ರೈಲ್ವೆ ಪಾಸ್ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲು ಸಂಸದ ಸಾಗರ ಖಂಡ್ರೆಯವರಿಗೆ ಮನವಿ ಪತ್ರ ಸಲ್ಲಿಕೆ
ಬೀದರ,ಸೆ.30:- ಬೀದರನಲ್ಲಿ ಇಂದು ಸಂಸದ ಸಾಗರ ಖಂಡ್ರೆಯವರಿಗೆ ಭೇಟಿ ಮಾಡಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೀದರ ಜಿಲ್ಲಾ ಘಟಕದ ವತಿಯಿಂದ ಕೋವಿಡ್-19ರ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಪತ್ರಕರ್ತರ ರಿಯಾಯಿತಿ ಪಾಸ್ ಮರು ಚಾಲನೆಗೆ ಕೇಂದ್ರ ರೈಲ್ವೆ ಸಚಿವರನ್ನು ಗಮನ ಸೆಳೆಯುವಂತೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸಾಗರ ಖಂಡ್ರೆಯವರು ಈ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗುವುದು ಹಾಗೂ ಮುಂಬರುವ ಚಳಿಗಾಲ ಲೋಕಸಭೆ ಅಧಿವೇಶನದಲ್ಲಿ ಪ್ರಶ್ನೆ ಎತ್ತುವುದಾಗಿ ಅವರು ಭರವಸೆ ನೀಡಿದರು. ಮೊದಲಿನಿಂದಲೂ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ ಪಾಸ್ ನೀಡಲಾಗಿತ್ತು. ಕೋವಿಡ್-19ರ ಸಂದರ್ಭದಲ್ಲಿ ಪತ್ರಕರ್ತರಿಗೆ ಆರೋಗ್ಯದ ದೃಷ್ಠಯಿಂದ ರಿಯಾಯಿತಿ ಪಾಸ್ ಸ್ಥಗಿತಗೊಳಿಸಲಾಗಿತ್ತು. ಇದನ್ನು ಪುನರರಾಂಭಿಸುವAತೆ ಸಂಸದರಿಗೆ ನೀಡಿದ ಮನವಿ ಪತ್ರದಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ(ರಿ) ಬೆಂಗಳೂರು ಬೀದರ ಜಿಲ್ಲಾ ಅಧ್ಯಕ್ಷರಾದ ಈ ಸೂರ್ಯಾಸ್ತ ಪತ್ರಿಕೆಯ ಸಂಪಾದಕರಾದ ವಿಜಯಕುಮಾರ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಯುವರಂಗ ಪತ್ರಿಕೆಯ ಸಂಪಾದಕ ಶಶಿಕುಮಾರ ಪಾಟೀಲ, ಕಾಜಿ ಅಲಿಯೋದ್ದೀನ್, ಮಾಳಪ್ಪ ಅಡಸಾರೆ, ಹಸನ್ ಸೈಯದ್ ಖಾದ್ರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೀದರ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಸಂಸದರಿಗೆ ಜೊತೆಗೆ ಇದ್ದರು.