ವಿದ್ಯಾಭಾರತಿ ಕರ್ನಾಟಕ, ಪ್ರಾಂತೀಯ ಅಥ್ಲೇಟಿಕ್ಸ್ ಕ್ರೀಡಾಕೂಟ ಬೀದರ-2024 ಉದ್ಘಟನೆ ಸಮಾರಂಭ
ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಾಂಬAಧಿತ ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಅಥ್ಲೇಟಿಕ್ಸ್ ಕ್ರೀಡಾಕೂಟ 2024 ಬೀದನ ನೆಹರು ಕ್ರೀಡಾಂಗಣದಲ್ಲಿ ಇಂದು ಉದ್ಘಾಟನೆಗೊಂಡಿದ್ದು, ಬೀದರನ ದಕ್ಷಿಣ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ರೀಡಾಪಟುಗಳಿಗೆ ಶುಭ ಕೋರಿದ ಅವರು ಕ್ರೀಡೆ ಸಮಾನತೆಯನ್ನು ಕಲ್ಪಿಸುತ್ತದೆ. ಕ್ರೀಡೆಯನ್ನು ಕ್ರೀಡಾ ಮನೋಭಾವನೆಯಿಂದ ಆಡಬೇಕೆ ಹೊರತು ದ್ವೇಷದಿಂದ ಅಲ್ಲ ಎಂದ ಅವರು ಇಂದಿನ ಯುವಕರು ಭಾವಿ ಭಾರತದ ಸತ್ಪçಜೆಗಳಾಗಿ ಹೊರಹೊಮ್ಮಬೇಕೆಂದು ಶುಭ ಕೋರುವುದರ ಮೂಲಕ ಉದ್ಘಾಟನೆ ಘೋಷಣೆಯನ್ನು ಮಾಡಿದರು. ಕಾರ್ಯಕ್ರಮದ ಮೊದಲಿಗೆ ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಉಮೇಶಕುಮಾರ ಅವರು ಪ್ರಾಸ್ತಾವಿನ ನುಡಿಗಳನ್ನು ಮಾತನಾಡುತ್ತ ವಿದ್ಯಾಭಾರತಿ ನಡೆದು ಬಂದ ದಾರಿ ಹಾಗೂ ವಿದ್ಯಾಭಾರತಿಯಲ್ಲಿ ಕ್ರೀಡೆಗೆ ವಿಶೇಷ ಒತ್ತು ನೀಡಲಾಗುವುದು. ಹಾಗಾಗಿ ವಿದ್ಯಾಭಾರತಿಯಲ್ಲಿ ಅನೇಕ ಕ್ರೀಡಾ ಪಟುಗಳು ರಾಜ್ಯ, ರಾಷ್ಟç ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಸಂತಸತ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿದ ವಿದ್ಯಾಭಾರತಿ ಬೀದರ ಜಿಲ್ಲೆಯ ಅಧ್ಯಕ್ಷರಾದ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕ್ರೀಡಾ ಪಟುಗಳಿಗೆ ಹಾರೈಸುತ್ತ ವಿದ್ಯಾಭಾರತಿಯ ಪ್ರಾಂತೀಯ ಕ್ರೀಡಾಕೂಟ ಬೀದರನಲ್ಲಿ ನಡೆಸಲು ಅನುವು ಮಾಡಿಕೊಟ್ಟ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವಿದ್ಯಾಭಾರತಿ ಬೀದರ ಜಿಲ್ಲೆಯ ಕಾರ್ಯದರ್ಶಿಗಳಾದ ಭಗುಸಿಂಗ್ ಜಾಧವ ಅವರು ಸ್ವಾಗತವನ್ನು ಕೋರಿದರೆ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪಾ ಔರಾದೆ ಅವರು ವಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಷ್ಟಿçÃಯ ಕ್ರೀಡಾಪಟುಗಳಾದ ರಾಹುಲ್ ಹಾಗೂ ಕೇದಾರ ಅವರಿಂದ ಕ್ರೀಡಾ ಜ್ಯೋತಿಯನ್ನು ಸ್ಥಾಪಿಸಲಾಯಿತು. ಈ ಪ್ರಾಂತೀಯ ಕ್ರೀಡಾಕೂಟಕ್ಕೆ ಮೈಸೂರು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಬೀದರ 09 ಜಿಲ್ಲೆಗಳಿಂದ ಒಟ್ಟು 402 ಕ್ರೀಡಾಪಟುಗಳು ಈ ಕ್ರೀಡೋತ್ಸವಕ್ಕೆ ಸ್ಪರ್ಧಾಳುಗಳಾಗಿ ಆಗಮಿಸಿರುತ್ತಾರೆ.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಕಾರ್ಯದರ್ಶಿಗಳಾದ ಶ್ರೀ ವಸಂತ ಮಾಧವ ದಕ್ಷಿಣ ಮಧ್ಯಕ್ಷೇತ್ರ ಖೇಲ್ಕುದ ಸಹ-ಪ್ರಮುಖರಾದ ಶ್ರೀ ದೇವೇಂದ್ರನ್ಜಿ ಹಾಗೂ ಸಂಘದ ಕಲಬುರಗಿ ವಿಭಾಗದ ವಿಭಾಗ ಸಂಘಚಾಲಕರಾದ ಶ್ರೀ ಹನುಂತರಾವ ಪಾಟೀಲರು ಹಾಗೂ ವಿದ್ಯಾಭಾರತಿ ಬೀದರ ಜಿಲ್ಲೆಯ ಕೋಶಾಧ್ಯಕ್ಷರಾದ ಶ್ರೀ ಮರುಳಾರಾಧ್ಯ ಸ್ವಾಮಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು ಹಾಗೂ ಈ ಸಂದರ್ಭದಲ್ಲಿ ಸರಸ್ವತಿ ಶಾಲೆಯ ಅನೇಕ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಉದ್ಘಾಟನಾ ಕಾರ್ಯಕ್ರಮದ ನಂತರ ವಿಧಿಯುಕ್ತವಾಗಿ ಕ್ರೀಡಾಕೂಟವನ್ನು ಪ್ರಾರಂಭಿಸಲಾಯಿತು. ಮೊದಲಿಗೆ ರವೀಂದ್ರ ಶಾಲೆಯ ವಿದ್ಯಾರ್ಥಿಗಳು ಸರಸ್ವತಿ ವಂದನೆಯನ್ನು ಹಾಡಿದರೆ ಶ್ರೀ ಬಾಲಾಜಿ ರಾಠೋಡ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.