ಶ್ರೀ ಕೃಷ್ಣನ ಸಂದೇಶದಿAದ ಆತ್ಮಬಲ, ಆತ್ಮಜ್ಞಾನ, ಆತ್ಮಾನಂದ ಪ್ರಾಪ್ತಿ-ಶ್ರೀಕೃಷ್ಣ ಚೈತನ್ಯದಾಸ ಪ್ರಭು
ಬೀದರ: ಕೃಷ್ಣನ ಅವತಾರ 5 ಸಾವಿರ ವರ್ಷಗಳ ಹಿಂದೆಯಾಗಿದ್ದರೂ ಆತನ ವಿಚಾರಧಾರೆ ಎಂದೆAದಿಗೂ ನಿತ್ಯನೂತನವಾಗಿದೆ. ಏಕೆಂದರೆ, ಧರ್ಮ-ಅಧರ್ಮದ ಮಧ್ಯದ ಸಂಘರ್ಷ ಎಷ್ಟೇ ತಾರರಕ್ಕೇರಿದರೂ, ಅಧರ್ಮದ ಪಕ್ಷದಲ್ಲಿ ಎಷ್ಟೇ ಘಟಾನುಘಟಿಗಳಿದ್ದರೂ ಅವರು ಎಷ್ಟೇ ಷಡ್ಯಂತ್ರ ರಚಿಸಿದರೂ ಅಂತಿಮ ಜಯ ಧರ್ಮದ್ದೇ ಆಗುವುದು ನಿಶ್ಚಿತ ಎಂಬುದನ್ನು ಶ್ರೀಕೃಷ್ಣ ಮಹಾಭಾರತದಲ್ಲಿ ನಿಖರವಾಗಿ ತೋರ್ಪಡಿಸಿದ್ದಾನೆ. ಕೃಷ್ಣನು ಒಳ್ಳೆಯವರ ಮೊರೆ ಕೇಳುತ್ತಾನೆ, ಒಳ್ಳೆಯವರನ್ನು ಕಾಪಾಡಲು ಸದಾ ಸಿದ್ಧನಿರುತ್ತಾನೆ, ಒಳ್ಳೆಯವರಿಗೆ ಸದಾ ಆತ್ಮಬಲ, ಆತ್ಮಜ್ಞಾನ, ಆತ್ಮಾನಂದ ನೀಡುತ್ತಿರುತ್ತಾನೆ ಎಂದು ಸಿಕಿಂದ್ರಾಬಾದನ ಇಸ್ಕಾನ್ ಪ್ರಮುಖ ಸಾಧಕರಾದ ಶ್ರೀ ಚೈತನ್ಯದಾಸ ಪ್ರಭು ರವರು ಹೇಳಿದರು. ಅವರು ಬೀದರ ಚಿಕಪೇಟ್ ಹತ್ತಿರದ ಜಗನ್ನಾಥ ಮಂದಿರ ನಿಲಾಚಲ ಧಾಮದಲ್ಲಿ ಹಮ್ಮಿಕೊಂಡ ಕೃಷ್ಣಾ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವಿತ್ತು ಹೇಳಿದರು.
ಮುಂದುವರೆದು ಈ ಕಾಲದಲ್ಲೂ ಕೇಡಿನ ಕೆಲಸಗಳು ಬಹಳಷ್ಟು ನಡೆಯುತ್ತಿವೆ, ಶಾಸ್ತç ಸಮ್ಮತವಾಗಿರುವವರನ್ನು ಸಂಪ್ರದಾಯಬದ್ಧರಾಗಿರುವವರನ್ನು ಸದಾ ನಿಂದಿಸುವುದನ್ನು ಕೆಲವರು ಕಾಯಕವಾಗಿಸಿಕೊಂಡಿದ್ದಾರೆ. ಇಂದಿನ ಇಂತಹ ಬಹುತೇಕ ನಿಂದನೆಗಳು ವಾಸ್ತವಾಂಶ ಮರೆಮಾಚುವಂಥವುಗಳಾಗಿದ್ದು, ಸ್ವಾರ್ಥದಾಸೆಯಿಂದ ಕೂಡಿರುವುದರಿಂದ ಅವನ್ನು ಒರೆಗೆ ಹಚ್ಚಿ ನೋಡದೇ ಒಪ್ಪಿಕೊಳ್ಳಬಾರದೆಂದರು.
