ರಸ್ತೆ ಸುರಕ್ಷತೆ ಕುರಿತು ಕಿರು ಚಿತ್ರ “ಎಚ್ಚರಿಕೆ “ಬಿಡುಗಡೆ
ಬೀದರ ಜಿಲ್ಲೆಯ ಯುವ ಪ್ರತಿಭೆ ಶ್ರೀ, ಕೆ. ಚಂದ್ರಶೇಖರ, ನಿರ್ದೇಶಕರು ರವರು, ಶ್ರೀ, ರಘುಪ್ರಿಯ ರವರ ತಂಡದ ನಟನೆಯ ಮೂಲಕ ರಸ್ತೆ ಸುರಕ್ಷತೆ ಕುರಿತು ಕಿರು ಚಿತ್ರ “ಎಚ್ಚರಿಕೆ (Be Careful)” ನಿರ್ಮಾಣ ಮಾಡಿರುತ್ತಾರೆ. ಬೀದರ ಜಿಲ್ಲೆಯ ಜನತೆ ಇದನ್ನು ರಘುಪ್ರಿಯಾ ರವರ ಇಂಸ್ಟಾಗ್ರಾಮ, ಫೆಸ್ ಬುಕ್, ಟ್ವಿಟರ್, ಯು ಟುಬ್ ಚ್ಯಾನಲ್ ದಲ್ಲಿ ಇಂದು ಸಾಯಂಕಾಲ 7 ಗಂಟೆಗೆ ಬಿಡುಗಡೆಯಾಗಲಿದ್ದು ತಾವು ವಿಕ್ಷಿಸಿ, ಲೈಕ್, ಶೇರ್ ಮಾಡಿ ತಂಡಕ್ಕೆ ಪ್ರೊತ್ಸಾಹಿಸಿ, ತಾವು ಸಂಚಾರಿ ನಿಯಮ ಪಾಲಿಸಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ ಮತ್ತು ಇನ್ನೊಬ್ಬರ ಪ್ರಾಣಕ್ಕೂ ತೊಂದರೆಯಾಗದಂತೆ ಎಚ್ಚರ ವಹಿಸಿ. ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸಲು ತಮ್ಮ ಈ ಸುಂದರವಾದ ಕಿರು ಚಿತ್ರದ ಮೂಲಕ ಪ್ರಚುರ ಪಡಿಸಿದ ತಂಡಕ್ಕೆ ಸಮಸ್ತ ಬೀದರ ಜಿಲ್ಲಾ ಪೊಲೀಸರಿಂದ ಧನ್ಯವಾದಗಳು.