ಬೀದರ್

ಸಂತಪೂರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ 76ನೇ ಸ್ವತಂತ್ರ ದಿನಾಚರಣೆ

76ನೇ ಸ್ವತಂತ್ರ ದಿನಾಚರಣೆಯ ನಿಮಿತ್ತ ಸಂತಪೂರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಗ್ರೂಪ್ ಡಿ ಸಿಬ್ಬಂದಿಗಳಿಗೆ ಕಾಲು ತೊಳೆದು ವಿಶೇಷವಾದ ಸನ್ಮಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ವೈದಾಧಿಕಾರಿಗಳಾದ ಡಾಕ್ಟರ್ ಪ್ರವೀಣ್ ಹೂಗಾರ್ ಇವರು ಮಾತನಾಡಿ ಗ್ರೂಪ್ ಡಿ ಸಿಬ್ಬಂದಿಗಳು ಆಸ್ಪತ್ರೆಯ ಆಧಾರ ಸ್ಥಂಭಗಳಾಗಿದ್ದಾರೆ ಎಂದು ಹೊಗಳಿದರು.

ಕಾಲು ಎಳೆಯುವವರೇ ಹೆಚ್ಚಾಗಿರುವ ಈ ಸಮಾಜದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಗುರುತಿಸಿ ಕಾಲು ತೊಳೆದು ಸನ್ಮಾನಿಸುವಂತಹ ಅಧಿಕಾರಿಗಳನ್ನು ಪಡೆದಂತಹ ನಾವು ಪುಣ್ಯವಂತರು ಎಂದು ಅರುಣಕುಮಾರ್ ಅಂಬಿ ಅವರು ತಮ್ಮ ಅನಿಸಿಕೆ ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ. ರೇಣುಕಾ, ಡಾ. ಸುಮಯ್ಯ ಫಾತಿಮಾ, ಡಾ.ರಾಹುಲ್, ಡಾ.ವಾಜಿದ್, ಡಾಕ್ಟರ್ ಮಹಿಮಾ,ವೈಜಿನಾಥ,ರಾಜಶೇಖರಪ್ಪ,ಶ್ರೀಕಾಂತ,ಸತೀಶಕುಮಾರ,ಗುರುನಾಥ, ಡೇಜಿರಾಣಿ,ಆಶಾಲತಾ,ಸುನಿತಾ,ಟಿ.ಎಮ್.ಮಚ್ಚೆ,ಅಖೀಲ್,ಕಿರಣಕುಮಾರ,ಆಕಾಶ,ಅರುಣಕುಮಾರ,ವಿಜಯ,ಶರಣು,ಶಿವು,ರಾಜು,ದೀಪಕ ಎಲ್ಲ ಸಿಬ್ಬಂದಿಗಳು ಹಾಜರಿದ್ದರು

Ghantepatrike kannada daily news Paper

Leave a Reply

error: Content is protected !!