ವ್ಯಾಪಾರಸ್ಥರು ತಮ್ಮ ಅಧಿಕೃತ ಸ್ಥಳದಲ್ಲಿ ವ್ಯಾಪಾರ ಮಾಡಲು ಸೂಚನೆ
ಬೀದರ. ಜೂನ್. 27 :- ಕೆಲವೊಂದು ವ್ಯಾಪಾರಸ್ಥರು ಪುಟ್ ಪಾತ್ ಮೇಲೆ 24*7 ಮಾದರಿಯಲ್ಲಿ ಶೇಡ್ ನಿರ್ಮಿಸಿಕೊಂಡು ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕಾರಣ ತಳ್ಳುವ ಬಂಡಿಗಳ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ತಳ್ಳುಬಂಡಿಗಳಲ್ಲಿ ವ್ಯಾಪಾರ ಮಾಡಬಹುದಾಗಿದೆ. ಪುಟ ಪಾತಗಳ ಮೇಲೆ ಖಾಯಂ ಆಗಿ ಶೇಡ್ಗಳನ್ನು ನಿರ್ಮಿಸಿರುವರು ತಳ್ಳಬಂಡಿಗಳನ್ನು ಇಟ್ಟಿಕೊಂಡು ವ್ಯಾಪಾರ ಮಾಡಬಹುದಾಗಿದೆ. ಆದರೆ ಫೂಟ್ ಪಾತ್ಗಳ ಮೇಲೆ ಖಾಯಂ ಆಗಿ ಶೇಡ್ಗಳನ್ನು ನಿರ್ಮಿಸಿ ವ್ಯಾಪಾರ ಮಾಡುವುದು ಕಾನೂನುಬಾಹಿರ ಇರುತ್ತದೆ. ಅಂತಹವರು ಕೂಡಲೇ ಶೆಡ್ಡುಗಳನ್ನು ತಾವಾಗಿಯೇ 24 ಗಂಟೆಗಳ ಒಳಗಡೆ ತೆರವುಗೊಳಿಸಲು ಸೂಚಿಸದೆ. ಇಲ್ಲದಿದ್ದಲ್ಲಿ ನಗರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.