ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು : ಶಾಸಕ ಪ್ರಭು ಚವ್ಹಾಣ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜೂನ್ 21ರಂದು ಬೋಂತಿ ತಾಂಡಾ ನಿವಾಸದಲ್ಲಿ ಬೆಳಗ್ಗೆ ಯೋಗಾಭ್ಯಾಸ ಮಾಡಿದರು.
ಈ ವೇಳೆ ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು. ಯೋಗಾಸನವನ್ನು ನಿಯಮಿತವಾಗಿ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ದೂರ ಮಾಡಬಹುದಾಗಿದೆ. ಇದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿಯಿದೆ. ಮಾನಸಿಕ ಚೈತನ್ಯಕ್ಕೆ ಯೋಗವೇ ಮದ್ದು. ಅಲ್ಲದೇ ಆರೋಗ್ಯಕರ ಸಮಾಜಕ್ಕೂ ಕೂಡ ಪೂರಕವಾಗಿದ್ದು, ಪ್ರತಿದಿನ ಬೆಳಗ್ಗೆ ಯೋಗ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.
ಯೋಗ ಪದ್ಧತಿ ಭಾತದಲ್ಲಿಯೇ ಹುಟ್ಡಿಕೊಂಡಿರುವುದು ನಮ್ಮ ಹೆಮ್ಮೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ರಾಮದೇವ ಬಾಬಾ ಒಳಗೊಂಡು ಅನೇಕ ಯೋಗಗುರುಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ನಿಂತು, ಕುಳಿತು ಮಾಡುವ ಹಲವು ಆಸನಗಳು ಮತ್ತು ಪ್ರಾಣಾಯಾಮ ಮಾಡಿದರು. ಗ್ರಾಮ ಸಂಚಾರದ ವೇಳೆ ಖೇರ್ಡಾ(ಬಿ) ಶಾಲೆಯಲ್ಲಿ ಮಕ್ಕಳೊಂದಿಗೆ ಯೋಗಾಭ್ಯಾಸ ಮಾಡಿದರು.