ರಾಷ್ಟ್ರೀಯ ಸೇವಾ ಯೋಜನೆ ನಿಮಿತ್ತ ವಿಶೇಷ ಶಿಬಿರ ಜೊತೆಗೆ ಎನ್ ಎಸ್ ಎಸ್ ಶಿಬಿರದ ಮಹತ್ವ ತಿಳಿಸಿಕೊಟ್ಟ :ಗುರುನಾನಕ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಡಾ.ರೇಷ್ಮಾ ಕೌರ್
ಬೀದರ: ಗುರುನಾನಕ ಪ್ರಥಮ ದರ್ಜೆ ಮಹಾವಿದ್ಯಾಲಯ, ಬೀದರ್ ವಿಶ್ವವಿದ್ಯಾಲಯ ಇವರ ಅಡಿಯಲ್ಲಿ ಮರ್ಕಲ್ ಗ್ರಾಮ ದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನದ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಗುರುನಾನಕ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಡಾ.ರೇಷ್ಮಾ ಕೌರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸುವುದರ ಜೊತೆಗೆ ಎನ್ ಎಸ್ ಎಸ್ ಶಿಬಿರದ ಮಹತ್ವ ತಿಳಿಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮರ್ಕಲ್ ಗ್ರಾ.ಪಂ ಅಧ್ಯಕ್ಷ ಶ್ರೀಮತಿ ಈಶ್ವರಮ್ಮ ಬಸವರಾಜ್ ಓಂಕಾರೆ, ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ಕೆ ಜಾಬ ಇವರು ಮಾತನಾಡಿ ಎನ್ ಎಸ್ ಎಸ್ ಮಹತ್ವ ತಿಳಿಸಿಕೊಟ್ಟರು. ಅತಿಥಿಗಳಾಗಿ ಆಗಮಿಸಿರುವ ಮರ್ಕಲ್ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಅಬ್ದುಲ್ ರೌಫ ಖಾನ್ ಇವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆ ಮೂಡಿಸಿಕೊಳ್ಳುವುದರ ಬಗ್ಗೆ ತಿಳಿಸಿಕೊಟ್ಟರು ಗ್ರಾ. ಪಂ ಸದಸ್ಯರಾದ ಸೋಮಶಂಕರ್, ಬಸವ ಮಂಟಪ ಅಧ್ಯಕ್ಷರಾದ ಶಿವರಾಜ್ ಬಿರಾದರ್, ಶಶಿನಾಥ್ ಪಾಟೀ¯, ಗುರು ನಾನಕ್ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಶಾಮಲಾ ವಿ. ದತ್ತಾ. ಎನ್ ಎಸ್ ಎಸ್ ಕಾರ್ಯಕ್ರಮಾ ಅಧಿಕಾರಿಗಳು ಶ್ರೀಮತಿ ಗೌರಮ್ಮ ಮಠಪತಿ, ಸಲಹಾ ಸಮಿತಿಯ ಸದಸ್ಯರಾದ ಇನಾಮು ರೆಹಮಾನ್ ಖಾನ್ ಸಲಹಾ ಸಮಿತಿಯ ಸದಸ್ಯರು ಡಾ. ನಾಗೇಶ್ವರ್ ಎರ್ನಾಳೆ, ಪೂಜಾ ಗಡ್ಡೆ, ಜಗದೀಶ್ ಅಕ್ಕಿ, ರಾಮ್ ರಾವ ಜಾದವ್, ರಾಣಿ ಬಿರಾದರ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ಊರಿನ ಗಣ್ಯರು, ಸ್ವಯಂಸೇವಕ ಸೇವಕೀಯರು ಭಾಗವಹಿಸಿ ಏಳು ದಿನದ ವಿಶೇಷ ಶಿವರ ತಿಳಿದುಕೊಳ್ಳುವುದರ ಜೊತೆಗೆ ಎನ್ ಎಸ್ ಎಸ್ ದ ಮಹತ್ವ ಅರಿತುಕೊಂಡರು.