ಶ್ರೀ ಕೃಷ್ಣ ಜೀವನದುದ್ದಕ್ಕೂ ಗೋವಿನ ಜೊತೆಗೆಯೇ ಇರುತ್ತಿದ್ದ ಆತನ ಎಲ್ಲಾ ಭಾವಚಿತ್ರಗಳಲ್ಲೂ ಹಸನ್ಮುಖಿಯಾದ ಗೋವಿರುವುದನ್ನು ನಾವು ಈಗಲೂ ಕಾಣಬಹುದಾಗಿದೆ. ಅಂದರೆ ಗೋವಿನ ಜೊತೆ ನಾವಿದ್ದರೆ ನಮ್ಮ ಬದುಕು ಸಮೃದ್ಧವಾಗುತ್ತದೆ. ಹಾಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ
ಮಾತೆಯ ಸ್ಥಾನ ಮಾನ ನೀಡಲಾಗಿದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ನಾವು ಗೋವುಗಳ ಜೊತೆಗಿರದೇ ನಾಯಿಗಳ ಜೊತೆಗಿದ್ದು, ನಮ್ಮ ಜೀವನ ನಾಯಿ ಪಾಡಿನಂತಾಗಿಸಿಕೊಳ್ಳುತ್ತಿದ್ದೇವೆ ಎಂದರು.
ಕೇಡಿಗಳು ಎಷ್ಟೇ ಮೆರೆದಾಡಿದರೂ ಕೊನೆಗೆ ಅವರ ದಾರುಣ ಅಂತ್ಯ ಶತಸಿದ್ಧ ಎಂದು ಶ್ರೀಕೃಷ್ಣ ತೋರ್ಪಡಿಸಿದ್ದಾನೆ. ಶ್ರೀಕೃಷ್ಣನ ಅಭಯ ಮತ್ತು ಪ್ರೇರಣೆ ಈ ಜೀವ ಜಗತ್ತು ಇರುವವರೆಗೂ ಒಳ್ಳೆಯದಕ್ಕೆ ಸಿಗಲಿದೆ. ಅರ್ಜುನನು ತನಗೆಷ್ಟೇ ಅಡ್ಡಿ ಆತಂಕಗಳು, ವಿಘ್ನಗಳು ಎದುರಾದರೂ ಶ್ರೀಕೃಷ್ಣನೊಂದಿಗೆ ಅಚಲವಾಗಿ ನಿಂತಿದ್ದರಿAದಲೇ ಆತನಿಗೆ ಜಯಪ್ರಾಪ್ತವಾಯಿತು. ಹಾಗಾಗಿ ನಾವೂ ಕೂಡ ಕೃಷ್ಣನೊಂದಿಗೆ ಅಚಲವಾಗಿ ನಿಂತರೆ, ಜೀವನದಲ್ಲಿ ಖಂಡಿತ ಯಶಸ್ಸು ಗಳಿಸಲು ಸಾಧ್ಯವಿದೆ. ಇತಿಹಾಸದಲ್ಲಿನ ಮಹಾತ್ಮಿಕರ ಜೀವನ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಧರ್ಮದ ಪಕ್ಷವಹಿಸಿದರೆ ಅಧರ್ಮಿಯರ ನಿರಂತರ ಕಿರುಕುಳ ಎದುರಿಸಬೇಕಾಗುತ್ತದೆ, ಶ್ರೀರಾಮ ಮತ್ತು ಶ್ರೀ ಕೃಷ್ಣ ರಾಜರಾಗಿದ್ದರೂ ಕೂಡ ಎಲ್ಲರಿಗಿಂತ ಹೆಚ್ಚಾಗಿ
ಕಷ್ಟ-ನಷ್ಟವನ್ನು ಅನುಭವಿಸಿದರು. ಹಾಗಾಗಿ ಕಷ್ಟ-ನಷ್ಟ ಸಹಿಸುವುದು ಧರ್ಮದ ಮಾರ್ಗದವರ ಕರ್ತವ್ಯವಾಗಿದೆ ಎಂದರು.
