ಶ್ರೀ ಪಾಂಡುರಗ ಹಾಗೂ ರುಕ್ಮೀಣಿ ಪಲ್ಲಕ್ಕಿ ಮೆರವಣಿಗೆ
ಬೀದರ: ಪ್ರತಿ ವರ್ಷದಂತೆ ಈ ವರ್ಷವು ಬೀದರ ನಗರದ ಶ್ರೀ ಪಾಂಡುರAಗ ದೇವಸ್ಥಾನದಲ್ಲಿ ಯಜ್ಞ ಸಪ್ತಾಹÀ ಅಂಗವಾಗಿ ಇಂದು ಶ್ರೀ ಪಾಂಡುರAಗ ಹಾಗೂ ರುಕ್ಮೀಣಿ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಪ್ರಾರಂಭವಾಗಿ ಸಾಯಂಕಾಲ ಸರಿಯಾಗಿ 6:00 ಗಂಟೆಗೆ ಶಹಾಗಂಜ ದ್ವಾರಕ್ಕೆ( ದಾಮಾಜಿ ಪಂಥ ಅಗಸಿ) ಆಗಮಿಸಿ ಮೊಸರಿನ ಗಡಗಿ(ದಹಿ ಹಂಡಿ) ಒಡೆಯುವ ಕಾರ್ಯಕ್ರಮ ಬಹಳ ವಿಜೃಂಭಣೆಯಿAದ ಆಚರಿಸಲಾಯಿತು.
ಶಾಹಗಂಜ ಕಮಾನದಲ್ಲಿ ಮೊಸರಿನ ಗಡಗಿ(ದಹಿ ಹಂಡಿ) ಒಡೆಯುವ ಮೂಲಕ ಹಾಗೂ ಅಫಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಕ್ತಿಯಿಂದ ಫುಗ್ಗಡಿ ಆಟ ಆಡಿದರು.
ನಂತರ ಮುಖ್ಯ ರಸ್ತೆ, ವಿನಾಯಕ ಚೌಕ, ಚೌಬಾರಾ ಮೂಲಕ ಶ್ರೀ ಪಾಂಡುರAಗ ದೇವಾಸ್ಥನದ ಮುಖ್ಯದ್ವಾರದಲ್ಲಿ ದಹಿ ಹಂಡಿ ಒಡೆಯುವ ಮೂಲಕ ದೇವಸ್ಥಾನದ ಗರ್ಬ ಗುಡಿ ಪ್ರವೇಶಿಸಿತು.
ಭಕ್ತರಿಗಾಗಿ ಸರಕಾರಿ ಬಾಲಕ ಬಾಲಕಿಯರ ಶಾಲಾ ಮೈದಾನದಲ್ಲಿ ಪ್ರಸಾದ ವಿತರಣೆ ಮಾಡಲಾಗಿತ್ತು ಹಾಗೂ ರಾತ್ರಿ ದೇವಸ್ಥಾನದಲ್ಲಿ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಯಿತ್ತು.
ಈ ಸಂದರ್ಭದಲ್ಲಿ ಪಾಂಡುರAಗ ದೇವಸ್ಥಾನ ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಡಿ. ಸಿಂಧೋಲ, ಗೌರವ ಅಧ್ಯಕ್ಷರಾದ ಅಶೋಕ ರೆಜಂತಲ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೋಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ, ಎನ್ ಆರ್ ವರ್ಮಾ, ಈಶ್ವರಸಿಂಗ ಠಾಕೂರ, ನರೇಶ ಗೌಳಿ, ದೇವತರಾಜ ಬಳಗ ಹಾಗೂ ಶ್ರೀ ಪಾಂಡುರAಗ ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಅನೇಕ ಭಕ್ತಾಧಿಗಳು ಪಾಲ್ಗೊಂಡಿದ್ದರು.