ರಾಷ್ಟ್ರೀಯ ಹೆದ್ದಾರಿ ಮತ್ತು ಪಾಪನಾಶಕ್ಕೆ ಅನುದಾನ ಬಿಡುಗಡೆಗೆ ಮನವಿ: ಭಗವಂತ ಖೂಬಾ
ದೇಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನೀತಿನ ಗಡ್ಕರಿಯವರಿಗೆ ಹಾಗೂ ಸಂಸ್ಕøತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತರವರಿಗೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿಯಾಗಿ ಶುಭಕೋರಿ, ಬೀದರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೆ ಚಿಂಚೋಳಿ ತಾಲೂಕಿಗೆ ರೂ. 405 ಕೋಟಿ ಅನುದಾನದಲ್ಲಿ ಮಂಜೂರಾಗಿರುವ ತೆಲಂಗಾಣ ಬಾರ್ಡರನಿಂದ ಮಿರಿಯಾಣ, ಪೋಲಕಪಳ್ಳಿ ಚಿಂಚೋಳಿ ಚತುಷ್ಫಥ ಹೆದ್ದಾರಿ ಮತ್ತು ಹುಮನಾಬಾದ ಹತ್ತಿರದ ಚಿದ್ರಿ ಬೈಪಾಸ್ ಫ್ಲೈ ಓವರ್ ಬ್ರಿಡ್ಜಗೆ ರೂ. 48 ಕೋಟಿಯ ಕಾಮಗಾರಿ ಮಂಜೂರಿ ಮಾಡಿಕೊಟ್ಟಿದ್ದಿರಿ ಇವುಗಳ ಪ್ರಾರಂಭಕ್ಕೆ ಅಗತ್ಯ ಕ್ರಮ ವಹಿಸಬೇಕು, ಹಾಗೂ ಬೀದರ ಕ್ಷೇತ್ರದ ವಿವಿಧ ಹೆದ್ದಾರಿಗಳು ಮಂಜೂರಾತಿಗಾಗಿ ಕಳುಹಿಸಲಾಗಿದೆ, ಅವುಗಳಿಗೂ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಜೊತೆಗೆ ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತರವರಿಗೆ ಭೇಟಿಯಾಗಿ ನಾನು ಸಂಸದನಾಗಿದ್ದಾಗ ಬೀದರ ಜಿಲ್ಲೆಯ ಐತಿಹಾಸಿಕ ದೇವಸ್ಥಾನವಾದ ಕೋಟಿ ಪಾಪನಾಶ ಲಿಂಗ ದೇವಸ್ಥಾನಕ್ಕೆ ಪ್ರಸಾದ ಯೋಜನೆಯಡಿ ಮಂಜುರಿ ಮಾಡಿಸಿಕೊಂಡಿದ್ದೆ ಹಾಗೂ ಈ ದೇವಸ್ಥಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ರೂ. 22 ಕೋಟಿ ಅನುದಾನದಲ್ಲಿ ಭೂಮಿ ಪೂಜೆ ಮಾನ್ಯ ಪ್ರಧಾನಮಂತ್ರಿಗಳು ನೇರವೇರಿಸಿದ್ದಾರೆ, ಆದ್ದರಿಂದ ಕಾಮಗಾರಿಗಳು ಪ್ರಾರಂಭಿಸಬೇಕಾಗಿದೆ, ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ದಿಯಾಗಬೇಕಾಗಿದೆ, ಈ ನಿಟ್ಟಿನಲ್ಲಿ ತಮ್ಮ ಸಹಕಾರ ಅಗತ್ಯವಾಗಿದೆ, ಕೂಡಲೆ ಅಧಿಕಾರಿಗಳಿಗೆ ಸೂಚಿಸಿ ಮುಂದಿನ ಕೆಲಸ ಮಾಡಿಸಿಕೊಡಬೇಕೆಂದು ಮಾಜಿ ಸಚಿವ ಖೂಬಾ, ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಇಬ್ಬರು ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಳೆದ 10 ವರ್ಷಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ನಮ್ಮ ಸಹಕಾರದಿಂದ ಬೀದರ ಕ್ಷೇತ್ರದ ಚಿತ್ರಣವೇ ಬದಲಾಗಿದೆ, ಮುಂದೆಯೂ ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸುವುದಾಗಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರವರಿಗೆ ತಿಳಿಸಿದ್ದಾರೆ.