ಬೀದರ್

ಯೋಗವನ್ನು ಎಲ್ಲರೂ ಪ್ರತಿದಿನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ. ಜೂನ್. 21 :- ಯೋಗದಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿದ್ದು ಇದನ್ನು ಯೋಗ ದಿನ ಮಾತ್ರ ಮಾಡದೆ ಪ್ರತಿದಿನ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ನೆಹರು ಕ್ರೀಡಾಂಗಣ ಬೀದರನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುμï ಇಲಾಖೆ ಬೀದರ ಹಾಗೂ ಇತರೆ ಯೋಗ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಕಾರ್ಯಕ್ರಮ ಕಳೆದ ಹತ್ತು ವರ್ಷಗಳಿಂದ ಸರ್ಕಾರದ ವತಿಯಿಂದ ಆಚರಿಸುತ್ತಾ ಬರುತ್ತಿದ್ದೆವೆ. ಇಂದಿನ ಆಧುನಿಕ ಜೀವನ ಶೈಲಿಯಿಂದ ಹೆಚ್ಚಿನ ಒತ್ತಡ ಬದುಕಿನಲ್ಲಿ ನಾವು ಬದುಕುತ್ತಿರುವುದರಿಂದ ನಮಗೆ ಬಿಪಿ, ಶುಗರ್ ಸೇರಿದಂತೆ ಹಲವಾರು ಕಾಯಿಲೆಗಳು ಬರುತ್ತಿವೆ. ಇವುಗಳನ್ನು ಬರದಂತೆ ತಡೆಯಬೇಕಾದರೆ ಮತ್ತು ನಾವು ಅರೋಗ್ಯವಾಗಿ ಇರಬೇಕಾದರೆ ಪ್ರತಿ ದಿನ ಯೋಗಮಾಡಬೇಕು. ತಮಗೆಲ್ಲರಿಗೂ 10ನೇ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು ಎಂದು ಹೇಳಿದರು.


ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆಯμï ಇಲಾಖೆಯಿಂದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಾಡುತ್ತಿದ್ದು. ಯೋಗದಿಂದ ನಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಉಪಯೋಗವಿದೆ. ಇದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಉಪಯೋಗಗಳಿದ್ದು ಎಲ್ಲರೂ ಯೋಗ ಮಾಡಬೇಕು ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, ಯೋಗವನ್ನು ವಿಶ್ವಕ್ಕೆ ಕೊಟ್ಟ ದೇಶ ನಮ್ಮದಾಗಿದೆ. ಪ್ರಾಣಯಾಮ ಸೇರಿದಂತೆ ಯೋಗದ ವಿವಿಧ ಪ್ರಕಾರಗಳನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಅನುಕೂಲಕರವಾಗುತ್ತದೆ ಹಾಗಾಗಿ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಆಯುμï ಇಲಾಖೆ ಬೀದರ ಯೋಗ ತರಬೇತಿದಾರ ಆನಂದ ಹುಡಗಿ ಎಲ್ಲರಿಗೆ ಯೋಗ ಹೇಳಿಕೊಡುವದರ ಜೊತೆಗೆ ಸ್ವತಃ ಆಕರ್ಷಕ ಯೋಗ ಪ್ರದರ್ಶನವನ್ನು ನೀಡಿದರು. ಯೋಗ ಪ್ರದರ್ಶನ ನೀಡಿದ ಏರವಿಂಗ್ ಎನ್.ಸಿ.ಸಿ. ಶಾಲಾ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಬಹುಮಾನಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ, ಏರವಿಂಗ್ ಎನ್.ಸಿ.ಸಿ ಕಮಾಂಡಿಂಗ್ ಆಫಿಸರ್ ವೈ.ಎನ್.ಎಲ್.ರೆಡ್ಡಿ, ಆಯುμï ಅಧಿಕಾರಿ ಡಾ. ರಾಜಕುಮಾರ ಬಿ. ಪಾಟೀಲ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಹೆಚ್ಚುವರಿ ಪೆÇಲೀಸ್ ಅಧಿಕ್ಷಕರಾದ ಚಂದ್ರಕಾಂತ ಪೂಜಾರ, ಡಿವೈಎಸ್ಪಿ ಶಿವನಗೌಡ ಪಾಟೀಲ ಹಾಗೂ ಇತರೆ ಯೋಗ ಸಂಘ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Ghantepatrike kannada daily news Paper

Leave a Reply

error: Content is protected !!