ಬೀದರ್

ಶಾಲಾ, ಕಾಲೇಜು ವಾಹನ ಸುಸ್ಥಿತಿಯಲ್ಲಿಡಿ: RTO ಮುರುಗೇಂದ್ರ ಬಿ. ಶೀರೋಳಕರ್

ಆಟೋ ಸೇರಿದಂತೆ ಶಾಲಾ, ಕಾಲೇಜು ವಾಹನಗಳನ್ನು ಸುಸ್ಥಿತಿಯಲ್ಲಿ ಇಡಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶೀರೋಳಕರ್ ಅವರು ಶಾಲಾ, ಕಾಲೇಜುಗಳಿಗೆ ಸೂಚಿಸಿದ್ದಾರೆ. ಶಾಲಾ ವಾಹನದ ದಾಖಲಾತಿಗಳನ್ನು ಇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ವಾಹನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರಬೇಕು. ಜಿಪಿಎಸ್ ಅಳವಡಿಸಿರಬೇಕು. ಪ್ರಥಮ ಚಿಕಿತ್ಸೆ ಬಾಕ್ಸ್ ಅಳವಡಿಸಬೇಕು. ಎಮರ್ಜೆನ್ಸಿ ಎಕ್ಸಿಟ್ ಡೋರ್ ಇರಬೇಕು. ರೆಟ್ರೋ ರೆಫ್ಲೆಕ್ಟರ್ ಇರಬೇಕು. ಫಿಟ್‍ನೆಟ್ ಪ್ರಮಾಣ ಪತ್ರವಿರಬೇಕು. ವಿಮೆ ಪತ್ರ ಹೊಂದಿರಬೇಕು.ಎಮಿಶನ್ ಪ್ರಮಾಣ ಪತ್ರವಿರಬೇಕು.ಶಾಲೆ ಅನುಮತಿ ಪ್ರಮಾಣ ಪತ್ರವಿರಬೇಕು. ಸೀಟುಗಳು ಕಂಫರ್ಟ್ ಆಗಿರಬೇಕು. ಡ್ರೈವರ್ ಲೈಸೆನ್ಸ್ ಹೊಂದಿರಬೇಕು. ಎಲ್ಲ ದಾಖಲಾತಿಗಳ ಜತೆಗೆ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಹಾಗೂ ಶಾಲಾ ವಾಹನದಲ್ಲಿ ಹೆಣ್ಣು ಮಕ್ಕಳು ಪ್ರಯಾಣಿಸುತ್ತಿದ್ದರೆ ವಾಹನಗಳಲ್ಲಿ ಮಹಿಳಾ ನಿರ್ವಾಹಕಿಯರನ್ನು ಕಡ್ಡಾಯವಾಗಿ ಇರಿಸಬೇಕು. 15 ವರ್ಷಗಳ ನಂತರ ಶಾಲಾ ವಾಹನಗಳು ಓಡಿಸುವಂತಿಲ್ಲ. ಆದ್ದರಿಂದ ಒಂದು ವಾರದಲ್ಲಿ ಈ ಎಲ್ಲವನ್ನೂ ಸರಿಪಡಿಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೆರಿಗೆ ವಾಹನಗಳ ನೋಂದಣಿ ಸಂಖ್ಯೆ ಸಹಿತಿ ವರದಿ ಸಲ್ಲಿಸಬೇಕು ಎಂದು ಆರ್‍ಟಿಒ ನಿರ್ದೇಶನ ನೀಡಿದ್ದಾರೆ. ಇದನ್ನು ತಪ್ಪಿದ್ದಲ್ಲಿ ಸಿಎಂವಿ ಆಕ್ಟ್ 1988 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಜತೆಗೆ ತಮ್ಮ ಶಾಲಾ ಕಾಲೇಜಿನ ಎಲ್ಲ ವಾಹನಗಳ ನಂಬರ್‍ಗಳನ್ನು ನಮೂದಿಸಿ, ಕಚೇರಿಗೆ ಒಂದು ವಾರದ ಒಳಗಾಗಿ ದೃಢೀಕರಣ ಪತ್ರ ನೀಡಲು ಸೂಚಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!