ಮುಂಗನಾಳ ಗ್ರಾಮದ ಜನರಿಗೆ ರೋಗದ ಬಿತಿ ಕಾಡುತ್ತಿದೆ
ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ರೋಗ ಹೆಚ್ಚಾಗುತ್ತಿದೆ ಆದರೆ ಪಂಚಾಯತಿನವರು ಸ್ವಚ್ಛತೆ ಕಾಪಾಡುತ್ತಿಲ್ಲ ಎಂದು ಮಾರುತಿ ಸೂರ್ಯವಂಶಿ ಮುಂಗನಾಳ ಆಗ್ರಹಿಸುತ್ತಾರೆ. ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಸಿ ಎಚ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಂಗನಾಳ ಗ್ರಾಮದ ವರ್ಡ್ ನಂಬರ್ 2 ರಲ್ಲಿ ರೋಡ್ ಮೇಲೆ ಸಾಕಷ್ಟು ತಿಪ್ಪೆಯ ನೀರು ಬೋರ್ವೆಲ್ ನಲಿ ಹಾಗೂ ನೀರು ಸಂಪೂರ್ಣ ನಾಶ ಆಗ್ತಾ ಇದಾವೆ ಹಾಗು ನೀರು ರಸ್ತೆಗೆ ಹರಿಯುತ್ತಿದ್ದು ಇದರಿಂದಾಗಿ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಹಾಗೂ ರಸ್ತೆ ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿದ್ದು ಇದ್ದಾವೆ ದುರ್ವಾಸನೆಯಿಂದಾಗಿ ಸುತ್ತಮುತ್ತಲಿನ ಜನರಿಗೆ ರೋಗದ ಬಿತಿ ಕಾಡುತ್ತಿದೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಈ ವ್ಯವಸ್ಥೆ ಇದ್ದು ಇದನ್ನು ನೋಡಿದರೂ ಸಹ ಈ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧ ಇಲ್ಲದ ಹಾಗೆ ನೋಡುತ್ತಿದ್ದಾರೆ ರಾಜ್ಯವೇ ಮಾರಕ ರೋಗವಾದ ಡೆಂಗ್ಯೂ ರೋಗವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೆ ಈ ಗ್ರಾಮದ ಗ್ರಾಮ ಪಂಚಾಯತಿ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಈ ಕೂಡಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಈ ಗ್ರಾಮದ ಕಡೆ ಗಮನ ಹರಿಸಿ ಜನರ ಆರೋಗ್ಯ ಕಾಪಾಡಬೇಕು ಇಲ್ಲಿನ ರಸ್ತೆಯಲ್ಲಿ ಅನೇಕ ತಿಂಗಳಿನಿಂದಲೂ ಈ ಸಮಸ್ಯೆಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ ಸಂಗತಿ ಎಂದು ಮಾರುತಿ ಸುರೇಶ್ ಸೂರ್ಯವಂಶಿ ಮುಂಗನಾಳ ಕಿಡಿಕಾರಿದ್ದಾರ