ರೋಟರಿ ಕ್ಲಬ್ನಿಂದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸಸಿ ನೆಡುವಿಕೆ ಜನ್ಮದಿನಕ್ಕೆ ತಲಾ ಒಂದು ಸಸಿ ನೆಡಿ
ಬೀದರ್: ಉತ್ತಮ ಪರಿಸರಕ್ಕಾಗಿ ಜನ್ಮದಿನಕ್ಕೆ ತಲಾ ಒಂದಾದರೂ ಸಸಿ ನೆಡಬೇಕು ಎಂದು ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಅಧ್ಯಕ್ಷ ಸಂಗಮೇಶ ಆಣದೂರೆ ಸಲಹೆ ಮಾಡಿದರು.
ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ವತಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕ ಸಸಿಗಳನ್ನು ನೆಡುವುದರಿಂದ ಶುದ್ಧ ಗಾಳಿ ಸಿಗುತ್ತದೆ. ಸಕಾಲಕ್ಕೆ ಮಳೆ, ಬೆಳೆ ಬರುತ್ತದೆ. ಸಮೃದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಪರಿಸರ, ಆರೋಗ್ಯ, ಶಿಕ್ಷಣ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿದೆ. ನಿರಂತರ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಮಲ್ಲಿಕಾರ್ಜುನ ಬಿ.ಆರ್. ಮಾತನಾಡಿ, ರೋಟರಿ ಕ್ಲಬ್ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿದೆ. ಪಾಲಿಟೆಕ್ನಿಕ್ಗೆ ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ ಎಂದು ಹೇಳಿದರು.
ಕ್ಲಬ್ ಕಾರ್ಯದರ್ಶಿ ಗುಂಡಪ್ಪ ಘೋಡೆ, ಶಿವಕುಮಾರ ಯಲಾಲ್, ಜಹೀರ್ ಅನ್ವರ್, ಪ್ರೊ. ಎಸ್.ಬಿ. ಚಿಟ್ಟಾ, ಪ್ರೊ. ಎಂ.ಎಸ್. ಚಲ್ವಾ, ಸೋಮನಾಥ ಗಂಗಶೆಟ್ಟಿ, ಕಾಶೀನಾಥ ಪಾಟೀಲ, ಪಾಲಿಟೆಕ್ನಿಕ್ನ ಮಹೇಶ, ಉಮೇಶ ಮಿತ್ರಾ, ಬಕ್ಕಪ್ಪ, ಶಿವಕುಮಾರ ಕಟ್ಟೆ, ವಕೀಲ್ ಪಟೇಲ್, ಅರುಣ ಮೋಕಾಶಿ ಇದ್ದರು.