ಮೂಢನಂಬಿಕೆಗಳನ್ನು ತಡೆಹಿಡಿದು ವೈಜ್ಞಾನಿಕ ವಿಚಾರಗಳನ್ನು ಮನೋಭಾವ ಬೆಳಿಸಬೇಕು : ಡಾ. ರಜನೀಶ ಎಸ್. ವಾಲಿ
ಬೀದರ :ಜು.25: ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ವತಿಯಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಜ್ಯೋತಿ ಬೆಳಗುವುದರೊಂದಿಗೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ.ಬಿ. ಆವರಣದ ಶಾಲಾ ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ ಎಸ್. ವಾಲಿ ಹಾಗೂ ಬೀದರ ವಿಶ್ವವಿದ್ಯಾಲಯ ಬೀದರದ ಕುಲಪತಿಗಳಾದ ಡಾ. ಬಿ.ಎಸ್. ಬಿರಾದಾರ ಹಾಗೂ ಎನ್.ಎಸ್.ಎಸ್. ಯೋಜನಾಧಿಕಾರಿ ಡೀನ್ ವಿಜ್ಞಾನ ವಿಭಾಗ ಡಾ. ರವೀಂದ್ರ ಗಬಾಡೆಯವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ರಜನೀಶ ಎಸ್. ವಾಲಿಯವರು ಶಿಬಿರಾರ್ಥಿಗಳು ನೀರಿನ ಹಾಗೂ ವಿದ್ಯುತ್ ಶಕ್ತಿಯ ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು ಹಾಗೂ ತಮ್ಮ ಮನೆ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಮೂಢನಂಬಿಕೆಗಳನ್ನು ತಡೆಹಿಡಿದು ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗುವಂತೆ ಶಿಬಿರಾರ್ಥಿಗಳಲ್ಲಿ ಮನೋಭಾವ ಬೆಳಿಸಬೇಕು ಇದರಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನೋರ್ವ ಅತಿಥಿಗಳಾದ ಬೀದರ ವಿಶ್ವವಿದ್ಯಾಲಯ ಬೀದರದ ಕುಲಪತಿಗಳಾದ ಡಾ. ಬಿ.ಎಸ್. ಬಿರಾದಾರಯವರು ಮಾತನಾಡುತ್ತಾ ಶಿಬಿರಾರ್ಥಿಗಳು ಯಾವುದೇ ಕೆಲಸಕ್ಕೆ ಹಿಂಜರಿಯದೆ ನಾನು ಸದಾ ಸಿದ್ಧ ಸಮಾಜಕ್ಕಾಗಿ ಹಾಗೂ ಸಮಾಜದಲ್ಲಿರುವ ಗುರು ಹಿರಿಯರಿಗೆ ಗೌರವ ಸಲ್ಲಿಸುವುದು ಮತ್ತು ತಮ್ಮ ಗ್ರಾಮದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಅನಕ್ಷರಸ್ಥರನ್ನು ಸಾಕ್ಷರರಾಗಿ ಮಾಡಿ ಅಂಚೆ ಇಲಾಖೆಯಿಂದ ಬಂದ ಪತ್ರಗಳನ್ನು ಓದಲು ಕನಿಷ್ಠ ಜ್ಞಾನ ಪಡೆದರು ಅವರ ಜೀವನ ಸಾರ್ಥಕವಾಗುತ್ತದೆ ಪ್ರತಿಯೊಬ್ಬ ಶಿಬಿರಾರ್ಥಿ ಗ್ರಾಮದಲ್ಲಿರುವ ಅಜ್ಞಾನ ಅಂಧಕಾರ ತೊಡೆದು ಹಾಕಲು ಸಕ್ರೀಯರಾಗಬೇಕೆಂದು ಹೇಳಿದರು.
ಇನ್ನೋರ್ವ ಅತಿಥಿಗಳಾದ ಬೀದರ ವಿಶ್ವವಿದ್ಯಾಲಯ ಬೀದರದ ಎನ್.ಎಸ್.ಎಸ್. ಯೋಜನಾಧಿಕಾರಿಯಾದ ಡಾ. ರವೀಂದ್ರ ಗಬಾಡೆಯವರು ಮಾತನಾಡುತ್ತಾ ಸರ್ಕಾರ ನಿಮ್ಮ ಮೇಲೆ ಹಣ ತೋಡಗಿಸುವುದರ ಉದ್ದೇಶ ಪ್ರತಿಯೊಬ್ಬ ಗ್ರಾಮದ ನಾಗರೀಕ ತನ್ನ ಮನೆ ಮತ್ತು ಗ್ರಾಮದ ಕೆಲಸಗಳನ್ನು ಸ್ವಯಂ ಮಾಡಿಕೊಳ್ಳುವಂತೆ ಪ್ರೇರೆಪಿಸುವುದು ಶಿಬಿರಾರ್ಥಿಯ ಉದ್ದೇಶ. ಜನರಲ್ಲಿ ವೈಜ್ಞಾನಕ ದೃಷ್ಠಿಕೋನ ಮೂಡಿಸುವುದು, ಸುತ್ತಮುತಲಿನ ಪರಿಸರ ಹಾಗೂ ಮರಗಿಡಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ಶಿರಾರ್ಥಿಯ ಪರಮ ಕರ್ತವ್ಯ ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಗೌರವ ಉಪಸ್ಥಿತಿ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಕೋಟೆ ಹಾಜರಿದ್ದರು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೀತೆಯನ್ನು ಕು: ನಿಕಿತಾ ಹಿರೇಮಠ ಬಿ.ಕಾಂ.6 ಸೆಮಿಸ್ಟರ ಹಾಡಿದರೆ, ಎನ್.ಎಸ್.ಎಸ್. ಗೀತೆಯನ್ನು ಕು: ವಚನಾಂಬಿಕ ಹಾಗೂ ಸಂಗಡಿಗರು ಹಾಡಿದರು ಹಾಗೂ ಕಾರ್ಯಕ್ರಮವನ್ನು ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಯಾದ ಡಾ. ದೀಪಾ ರಾಗಯವರು ಸ್ವಾಗತಿಸಿದರೆ ಎನ್.ಎಸ್.ಎಸ್. ‘ಬ’ ಘಟಕದ ಅಧಿಕಾರಿಯಾದ ಶ್ರೀ ಬಸವರಾಜ ಬಿರಾದಾರ ನಿರೂಪಿಸಿದರೆ, ಶಿಬಿರಾರ್ಥಿ ಕು: ಶಾಹೀಲ್ ಅಬ್ಬಾಸ್ ಬಿ.ಎ.6 ಸೆಮಿಸ್ಟರ ವಂದಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿ/ವಿದ್ಯಾರ್ಥಿನಿರು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.