ಕೃಷ್ಣನ ಜನ್ಮ ಕಾರಾಗೃಹದಲ್ಲಿ ಅದು ಭಯಾನಕ ಸನ್ನಿವೇಶದಲ್ಲಿ ಆಗುತ್ತದೆ, ಆತನಿಗೆ ಕೊಲೆಯಾಗಿಸಬೇಕೆಂದೇ ಅಸುರರು ನಿತ್ಯ ಜಾಲ ಬೀಸುತ್ತಿರುತ್ತಾರೆ. ಅಸುರರು ತಮ್ಮೆಲ್ಲ ಶಕ್ತಿ, ಜ್ಞಾನ, ವರದಾನಗಳನ್ನು ಉಪಯೋಗಿಸಿ, ಕೃಷ್ಣನನ್ನು ಕೊಲ್ಲಬೇಕೆಂದರೂ ಕೃಷ್ಣ ತನ್ನ ಚತುರೋಪಾದಿ ಬಳಸಿ, ಅವನ್ನು ನಿಸ್ಫಲಗೊಳಿಸಿದ. ಅವರ ಕುಜ್ಞಾನ, ಕುಶಕ್ತಿ ಅವರಿಗೆಯೇ ಮುಳುವಾಗುವಂತೆ ನೋಡಿಕೊಂಡ ಎಂದರು.
ಕೃಷ್ಣನನ್ನು ವಿರಾಟ್‌ರೂಪಿ ಅನಂತಶಯನ ಎಂತಲೂ ಕರೆಯುತ್ತಾರೆ. ಆತ ಬ್ರಹ್ಮಾಂಡಷ್ಟಕ್ಕೇ ಅಲ್ಲ ಇಡೀ ಗ್ಯಾಲಕ್ಸಿಗೆಯೇ ಒಡೆಯನಾಗಿದ್ದಾನೆ. ಹಾಗಾಗಿ ಸಿನಿಮಾದಲ್ಲಿ, ಕ್ರೀಡೆಗಳಲ್ಲಿ, ಬಿಗ್‌ಬಾಸ್‌ಗಳಲ್ಲಿ ಬರುವ ಸೂಪರ್‌ಮ್ಯಾನ್‌ಗಳನ್ನು ನಾವು ಎಷ್ಟೇ ಅತೀ ರಂಜಿತವಾಗಿ ನೋಡಿದರೂ ಕೃಷ್ಣನೆದುರು ಅವರೆಲ್ಲ ಸಣ್ಣವರು ಎಂದರು. ಕೃಷ್ಣ ಎಲ್ಲರಿಗೂ ನ್ಯಾಯ ಒದಗಿಸಿದ ಮತ್ತು ಎಲ್ಲರ ತಪ್ಪುಗಳನ್ನು ಅವರ ಅರಿವಿಗೆ ತಂದ, ಇಂದಿನ ಜ್ಞಾನಿಗಳು ಇಂತಹ ಕಾರ್ಯ ವ್ಯಾಪಕವಾಗಿ ಮಾಡಬೇಕಾಗಿದೆ ಎಂದರು. ಕೃಷ್ಣ ಅಂದೇ ಸ್ತಿçÃಯರಿಗೆ ಸಬಲೀಕರಣಗೊಳಿಸಿದ್ದ, ಸ್ತಿçÃಯರಿಗೆ ದಿವ್ಯಶಕ್ತಿ ಇತ್ತು, ಅವರಿಂದಲೇ ಕೆಲ ಅಸುರರನ್ನು ವಧೆ ಮಾಡಿಸಿದ ಮತ್ತು ಅವರ ಯೋಗಕ್ಷೇಮ ನೋಡಿಕೊಂಡು ಸಬಲರನ್ನಾಗಿಸಿದ ಎಂದರು.
ಜರಾಸಂಧ ತನ್ನೊಡನೆ 18 ಸಲ ಯುದ್ಧ ಮಾಡಿದರೂ ಕೃಷ್ಣ ಅವನಿಗೆ ಕೊಲ್ಲಲಿಲ್ಲ. ಏಕೆಂದರೆ, ಎಲ್ಲಾ ಅಸುರರನ್ನು ಆತ ಯುದ್ಧಕ್ಕೆ ನಿರಂತರ ಕರೆತರುತ್ತಿರಲಿ ಎಂಬ ಉದ್ದೇಶ ಅವನದಾಗಿತ್ತು. ಎಲ್ಲಾ ಅಸುರರನ್ನು ನಿರ್ಮೂಲನೆಗೊಳಿಸಿಯೇ ಆತ ತಾರಕಾಸೂರನನ್ನು ವಧಿಸಿದ. ಹೀಗೆ ಕೃಷ್ಣನ ಚತುರೋಪಾದಿಗಳಲ್ಲಿ ನಮಗೆ ಜೀವನದ ಪಾಠ ಸಿಗುತ್ತದೆ ಎಂದರು.
