ಬೀದರ್

ಮಾಳೆಗಾಂವನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸರಿಯಾಗಿ ನಿರ್ವಹಣೆಯಾಗಲಿ – ಠಾಕೂರ್

ಬೀದರ: ಉತ್ತರ ವಿಧಾನಸಭಾ ಕ್ಷೇತ್ರದ ಮಾಳೆಗಾವ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದೆ ಎಂದು ಪತ್ರಿಕೆಯಲ್ಲಿ ವರದಿಯಾದಾಗ ಮಾಳೆಗಾಂವ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ, ಸಮಸ್ಯೆಯನ್ನು ಪರಿಹರಿಸಲು ಏನು ಮಾಡುವುದು ಎಂದು ಜನರ ಜೊತೆಯಲ್ಲಿ ಚರ್ಚಿಸಲಾಗಿದೆ ಎಂದು ಬಿಜೆಪಿ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ತಿಳಿಸಿದ್ದಾರೆ.
ತಾಲೂಕಿನ ಮಾಳೆಗಾಂವ ಗ್ರಾಮಕ್ಕೆ ಭೇಟಿ ನೀಡಿದ ಠಾಕೂರ್ ಅವರು ಗ್ರಾಮದಲ್ಲಿ ಸದ್ಯ ಯಾವ ಜಾಗದಲ್ಲಿ ನೀರಿನ ಶುದ್ಧೀಕರಣ ಘಟಕ ಇದೆಯೋ ಅದು ಆರಂಭವಾದಾಗಿನಿಂದ ಸರಿಯಾಗಿ ನಿರ್ವಹಣೆ ಆಗದೇ ಇರುವುದರಿಂದ ಗ್ರಾಮಸ್ಥರಿಗೆ ಕುಡಿಯುವ ಶುದ್ಧ ನೀರು ಸಿಗುತ್ತಿಲ್ಲ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿ ಶೀಘ್ರದಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಹೇಳಲಾಯಿತು. ಹಾಗೂ ಅನೇಕ ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ಕಾಮಗಾರಿ ಆರಂಭ ಆಗಬೇಕಾಗಿದ್ದು, ಅದನ್ನು ಕೂಡ ವೀಕ್ಷಿಸಲಾಯಿತು. ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ಅನುಕೂಲ ಆಗುವ ಆಸ್ಪತ್ರೆಯನ್ನು ಶೀಘ್ರದಲ್ಲಿ ನಿರ್ಮಾಣ ಮಾಡಲು ಸಹಕರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಲಾಯಿತು. ಹಾಗೂ ಸರ್ಕಾರಿ ಜೂನಿಯರ್ ಕಾಲೇಜ್ ಕೂಡ ಮಾಳೆಗಾಂವನಲ್ಲಿ ಆರಂಭಿಸಲು ಭರವಸೆ ನೀಡಲಾಯಿತು. ಬೇಡಿಕೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಪಂಚಾಯತ್ ಮುಖಾಂತರ ಪತ್ರವನ್ನು ಬರೆಯಬೇಕೆಂದು ಹೇಳಿ ಪಿಡಿಓ ಅವರಿಗೆ ಹೇಳಲಾಯಿತು. ಊರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಾವು ಗ್ರಾಮ ಪಂಚಾಯತಿಯಿಂದ ಮೇಲಾಧಿಕಾರಿಗಳಿಗೆ ಪತ್ರವನ್ನು ಬರೆಯುವ ಭರವಸೆಯನ್ನು ನೀಡಲಾಯಿತು.
ಇದೇ ವೇಳೆ ಪಿಡಿಓ ಅನೀಲಕುಮಾರ, ಗ್ರಾ.ಪಂ. ಅಧ್ಯಕ್ಷ ಸಂಪತ್, ಪ್ರಮುಖರಾದ ಸಂದೀಪ ಪಾಟೀಲ, ವಸಂತ್ ಸುಭಾಂಜೆ, ಧನರಾಜ ಪಾಂಡ್ರೆ, ಬಂಡೆಪ್ಪಾ ಪಾಂಡ್ರೆ, ವಿಠಲ್ ಸಿಂದಗೆ, ಶಿವರಾಜ ಕೋಳಿ, ತೇಜಾರಾವ್ ನಂದಗಾಂವ, ನಾಮದೇವ ಸಿಂಗಾಡೆ, ಶಿವಕುಮಾರ ಮಹಾದಪ್ನೋರ್, ಗಣಪತಿ ಬೋಗಾರ್ ಸೇರಿದಂತೆ ಇನ್ನಿತರರು ಉಪಸ್ತಿತರಿದ್ದರು.

Ghantepatrike kannada daily news Paper

Leave a Reply

error: Content is protected !!