ಮೈಲೂರನಲ್ಲಿ ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜು ಮತ್ತು ಶಾಲಾ ಹೊಸ ಕಟ್ಟಡದ ಮಂಜೂರಿಗೆ ಪ್ರಯತ್ನ ಮಾಡಲಾಗುವುದು–ಮಹೇಶ ಗೋರನಾಳಕರ್
ಸ.ಹಿ.ಪ್ರಾ.ಶಾಲೆ ಮೈಲೂರನಲ್ಲಿ ನಡೆದ 76 ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣವನ್ನು ನೇರೆವೆರಿಸಿ ಶಾಲಾಭಿವೃಧ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹೇಶ ಗೋರನಾಳಕರ್ ಮೈಲೂರನಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ಪ್ರಾಥಮಿಕ ಶಾಲೆ ಹಾಗೂ ಕನ್ಯ ಪ್ರೌಢ ಶಾಲೆ ಇದೆ ಬಾಲಕಿಯರ ಪ.ಪೂ ಕಾಲೇಜೀನ ಅವಶ್ಯಕತೆ ಇದೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ನಿಟ್ಟಿನಲ್ಲಿ ಪ.ಪೂ ಕಾಲೇಜು ಮಂಜುರಿ ಮತ್ತು ಹೋಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದರು.
ಶಿಕ್ಷಣ ಪ್ರೇಮಿಗಳು ಹಾಗೂ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವರಾಜ ಕುದರೆ ಮಾತನಾಡಿ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಳವಾಗಿ ಸಿಕ್ಕಿಲ್ಲ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಲಭಿಸಿದ್ದೆ ಇದನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದಾಗಿದೆ ಎಂದರು.
ನಗರ ಸಭೆ ಸದಸ್ಯ ಶಶಿಧರ್ ಹೊಸಳ್ಳಿ ಮಾತನಾಡಿ ವಿಧ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೊಮ್ಮೆ ಆದರೂ ದೇಶಪ್ರೇಮ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರ ಪರಿಚಯ ಮಾಡಿಸುವುದು ಜರುರಿಯಾಗಿದೆ ಎಂದರು.
ಇನ್ನೋರ್ವ ಶಿಕ್ಷಣ ಪ್ರೇಮಿಗಳು ಮೊಹಮ್ಮದ್ ಖಲಿಲ್ ಸರ್, ಶಿಕ್ಷಕ ಉಮೇಶ ಬಿರಾದರ ರವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಮಕ್ಕಳ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕನ್ಯ ಪ್ರೌಢ ಶಾಲೆಯ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತ್ತು ಮತ್ತು ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಜ್ಯೋತಿ ಸಂತೋಷ, ಸದಸ್ಯ ಶಾಲಿವಾನ್ ಬಡಿಗೇರ, ಕನ್ಯಾ ಪ್ರೌಢ ಶಾಲೆಯ ಮುಖ್ಯ ಗುರು ರಾಘವೇಂದ್ರ ಕುಲಕರ್ಣಿ, ಪ್ರಾಥಮಿಕ ಶಾಲೆ ಮುಖ್ಯ ಗುರು ರಮೇಶ ಸರ್ ,ಹಾಗೂ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕಿಯರು ಗ್ರಾಮದ ಗಣ್ಯರು ಉಪಸ್ಥಿತರಿದ್ದರು