ಕೃಷ್ಣ ದೇವತೆಗಳ ತಪ್ಪು ಮನ್ನಿಸಲಿಲ್ಲ, ಅವರಿಗೆ ಅದಕ್ಕಾಗಿ ಪ್ರಾಯಶ್ಚಿತ ಒದಗಿಸಿದ. ತನ್ನ ತಪ್ಪುಗಳಿಗೂ ಪ್ರಾಯಶ್ಚಿತ ಹೊಂದಿದ. ಹಾಗಾಗಿ ಆತ ಕರ್ಮ ಸಿದ್ಧಾಂತ ಚಿರನೂತನಗೊಳಿಸಿದ ಎಂದರು. ರಾಮ ಕೃಷ್ಣರು ಆದರ್ಶದ ಪ್ರತಿರೂಪವಾಗಿದ್ದಾರೆ. ಅದಕ್ಕಾಗಿ “ಹರೆ ರಾಮ ಹರೇ ಕೃಷ್ಣ” ಮಹಾಮಂತ್ರ ಈ ಕಲಿಯುಗಕ್ಕೆ ಸಂಜೀವಿನಿಯಾಗಿದೆ. ಇದು ಸಂಕಟಹರಣವಾಗಿಸುತ್ತದೆ. ಅದಕ್ಕಾಗಿಯೇ ಪ್ರಭುಪಾದರು, ಚೈತನ್ಯರು ಇದಕ್ಕೆ ಪ್ರಾಶಸ್ತö್ಯವನ್ನಿತ್ತಿದ್ದಾರೆ. ಇಸ್ಕಾನ್‌ನ ಉದ್ದೇಶ ಕೃಷ್ಣಭಕ್ತಿ ಪಸರಿಸುವುದೇ ಆಗಿದೆ. ಕೃಷ್ಣಶಕ್ತಿ ಪ್ರವೇಶವಾದ ಕಡೆ ಅಸುರ ಶಕ್ತಿ ತಾನಾಗಿಯೇ ನಾಶಗೊಳ್ಳುತ್ತದೆ ಎಂದರು.
ಭಾರತ ಸಂಸ್ಕೃತಿ ನವಧಾಭಕ್ತಿ ಜಾಗೃತಗೊಳಿಸುತ್ತದೆ. ಹಾಗಾಗಿ ಭಾರತ ಸಂಸ್ಕೃತಿ ಪ್ರವೇಶಿಸಿದೆಡೆ ಸುಭೀಕ್ಷೆ ಮತ್ತು ಸುಜ್ಞಾನ ಆರಂಭವಾಗುತ್ತದೆ. ಭಾರತ ಸಂಸ್ಕೃತಿಯAತೆ ನಡೆದರೆ ಜಗತ್ತು ಮಂಗಲಮಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿವರಾಮ ಜೋಶಿ, ಡಾ. ನಿಲೇಶ ದೇಶಮುಖ, ಕವಿರಾಜ ಹಲಮಡಗಿ, ಗಿರಿಶ ಕುಲಕರ್ಣಿ, ರಾಜಕುಮಾರ ಅಳ್ಳೆ, ರಾಮಕಿಶನ ಕಾಲೇಕರ್, ಸಾಯಿನಾಥ ವಿಶ್ವಕರ್ಮ, ಬಸವಚೇತನ, ಪವನಕುಮಾರ, ಸತ್ಯಾನಂದ ಪ್ರಭು, ಸಂಧ್ಯಾ ಜೋಶಿ, ನಮ್ರತಾ ದೇಶಮುಖ, ಅರುಣಾ ಅಳ್ಳೆ, ಸಪ್ನಾ ಹಲಮಡಗಿ, ರಾಮಕೃಷ್ಣನ್ ಸಾಳೆ ಮತ್ತೀತರರು ಉಪಸ್ಥಿತರಿದ್ದರು.