾತ್ಮಕತೆ ಮೇಲುಗೈ ಸಾಧಿಸುತ್ತಿದ್ದರಿಂದ ಸಮಾಜದ, ರಾಷ್ಟçದ ಬೆಳವಣಿಗೆ ಕುಂಠಿತವಾಗುತ್ತಿದೆ. ಹಾಗಾಗಿ ಸಂಘ-ಸAಸ್ಥೆಗಳವರು ಸಮಾಜದಲ್ಲಿ ಒಳ್ಳೆ ಕರ‍್ಯಗಳು, ಒಳ್ಳೆ ಚಿಂತನೆಗಳು ಹೆಚ್ಚಿಸುವ ಕರ‍್ಯ ಅವ್ಯಾಹತವಾಗಿ ಮಾಡುತ್ತಿರಬೇಕೆಂದರು.      ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನೀಲಕುಮಾರ ಸ್ವಾಮಿಗಳು ಮಾತನಾಡುತ್ತಾ,  ಲಾಲಧರಿಯಲ್ಲಿ ಸತ್ಯಂ, ಶಿವಂ, ಸುಂದರA ಎನ್ನುವ ಹೆಸರು ಪ್ರಶಸ್ತಿಗಳಿಗೆ ಇಟ್ಟಿರುವುದು ಶಾಸ್ತೊçÃಕ್ತವಾಗಿದೆ. ವೇದ, ಶಾಸ್ತç, ಪುರಾಣ ಆಗಮಗಳಲ್ಲೆ ಭಾರತದ ಸಂಸ್ಕೃತಿ ನೆಲೆನಿಂತಿದೆ. ನವಭಾರತದ ನವಯೋಜನೆಗಳಿಗೆ ಇಂತಹ ಶಾಸ್ತೊçÃಕ್ತ ಹೆಸರಿಟ್ಟರೆ ಅದರ ಫಲಿತಾಂಶ ಒಳ್ಳೆಯದ್ದೇ ಆಗುತ್ತದೆ. ಹಿಂದಿನ ಕಾಲದವರು ಊರಿನ ಮತ್ತು ವ್ಯಕ್ತಿಯ ಹೆಸರು, ಪುರಾಣ ಪ್ರಸಿದ್ಧ ವ್ಯಕ್ತಿಗಳ ಇಲ್ಲವೆ ಪುರಾಣ ಪ್ರಸಿದ್ಧ ಸ್ಥಳಗಳ ಹೆಸರು ಇಡುತ್ತಿದ್ದರು. ಕಾಲಕ್ರಮೇಣ ಆ ಹೆಸರು ಬದಲಾಗಿ ಜನಮಾನಸದಲ್ಲಿ ತಪ್ಪು ಸಂದೇಶ ಹೋಗಿದ್ದನ್ನು ನಾವು ನೋಡಬಹುದಾಗಿದೆ ಎಂದರು.          ಕರ‍್ಯಕ್ರಮದಲ್ಲಿ ಐ.ಎಸ್.ಶಕೀಲ, ಈಶ್ವರ ತಡೋಳಾ, ಶಿವರಾಜ ಮೇತ್ರೆ, ಬಸವರಾಜ ದಯಾಸಾಗರ, ನಾಗರಡ್ಡಿ ಬಯ್ಯಾನ, ಪ್ರಭುರೆಡ್ಡಿ ಕೌಡಾಳೆ, ವಿಠ್ಠಲ್ ಮಕ್ಕೆöÊ, ಸಂಜೀವರೆಡ್ಡಿ ಮೇಲಿನಮನಿ, ರಾಜಕುಮಾರ ಔರಂಗಾಬಾದಕರ್ ಮತ್ತಿತರರು ಇದ್ದರು.

Ghantepatrike kannada daily news Paper

Leave a Reply

error: Content is protected !!