ರಾಜು ಕಡ್ಯಾಳ ಜನ್ಮ ದಿನಾಚರಣೆ ನಿಮಿತ್ತ ಹೆಲ್ಮೆಟ್ ವಿತರಣೆ
ಬೀದರ್: ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ರಾಜು ಕಡ್ಯಾಳ ಹೇಳಿದರು.
ನಗರದಲ್ಲಿ ಶನಿವಾರ ಜನ್ಮ ದಿನಾಚರಣೆ ನಿಮಿತ್ತ ಉಚಿತವಾಗಿ ಹೆಲ್ಮೆಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಡ್ಡಾಯ ಹೆಲ್ಮೆಟ್ ಕುರಿತು ಜಿಲ್ಲಾ ಪೊಲೀಸ್ ವ್ಯಾಪಕವಾಗಿ ಜಾಗೃತಿ ಮೂಡಿಸುತ್ತಿದ್ದರು ಬಹಳಷ್ಟು ಜನ ಇನ್ನೂ ಹೆಲ್ಮೆಟ್ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಹೀಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು.
ಜನ್ಮ ದಿನಾಚರಣೆ ನಿಮಿತ್ತ ನಗರದಲ್ಲಿ ನೂರಕ್ಕೂ ಅಧಿಕ ಜನರಿಗೆ ಹೆಲ್ಮೆಟ್ ವಿತರಣೆ ಮಾಡಲಾಗಿದೆ. ಅದ್ದೂರಿ ಕಾರ್ಯಕ್ರಮ ಆಯೋಜಿಸುವ ಬದಲು ಇಂಥ ಜನೋಪಯೋಗಿ ಕಾರ್ಯಗಳು ಪ್ರತಿಯೊಬ್ಬರೂ ಮಾಡಬೇಕು ಎಂದು ತಿಳಿಸಿದರು.
ಪ್ರಮುಖರಾದ ಜಾಫಟ್ ಕಡ್ಯಾಳ, ದಯಾಸಾಗರ ಕಡ್ಯಾಳ, ಡಿ.ಎಸ್. ಮಹೇಶ ಬಿರಾದಾರ್, ಎಎಸ್‍ಐ ವಿಜಯಕುಮಾರ, ಅನೀಲಕುಮಾರ, ಸಿ.ಎಂ.ದಾಸ, ಅವಿನಾಶ, ಮುಖೇಶ್, ರಾಹುಲ್ ಡಾಂಗೆ, ಸಂಜು ಬೇಂದ್ರೆ, ಪ್ರಸಾದ ಮೊದಲಾದವರು ಇದ್ದರು.