ಶಿಕ್ಷಕರಲ್ಲಿ ಕ್ಷಮತೆ ಇರಲಿ – ಕಿರಣಕುಮಾರ
ಭಾಲ್ಕಿ: ಶಿಕ್ಷಕರಲ್ಲಿ ಕ್ಷಮತೆ ಇರಬೇಕು. ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಪಾಠ ಮಾಡಬೇಕು ಎಂದು ಮುಖ್ಯಶಿಕ್ಷಕ ಕಿರಣಕುಮಾರ ಭಾಟಸಾಂಗವಿ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ಷಮಾಗುಣ ಉಳ್ಳವವನೆ ನೀಜವಾದ ಶಿಕ್ಷಕ, ಶಿಕ್ಷಕ ವೃತ್ತಿಯಲ್ಲಿ ಕ್ರಿಯಾಶೀಲತೆ ಇರಬೇಕು. ಮಕ್ಕಳಿಗೆ ಏನಾದರೂ ಹೊಸದನ್ನು ಕೊಡುವ ಹುಮ್ಮಸ್ಸು ಇರಬೇಕು. ಸರ್ವಪಲ್ಲಿ ಡಾ| ರಾಧಾಕೃಷ್ಣರಂತೆ ಸದಾಕಾಲ ಮಕ್ಕಳ ಮನಸ್ಸಿನಲ್ಲಿ ಉಳಿಯುವ ಶಿಕ್ಷಕರಾಗಬೇಕು ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕಿ ಶೋಭಾ ಮಾಸಿಮಾಡೆ ಪ್ರಾಸ್ತಾವಿವಕಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಕುಮಾರ ವಾಡಿಕರ, ವಿಜಯಕುಮಾರ ಗುತ್ತೆದಾರ ಬಾಜೋಳಗಾ, ಓಂ ಝೇಡ್ ಬಿರಾದಾರ, ಪ್ರವೀಣ ಸಿಂಧೆ, ಆರತಿ ಥಮಕೆ, ಆನಂದ ಖಂಡಗೊಂಡ ಉಪಸ್ಥಿತರಿದ್ದರು.
ಪ್ರದೀಪ ಜೊಳದಪಕೆ ಸ್ವಾಗತಿಸಿದರು. ಶಿವಾನಂದ ಕೃಷ್ಣಪ್ಪ ನಿರೂಪಿಸಿದರು. ಪ್ರವೀಣ ವಂದಿಸಿದರು.