ಬೀದರ್

ಮಾನ್ಯ ಶಾಸಕರು ಡಾ. ಶೈಲೇಂದ್ರ ಕೆ. ಬೆಲ್ದಾಳೆ ರವರ ಅಧ್ಯಕ್ಷತೆಯಲ್ಲಿ  ಪ್ರಗತಿ ಪರಿಶೀಲನಾ ಸಭೆ  

ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಾಂಕ್ರಾಮಿಕ ರೋಗ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು
ಮಳೆಗಾಲದಲ್ಲಿ ಜನರ ಆರೋಗ್ಯ ಕುರಿತು ಕಾಳಜಿ ವಹಿಸುವುದು ಅತ್ಯಂತ ಅವಶ್ಯಕವಾಗಿದೆ ಹೀಗಾಗಿ ವೈದ್ಯರು, ಪಿಡಿಒ ಅಧಿಕಾರಿಗಳು ಆಶಾ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಲ್ಲ ಗ್ರಾಮಗಳಲ್ಲಿ ತಾವು ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು ಮೇಲಧಿಕಾರಿಗಳು ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ ತಾಲೂಕಾ ಪ್ರಗತಿ ಪರಿಶೀಲನಾ ಸಭೆ ಇಂದು ಬೀದರ ತಾಲೂಕಾ ಪಂಚಾಯತ ಕಚೇರಿ ಸಭಾಂಗಣದಲ್ಲಿಬೀದರ ದಕ್ಷಿಣ  ಕ್ಷೇತ್ರದ ಶಾಸಕರರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಉದ್ಯೋಗ ಆಸಕ್ತರನ್ನು ಸೆಳೆಯುವ ಸಂಬAಧ ಪ್ರಚಾರ ಕಾರ್ಯ ಕೈಗೊಳ್ಳಿ  ಅಂಗನವಾಡಿ ಕಾರ್ಯಕರ್ತೆಯರು ಕೂಲಿ ಕಾರ್ಮಿಕರ ಮಕ್ಕಳಿಗೆ ಉತ್ತಮವಾಗಿ ಪಾಲನೆ ಪೋಷಣೆ ಮಾಡಬೇಕು ಉತ್ತಮ ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು.

ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಜನರನ್ನು ಪಶುಗಳ ಮತ್ತು ಮೀನು ಪಾಲನೆ ಪೋಷಣೆಗಾಗಿ ಇರುವ ಅನುದಾನ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಸರ್ಕಾರದ ಅನುದಾನ ಎಲ್ಲ ರೈತರಿಗೂ ತಲುಪಬೇಕು ರೈತರು ಅನುದಾನದ ಮಾಹಿತಿ ಕೊರತೆಯಿಂದ ಫಲಾನುಭವಿಗಳು ರೈತರು ವಂಚಿತರಾಗುತಿದ್ದಾರೆ ಈ ಕುರಿತು ಗಮನ ಹರಿಸಬೇಕು ಎಂದರು.
ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಇನ್ನು ಎಲ್ಲಿ ವಿತರಣೆ ಆಗಿಲ್ಲವೊ ಕೃಷಿ ಇಲಾಖೆಯಿಂದ ಪೂರೈಸುವ ಬೀಜ, ಗೊಬ್ಬರದ ಕೊರತೆ ಆಗದಂತೆ ಕ್ರಮಹಿಸಬೇಕು. ರೈತರಿಗೆ ಸರ್ಕಾರದಿಂದ ಸಿಗುತ್ತಿರುವ ಬೆಳೆ ವಿಮೆ ಹಣ, ಕಿಸಾನ್ ಸಮ್ಮಾನ್ ಯೋಜನೆ, ಪರಿಹಾರ ಧನ ಇಡೀ  ಕ್ಷೇತ್ರದ ಜನರು  ಈ ಹಣ ಸಮರ್ಪಕವಾಗಿ ರೈತರ ಖಾತೆಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಯುಕ್ತ ಬೀಜ, ಗೊಬ್ಬರ ಬಿತ್ತನೆಗೆ ಮುಂದಾಗುತ್ತಿದ್ದು, ಭವಿಷ್ಯದಲ್ಲಿ ಭೂಮಿಯ ಸಂಪೂರ್ಣ ಫಲವತ್ತತೆ ಕ್ಷೀಣಿಸಿ ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಜತೆಗೆ ಮುಂಬರುವ ದಿನಗಳಲ್ಲಿ ಭೂಮಿಯ ಫಲವತ್ತತೆಯು ಹಾಳಾಗಲಿದೆ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ತಾಲೂಕಿನ ಪ್ರತಿಯೊಬ್ಬ ರೈತರು ಸಾವಯುವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿ ಎಂದರು. ಸಿರಿ ಧ್ಯಾನ್ಯಕ್ಕೆ ಹೆಚ್ಚಿನ ಉತ್ತೆಜನ ನೀಡಿ ಎಂದರು.
ಕ್ಷೇತ್ರದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಕ್ಷೇತ್ರ ವಿಸ್ತರಿಸಲು ಶಾಸಕರು ಸೂಚಿಸಿದರು.
ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಯ ಪ್ರಕರಣಗಳು ಕಂಡು ಬರದಂತೆ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ವೈದ್ಯರು ಸಣ್ಣಪುಟ್ಟ ವಿಷಯಗಳಿಗೂ ತಾಲೂಕಿನ ಬಡ ರೋಗಿಗಳನ್ನು ಬೀದರ್ ಬ್ರೀಮ್ಸ್ ಆಸ್ಪತ್ರೆಗೆ ಕಳುಹಿಸುತ್ತಿರುವುದು ಬೇಸರದ ಸಂಗತಿ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು. ಬೀದರ್ ದಕ್ಷಿಣ ಕ್ಷೇತ್ರದ ಸಿರ್ಸಿ ಎ, ಸಂಗೋಳಗಿ ಗ್ರಾಪಂಗಳ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ವೈದ್ಯರೆ ಇಲ್ಲ ಹೀಗಾದರೆ  ಜನರು  ಎಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ಕುಡಿಯುವ ನೀರು ನೈರ್ಮಲ್ಯ ಎಲಾಖೆ ಅಧಿಕಾರಿಗಳು ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರು ಪರಿಶೀಲಿಸಿ  ಎಲ್ಲ ಜನರಿಗೆ ಉತ್ತಮ  ಶುದ್ಧ ಕುಡಿಯುವ ನೀರು ಸರಬರಾಜು ಕುರಿತು ಪರಿಶೀಲನೆ ನಡೆಸಬೇಕು. ಯಾವಗ್ರಾಮ ದಲ್ಲಿ ಎನೂ ಸಮಸ್ಯೆ ಎದೆ ಎನ್ನುವ ಕುರಿತು  ಸಭೆಯಲ್ಲಿ ಮುಕ್ತವಾಗಿ ಹೇಳಲು ಅವಕಾಶ ನೀಡಿದರು ಬಳಿಕ ಸಮಸ್ಯೆಗಳ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳು ಶೀಘ್ರ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉಚಿತ ಬಸ್ ವ್ಯವಸ್ಥೆಯಿಂದ  ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಹ ಪರಿಸ್ಥಿತಿ ನಿವಾರಣೆಗೆ  ಬಸ್ ಗಳನ್ನು ಹೆಚ್ಚಿಸಬೇಕು ಮತ್ತು ಯಾವ ಗ್ರಾಮದಲ್ಲಿ ಬಸ್ ವ್ಯವಸ್ಥೆ ಇಲ್ಲವೋ ಅಂತಹ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಮಳೆಗಾಲದಲ್ಲಿ ಸಸಿ ನೆಡುವುದನ್ನು ಹೆಚ್ಚಿಸಬೇಕು ಇದರಿಂದ ಮಳೆ ಬೆಳೆ ಉತ್ತಮವಾಗುತ್ತದೆ ಎಂದರು. ರಸ್ತೆ, ಶೌಚಾಲಯ, ಇನ್ನಿತರ ಕಟ್ಟಡ ಕಾಮಗಾರಿ ಉತ್ತಮವಾಗಿ ಶೀಘ್ರ ಪೂರ್ಣಗೊಳಿಸಬೇಕು ಎಂದರು. ಸಭೆಗೂ ಪೂರ್ವದಲ್ಲಿ ಶಾಸಕರು ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ  ಕಸ ವಿಲೇವಾರಿಯ ವಾಹನಕ್ಕೆ ಚಾಲನೆ ನೀಡಿದರು.ಈ  ಸಂದರ್ಭದಲ್ಲಿ ಸಹಾಯಕ ಆಯುಕ್ತಕರಾದ ಲವೀಶ ಒರಡಿಯಾ, ತಾಪಂ ಇಒ ಕಿರಣ್ ಪಾಟೀಲ್ ಇದ್ದರು.

Ghantepatrike kannada daily news Paper

Leave a Reply

error: Content is protected !!