ರಾಷ್ಟ್ರದ ಪ್ರಗತಿಗೆ ಸೇವಾ ಮನೋಭಾವ ಬೆಳೆಸಿಕೊಳ್ಳಿ : ಕುಲಪತಿ ಬಿರಾದಾರ
ಬೀದರ್: ರಾಷ್ಟ್ರದ ಪ್ರಗತಿಗಾಗಿ ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಎಸ್. ಬಿರಾದಾರ ಹೇಳಿದರು.
ಔರಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಔರಾದ್ ತಾಲ್ಲೂಕಿನ ಹಂದಿಕೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈನಂದಿನ ಕರ್ತವ್ಯದ ಜತೆಗೆ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಸೂರ್ಯಕಾಂತ ಚಿದ್ರೆ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಎನ್.ಎಸ್.ಎಸ್. ಅಧಿಕಾರಿ ಪ್ರೊ. ಅಂಬಿಕಾ ದೇವಿ, ಪ್ರೊ. ವಿನಾಯಕ ಕೋತಮಿರ, ಪ್ರೊ. ವೇದಪ್ರಕಾಶ ಆರ್ಯ, ಪ್ರೊ. ಸಚ್ಚಿದಾನಂದ ರುಮ್ಮಾ, ಪ್ರೊ. ಮಹೇಶಕುಮಾರ, ಡಾ. ಜಯಶೀಲಾ, ಡಾ. ಊರ್ವಶಿ, ಡಾ. ದಯಾನಂದ ಬಾವಗೆ, ಪ್ರೊ. ಚಂದ್ರಕಾಂತ, ಪ್ರೌಢಶಾಲೆ ಮುಖ್ಯಶಿಕ್ಷಕ ಆರ್.ಆರ್. ಪಾಟೀಲ, ಛಾಯಾ ಕೋಟೆ ಇದ್ದರು. ಅತಿಥಿ ಉಪನ್ಯಾಸಕರು, ಶಿಕ್ಷಕರು, ಗ್ರಾಮದ ಗಣ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಡಾ. ಸಂಜೀವಕುಮಾರ ತಾಂದಳೆ ನಿರೂಪಿಸಿದರು. ಡಾ. ಮಹೇಶಕುಮಾರ ವಂದಿಸಿದರು.