ಮುಖ್ಯಮಂತ್ರಿ ಜನ್ಮದಿನ: ನೋಟ್ಪುಸ್ತಕ ವಿತರಣೆ
ಬೀದರ್: ತಾಲ್ಲೂಕಿನ ಯಾಕತಪುರ ಗ್ರಾಮದ ಉರ್ದು ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ ವಿತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನ್ಮದಿನ ವಿಭಿನ್ನವಾಗಿ ಆಚರಿಸಲಾಯಿತು.ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಯಾಕತಪುರ ವೈಯಕ್ತಿಕವಾಗಿ ನೋಟ್ ಪುಸ್ತಕ ಹಾಗೂ ಪೆನ್ ವಿತರಿಸಿದರು.ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.