ರಂಭಾಪೂರಿ ಶ್ರೀಗಳು, ಕೇಂದ್ರ ಸಚಿವ ಭಗವಂತ ಖೂಬಾರವರಿಗೆ ಸನ್ಮಾನ
ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಹ ಸಚಿವರಾದ ಭಗವಂತ ಖೂಬಾರವರು, ಚಿಕ್ಕಮಂಗಳೂರು ಜಿಲ್ಲೆಯ ಬಾಳೆಹೊನ್ನುರಿನಲ್ಲಿರುವ ಶ್ರೀಮದ್ ರಂಭಾಪೂರಿ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವಾತ್ಪದಕರ ಮಠಕ್ಕೆ ಭೇಟಿ ನೀಡಿ, ಪೂಜ್ಯ ಶ್ರೀಗಳ ದರ್ಶನಾಶಿರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಚಿವರು, ಒಂಬತ್ತು ವರ್ಷಗಳಲ್ಲಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳ ಕುರಿತು ಸವಿಸ್ತಾರವಾಗಿ ಪೂಜ್ಯರಿಗೆ ತಿಳಿಸಿದರು, ಇದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಸಿದ್ದತೆಗಳ ಕುರಿತು ಪೂಜ್ಯರಿಗೆ ವಿವರಿಸಿದರು.
ಸಚಿವರ ಮಾತಿಗೆ ಪೂಜ್ಯ ಶ್ರೀಗಳು ಸಹ, ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ದೇಶದಲ್ಲಾಗುತ್ತಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಂದ್ರಯಾನ-3 ಯಶಸ್ವಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ದೇಶದ ಜನತೆಗೆ ಮೋದಿ ಸರ್ಕಾರ ಒಳಿತು ಮಾಡುವ ಕೆಲಸ ಮಾಡುತ್ತಿದೆ, ದೇಶದಲ್ಲಿ ಭಯೋತ್ಪಾದನೆ ಕೊನೆಗಾಣಿದೆ, ಧರ್ಮದ ಕೆಲಸಗಳು ನಡೆಯುತ್ತಿವೆ, ಎಲ್ಲಾ ಜಾತಿ ಜನಾಂಗದವರು ಸಂತೋಷದಿಂದ ಬದುಕುತ್ತಿದ್ದಾರೆ. ನರೇಂದ್ರ ಮೋದಿಯವರ ಜೊತೆ ಇರುವ ಎಲ್ಲಾ ಸಚಿವರು, ಸಂಸದರು ಮೋದಿಯವರ ಮಾರ್ಗದರ್ಶನದಲ್ಲಿ ಒಳ್ಳೆಯ ರೀತಿ ಕೆಲಸ ಮಾಡುತ್ತಿರುವುದರಿಂದ, ದೇಶದಲ್ಲಿ ಅಭಿವೃದ್ದಿ ಕೆಲಸಗಳು ಯಶಸ್ವಿಯಾಗಿ ಅನುಷ್ಠಾನಗೋಳ್ಳುತ್ತಿವೆ ಎಂದು ತಿಳಿಸಿ, ಪ್ರಧಾನಿ ಮೋದಿಯವರ ನೇತೃತ್ವದ ಬಗ್ಗೆ ಪೂಜ್ಯ ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
ರಂಭಾಪೂರಿ ಶ್ರೀಗಳು, ಕೇಂದ್ರ ಸಚಿವ ಭಗವಂತ ಖೂಬಾರವರಿಗೆ ಸನ್ಮಾನಿಸಿ, ಮೂರನೆ ಅವಧಿಗೆ ಆಯ್ಕೆಗೊಂಡು, ಬೀದರ ಲೋಕಸಭಾ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ಮಾಡುವಂತರಾಗಿರಿ ಮತ್ತು ನಿಮ್ಮಿಂದ ದೇಶಕ್ಕೆ ಹಾಗೂ ಸಮಾಜಕ್ಕೆ ಒಳ್ಳೆಯ ಕೆಲಸಗಳು ಸಕಾರಗೊಳ್ಳಲಿ ಎಂದು ಶುಭ ಹಾರೈಸಿದರು.