ಶ್ರಮಿಕರಿಗೆ ಪ್ರೋತ್ಸಾಹಿಸುವ ಬಜೇಟ್ ಇದಾಗಿದೆ: ಭಗವಂತ ಖೂಬಾ
ವಿಶ್ವ ಮೆಚ್ಚಿದ ನಾಯಕರಾದ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಮಾರ್ಗದರ್ಶನದಲ್ಲಿ, ಶ್ರೇಷ್ಠ ಭಾರತದ ದೃಷ್ಟಿಕೊನದಿಂದ ವಿತ್ತ ಸಚಿವೆ ನಿರ್ಮಲಾ ಸಿತಾರಾಮನರವರು ಇಂದು ಮಂಡಿಸಿರುವ ಬಜೇಟ್ ವಿಕಸಿತ ಭಾರತಕ್ಕೆ ಕಾಯಕಲ್ಪ ಕೊಡುವ ಬಜೇಟ್ ಆಗಿರುತ್ತದೆ, ದೇಶದ ರೈತರ, ಮಹಿಳೆಯರ, ಯುವಕರ ಎಲ್ಲರ ಏಳಿಗೆಗೆ ಮುಂದಿನ ೫ ವರ್ಷಗಳಲ್ಲಿ ಮಾಡಬಹುದಾದ ಕೆಲಸಗಳ ನೀಲಿನಕ್ಷೆಯ ಬಜೇಟ ಇದಾಗಿದೆ, ರೈತರ ಬೆಳೆಗಳ ಜೊತೆಗೆ ತರಕಾರಿ ಬೆಳೆಗೆ ಒತ್ತು, ೧೦೦೦ ಹೊಸ ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ ಮತ್ತು ೧ ಕೋಟಿ ಯುವಕರಿಗೆ ಇಂಟರ್ನಶೀಪ್ ನೀಡಿ ಕೌಶಲ್ಯಾಭಿವೃದ್ದಿಗೊಳಿಸಿ ಯುವಕರ ಉದ್ಯೋಗಕ್ಕೆ ಸಹಾಯವಾಗಲಿದೆ.
ಪ್ರತಿ ಮನೆಗೆ ಉದ್ಯಮಿಯನ್ನು ನಿರ್ಮಿಸುವ ಉದ್ದೇಶದಿಂದ ಮುದ್ರಾ ಯೋಜನೆಯ ಮಿತಿ ೧೦ ರಿಂದ ೨೦ ಲಕ್ಷ ಏರಿಕೆ ಮಾಡಲಾಗಿದೆ, ಇದರಿಂದ ಎಮ್.ಎಸ್.ಎಮ್.ಈಗಳಿಗೂ ಹೆಚ್ಚಿನ ಬಲ ಬರಲಿದೆ, ಮುಂದಿನ ದಿನಗಳಲ್ಲಿ ಭಾರತವು ಮ್ಯಾನುಫ್ಯಾಕ್ಚರಿಂಗ್ ಗ್ಲೋಬಲ್ ಹಬ್ ಮಾಡುವ ಕಲ್ಪನೆ ಐತಿಹಾಸಿಕವಾಗಿದ್ದು. ಮಧ್ಯಮವರ್ಗದವರಿಗೂ ಹೊರೆಯಾಗದಂತೆ ತೆರಿಗೆಯಲ್ಲಿ ಬದಲಾವಣೆ ಮಾಡಿರುವುದು ಸ್ವಾಗತಾರ್ಹ,
ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವುದು, ಸೋಲಾರ್ ಶಕ್ತಿಗೆ ಒತ್ತು ನೀಡಿ, ಸೋಲಾರ್ ಪ್ಯಾನೇಲ್ಗಳ ದರ ಇಳಿಕೆ, ಆರೋಗ್ಯ ಕಾಳಜಿ, ಗ್ರಾಮ,ನಗರಗಳ ಅಭಿವೃದ್ದಿಗೆ ವಿಶೇಷ ಅನುದಾನ ನೀಡುತ್ತಿರುವುದು ನವಭಾರತಕ್ಕೆ ಸಾಕ್ಷಿಯಾಗಲಿದೆ. ಐತಿಹಾಸಿಕ ಬಜೇಟ್ ನೀಡಿರುವ ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಮತ್ತು ವಿತ್ತಸಚಿವೆ ನಿರ್ಮಲಾ ಸೀತಾರಾಮನವರಿಗೆ ಧನ್ಯವಾದಗಳು.