ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ವಿಕಲಚೇತನರಿಗೆ ಸಲಕರಣೆ ವಿತರಣೆ
ಬೀದರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಗುರುತಿಸಿ ಸಲಕರಣೆ ಒದಗಿಸುತ್ತಿದ್ದು, ಪ್ರಸುತ್ತ 2023-24ರ ಸಾಲಿನ ಬೀದರ ಜಿಲ್ಲೆ ಬೀದರ ತಾಲೂಕು ಜನವಾಡ ವಲಯದ ಜನವಾಡ ಕಾರ್ಯಕ್ಷೇತ್ರದಲ್ಲಿ ಜನಮಂಗಳ ಪರಿಕರ ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಿ ವಿಕಲಚೇತನರಿಗೆ ಸಹಾಯ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವಿಣಕುಮಾರ್ ಸಲಕರಣೆ ಸಲಕರಣೆ ವಿತರಣೆ ಬಳಿಕ ಪ್ರಕಟಣೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಎಂ.ಐ.ಎಸ್ ಯೋಜನಾಧಿಕಾರಿಗಳು ಶೇಖರ್ ನಾಯ್ಕ್, ಬೀದರ್ ತಾಲ್ಲೂಕಿನ ಯೋಜನಾಧಿಕಾರಿ ಪುನೀತ್ ಓಲೇಕಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೈಜಯಂತಿಬಾಯಿ ನಾಮದೇವ, ಒಕ್ಕೂಟ ಅಧ್ಯಕ್ಷರಾದ ಸುಲೋಚನಾ, ಮಹಾದೇವಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳಾದ ಸರಸ್ವತಿ, ಸೇವಾ ಪ್ರತಿನಿಧಿಗಳಾದ ಅನುಸೂಯ, ಪ್ರತಿಭಾ, ಶಿವಕಾಂತ, ಚುಕ್ಕಮ್ಮ, ರೇಣುಕಾ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. ರೇಹಮತಬೀ ರವರಿಗೆ 5 ವರ್ಷಗಳಿಂದ ನಡೆದಾಡಲು ಅಸಾಧ್ಯವಾಗಿದ್ದು, ಶೌಚಾಲಯ ಉಪಯೋಗಕ್ಕೆ ಇವರಿಗೆ ಗುರುತಿಸಿ ಕಮೋಡ್ ಚಕ್ರ ಕುರ್ಚಿ ಮತ್ತು ಅನಿಲ್ ರವರಿಗೆ 14 ವರ್ಷಗಳಿಂದ ಮಲಗಿದ ಸ್ಥಳದಲ್ಲಿ ಇದ್ದು ವಾಟರ್ ಬೆಡ್ ಹಾಗೂ ರಾಣುಬಾಯಿರವರಿಗೆ ಮಲಗಿದ ಸ್ಥಳದಲ್ಲಿ ಇದ್ದು ಇವರಿಗೂ ಕೂಡ ವಾಟರ್ ಬೆಡ್ ವಿತರಣೆ ಮಾಡಲಾಯಿತು.