ಯೋಗದಿಂದ ದೀರ್ಘಾಯುಷ್ಯ: ಹಾವಗಿಲಿಂಗೇಶ್ವರ ಶ್ರೀ
ಬೀದರ್: ಯೋಗದಿಂದ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಎಂದು ಹಲಬರ್ಗಾ, ಶಿವಣಿ, ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಹೈದರಾಬಾದ್ನ ನಾಗಲಿಂಗೇಶ್ವರ ಸಂಸ್ಥಾನ ಮಠದ ಹೊರವಲಯದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗವು ರೋಗಗಳನ್ನು ದೂರ ಇರಿಸುತ್ತದೆ. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ರೋಗಗಳ ಸಾಧ್ಯತೆಗಳನ್ನು ತಗ್ಗಿಸುತ್ತದೆ ಎಂದು ತಿಳಿಸಿದರು.
ಆರೋಗ್ಯವೇ ಭಾಗ್ಯ. ಆರೋಗ್ಯ ಇಲ್ಲದಿದ್ದರೆ, ದುಡ್ಡು, ಅಧಿಕಾರ, ಅಂತಸ್ತು ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂದು ಹೇಳಿದರು.
ಉತ್ತಮ ಆರೋಗ್ಯ ಕಾಪಾಡಲು ಪ್ರತಿಯೊಬ್ಬರೂ ನಿತ್ಯ ಪದ್ಮಾsಸನ, ಕಪಾಲ್ಭಾತಿ, ಪ್ರಾಣಾಯಾಮ, ಕಂಧ ಪಿಡಾಸನ, ಸೂರ್ಯ ನಮಸ್ಕಾರ ಮೊದಲಾದ ಯೋಗಗಳನ್ನು ಮಾಡಬೇಕು ಎಂದು ಹೇಳಿದರು.
ಯೋಗ ಶಿಕ್ಷಕ ಸುನೀಲ್ ಬಿರಾದಾರ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. 500ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.