ರಕ್ಷಾ ಬಂಧನ ದಿನದಂದು “ಗೃಹಲಕ್ಷ್ಮಿ” ಯೋಜನೆಯ ಚಾಲನೆ ನೀಡಿದ : ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ ಇವರ ಸಹಯೋಗದಲ್ಲಿ ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ “ಗೃಹಲಕ್ಷ್ಮಿ” ಯೋಜನೆಯ ಚಾಲನಾ ಕಾರ್ಯಕ್ರಮ ಬೀದರ.
ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ನೀತಿಯಿಂದ ತತ್ತರಿಸಿರುವ ನಾಡಿನ ಜನತೆಗೆ ವಿಶೇಷವಾಗಿ ನಮ್ಮ ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಚುನಾವಣೆಗೂ ಮುನ್ನ ನಾವು ನೀಡಿದ್ದ ಗ್ಯಾರಂಟಿಯಂತೆ ಪ್ರತಿ ಮನೆಯ ಯಜಮಾನಿಗೆ #2000ರೂ ನೀಡುವ “ಗೃಹಲಕ್ಷ್ಮಿ” ಯೋಜನೆಗೆ ಇಂದು ಸಾಂಸ್ಕ್ರತಿಕ ನಗರ ಮೈಸೂರಿನಲ್ಲಿ ನಮ್ಮ ರಾಷ್ಟ್ರೀಯ ನಾಯಕರಾದ ಶ್ರೀ Rahul Gandhi, ಎಐಸಿಸಿ ಅಧ್ಯಕ್ಷರಾದ ಶ್ರೀ Mallikarjun Kharge, ನಾಡಿನ ಮುಖ್ಯಮಂತ್ರಿಗಳಾದ ಶ್ರೀ Siddaramaiah, ಉಪ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರು ಡಿಬಿಟಿ ಮೂಲಕ ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ ನೀಡಿದರು.
ಬೀದರ್ ಜಿಲ್ಲೆಯಲ್ಲಿ “ಗೃಹಲಕ್ಷ್ಮಿ” ಯೋಜನೆಗೆ ಡಾ. ಚನ್ನಬಸವ ಪಟ್ಟದೇವರ್ ರಂಗ ಮಂದಿರದಲ್ಲಿ ಚಾಲನೆ ನೀಡಿದೆನು.
ಪವಿತ್ರ ರಕ್ಷಾ ಬಂಧನ ದಿನದಂದು ಬೀದರ್ ಜಿಲ್ಲೆಯ ಸುಮಾರು #2ಲಕ್ಷ #90ಸಾವಿರ ಹೆಣ್ಣು ಮಕ್ಕಳಿಗೆ ಇಂದು ತಲಾ #2000ಸಾವಿರ ರೂ ಅಂತೇ ಒಟ್ಟು #58ಕೋಟಿ ರೂ ಡಿಬಿಟಿ ಮೂಲಕ ಜಮಾ ಆಗಲಿದೆ ಅತ್ಯಂತ ಖುಷಿಯ ಸಂಗತಿ.