ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಶ್ರೀಮತಿ ಸುಲೋಚನಾ ನೇಮಕ.
ಬೀದರ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷರಾದ ಕೆ.ಪಿ. ನಂಜುAಡಿ ಇವರ ಆದೇಶದ ಮೇರೆಗೆ ದಿನಾಂಕ: 03-09-2024 ರಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಸುಲೋಚನಾ ವಿಶ್ವಕರ್ಮ ಅವರನ್ನು ಸರ್ವಾನುಮತದಿಂದ ಮಾತೃ ಘಟಕ ಹಾಗೂ ಯುವ ಘಟಕದ ಸಮ್ಮುಖದಲ್ಲಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಕಾರ್ಯದರ್ಶಿಗಳಾದ ಮಹಾದೇವ ಪಂಚಾಳ ಇವರ ನೇತೃತ್ವದಲ್ಲಿ ನೇಮಕ ಮಾಡಲಾಯಿತು.
ಆದ್ದರಿಂದ ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು, ಬೀದರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಾಲೂಕಾ, ಹೋಬಳಿ ಹಾಗೂ ಗ್ರಾಮಗಳಲ್ಲಿ ಮಹಿಳಾ ಘಟಕಗಳನ್ನು ಸ್ಥಾಪಿಸಿ, ನಮ್ಮ ಮಹಾಸಭಾಗೆ ಬಲಿಷ್ಠಗೊಳಿಸುವಂತೆ ಶ್ರಮವಹಿಸಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರಶಾಂತ ವಿಶ್ವಕರ್ಮರವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.