ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲ ಜಿಲ್ಲೆಯ ಕಿರ್ತಿ ಹೆಚ್ಚಿಸಬೇಕು -:ಜಿಲ್ಲಾ ಪಂಚಾಯತ ಸಿಇಓ ಶಿಲ್ಪಾ.ಎಂ
ಬೀದರ, ಅಗಸ್ಟ್ 30 -ಕ್ರೀಡಾಪಟುಗಳು ಭಾವನೆಗಳಿಗೆ ಒಳಗಾಗಿ, ಸೋಲು ಹಾಗೂ ಗೆಲುವಿನ ಸಮಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು, ತಮ್ಮಲ್ಲಿ ವೃತ್ತಿಪರತೆಯನ್ನು ರೂಡಿಸಿಕೊಂಡು, ಕಠಿಣ ಪರಿಶ್ರಮ ಮಾಡಿ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲಿ ಭಾಗವಹಿಸಿ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಕಿರ್ತಿ ಪಟಾಕಿ ಹಾರಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ ಹೇಳಿದರು. ಅವರು ಮಂಗಳವಾರ ಬೀದರ ಜಿಲ್ಲಾ ಒಳಾಂಗಣ ಕ್ರೀಡಾಂಗಣಲದಲ್ಲಿ ಆಗಸ್ಟ್ 29 ರಂದು ಮೇಜರ್ ದ್ಯಾನ್ ಚಂದ್ ರವರ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಕಳೆದ ಅಗಸ್ಟ್ 21 ರಿಂದ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ ವಾಕ್ ರೆಸ್, ವಾಲಿಬಾಲ್, ಹಾಕಿ, ಸೈಕ್ಲಿಂಕ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ ಮೇಜರ್ ಧ್ಯಾನ್ ಚಂದ್ ರವರ ಹುಟ್ಟು ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವು ಕೂಡಾ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ವಾರವಿಡಿ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಕ್ರೀಡಾಪಟುಗಳಿಗೆ ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಲು ಹಾಗೂ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೆಪಿಸುವುದಾಗಿದೆ ಎಂದರು. ಕ್ರೀಡಾಕೂಟದಲ್ಲಿ ಜಿಲ್ಲಾಡಳಿತ ತಂಡ, ಪೋಲಿಸ್ ತಂಡ, ಮಹಾರಾಜಾ ಕ್ಲಬ್ ಹಾಗೂ ಖೇಲೋ ಇಂಡಿಯಾ ತಂಡದ ನಡುವೆ ಏರ್ಪಡಿಸಿದ ಸಂಹಾರ್ಧ ವಾಲಿಬಾಲ್ ಸ್ಪರ್ಧೆಯಲ್ಲಿ ಪೊಲೀಸ್ ತಂಡ ಪ್ರಥಮ ಸ್ಥಾನ ಹಾಗೂ ಜಿಲ್ಲಾಡಳಿತ ತಂಡ ದ್ವಿತೀಯ ಸ್ಥಾನಗಳಿಸಿತು. ಈ ಸಂದರ್ಭದಲ್ಲಿ ಮೌಲಪ್ಪಾ ಮಾಳಗೆ, ಶಿವಕುಮಾರ ಗಡ್ಡೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗಳು ಹಾಗೂ ತರಬೇತುದಾರರು ಉಪಸ್ಥಿತರಿದ್ದರು.