ಶಾಸಕ ಪ್ರಭು ಚವ್ಹಾಣರಿಂದ ರೋಗಿಯ ಆರೋಗ್ಯ ವಿಚಾರಣೆ
ರಸ್ತೆ ಅಪಘಾತಕ್ಕೆ ಸಿಲುಕಿ ಬೀದರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಔರಾದ(ಬಿ) ತಾಲ್ಲೂಕಿನ ಎಕಲಾರ ಗ್ರಾಮದ ಸುದಾಮ್ ಮಾಣೀಕ ಹಾಗೂ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಖೇಡ್ ಗ್ರಾಮದ ಹಿರಿಯರಾದ ವೈಜಿನಾಥ ಬಿರಾದಾರ ಅವರನ್ನು ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಭಾನುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ನಾನು ನಿಮ್ಮ ಕುಟುಂಬದ ಜೊತೆಗಿದ್ದೇನೆ. ಯಾವುದೇ ಕಾರಣಕ್ಕೂ ಧೈರ್ಯಗುಂದಬಾರದು. ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ನಾನು ಸದಾ ಸಿದ್ದನಿದ್ದೇನೆ ಎಂದು ಕುಟುಂಬಸ್ಥರಲ್ಲಿ ಧೈರ್ಯ ತುಂಬಿದರು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ಸೂಚನೆ ನೀಡಿದರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಪ್ರವೀಣ ಕಾರಬಾರಿ, ಸಚಿನ್ ರಾಠೋಡ್, ಸಚಿನ್ ಬಿರಾದಾರ, ಬಾಲಾಜಿ ಬಿರಾದಾರ, ಬಾಲಾಜಿ ವಾಗಮೋರೆ, ಭರತ ಕದಂ, ಹಾಗೂ ಇತರರು ಉಪಸ್ಥಿತರಿದ್ದರು.
ಮನ್ ಕೀ ಬಾತ್ ವೀಕ್ಷಣೆ: ಶಾಸಕರು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ನೇರಪ್ರಸಾರ ಕಾರ್ಯಕ್ರಮವನ್ನು ಭಾನುವಾರ ಬೋಂತಿ ತಾಂಡಾದಲ್ಲಿ ಬೂತ್ ಅಧ್ಯಕ್ಷರಾದ ವಸಂತ ರಾಠೋಡ್ ಅವರ ಮನೆಯಲ್ಲಿ ವೀಕ್ಷಣೆ ಮಾಡಿದರು. ಈ ವೇಳೆ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.