ಬೀದರ್

ಶ್ರದ್ದೆ ಹಾಗೂ ಪ್ರಾಮಾಣಿ ಕತೆಯಿಂದ ಮಾಡುವ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕೇ ಸಿಗುತ್ತದೆ….. ಡಾ. ಎಂ. ಕೆ. ತಾಂದಳೆ

ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್‌ರಾಗಿ ನೇಮಕಗೊಂಡಿರುವ ಡಾ. ಎಂ. ಕೆ. ತಾಂದಳೆಯವರಿಗೆ ಗೌರವ ಸನ್ಮಾನ

ಬೀದರ: ಸರ್ಕಾರಿ ಸೇವೆಯಾಗಿರಲಿ, ಖಾಸಗಿ ನೌಕರಿ ಆಗಿರಲಿ ಅಥವಾ ಇನ್ನಾವುದೇ ಉದ್ಯೋಗವಾಗಿರಲಿ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ದುಡಿದರೆ, ಸರಕಾರ / ಸಂಬAಧಿತ ಅಧಿಕಾರಿಗಳು ಹಾಗೂ ಸಮಾಜವು ನಮ್ಮನ್ನು ಪ್ರೋತ್ಸಾಹಿಸುತ್ತದೆ ಎಂದು ಬೀದರ್ ಪಶು ವೈದ್ಯಕೀಯ ಮಹಾವಿದ್ಯಾಲಯದ ನೂತನ ಡೀನ್‌ರವರಾದ ಡಾಕ್ಟರ ಎಂ.ಕೆ. ತಾಂದಳೆಯವರು ಅಭಿಪ್ರಾಯ ಪಟ್ಟರು.
ಮಹಾವಿದ್ಯಾಲಯದಲ್ಲಿ ನೂತನವಾಗಿ ಡೀನ್‌ರಾಗಿ ನೇಮಕವಾಗಿರುವ ಪ್ರಯುಕ್ತ, ತಮ್ಮ ಬೀದರ ನಲ್ಲಿರುವ ಶಿವನಗರ (ಉತ್ತರ) ನಿವಾಸದಲ್ಲಿ, ಜೈಹಿಂದ್ ಹಿರಿಯ ನಾಗರಿಕರ ಸಂಘ ಹಾಗೂ ಯೋಗ ತಂಡಗಳ ವತಿಯಿಂದ, ನೀಡಲಾದ ಗೌರವ ಸನ್ಮಾನದಲ್ಲಿ ಅವರು ಮಾತನಾಡು ತ್ತಿದ್ದರು. ಮುಂದುವರೆದು ಮಾತನಾಡಿ, ಯಾವ ಹುದ್ದೆಯಾದರೂ ಆಗಿರಲಿ, ನಿಸ್ವಾರ್ಥದಿಂದ ಕಠಿಣ ಪರಿಶ್ರಮಮಾಡಿದರೆ ಯಶಸ್ಸು ಸಾಧಿಸುವುದು ಗ್ಯಾರಂಟಿ ಎಂದು ನುಡಿದರು.
ಜೈ ಹಿಂದ್ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನರವರು ಮಾತನಾಡಿ, ಶಿಕ್ಷಕರ ಮಗನಾಗಿರುವ ತಾಂದಳೆಯವರು, ಬೀದರ ಪ.ವೈ ಮಹಾವಿದ್ಯಾಲಯದಲ್ಲಿ 1994 ರಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಗೊಂಡು, ವಿಶ್ವವಿದ್ಯಾಲದ ಆದೇಶಗಳನ್ವಯ, ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ, ಯಶಸ್ವಿ ಶಿಕ್ಷಕ ಹಾಗೂ ಆಡಳಿತಗಾರನೆಂಬ ಖ್ಯಾತಿ ಪಡೆದಿರುವುದರಿಂದ ಇಂದು ಅವರನ್ನು ವಿಶ್ವವಿದ್ಯಾಲಯವು, ಮಹಾವಿದ್ಯಾಲಯದ ಡೀನ್‌ರನ್ನಾಗಿ ನೇಮಕ ಮಾಡಿರುವುದು ಸ್ತುತ್ಯಾರ್ಹವಾಗಿದೆ ಎಂದರು. ತಾಂದಳೆ ಯವರ ಮೃದು ಭಾಷಿ ಸ್ವಭಾವ ಹಾಗೂ ಕರ್ತವ್ಯ ನಿಷ್ಠೆಯನ್ನು ಅವರು ಶ್ಲಾಘಿಸಿದರು.ಸಂಘದ ಅಧ್ಯಕ್ಷ ರಾಮಕೃಷ್ಣ ಮುನಿ ಗ್ಯಾಲ, ಕೋಶಾಧ್ಯಕ್ಛ ಗಂಗಪ್ಪ ಸಾವಳೆ, ಮಲ್ಲಿಕಾರ್ಜುನ ಪಾಟೀಲ, ಕಿಶನರಾವ, ಸುಗಂದಾಬಾಯಿ ತಾಂದಳೆ ಮುಂತಾದವರು ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!