ಮಾಗನೂರ ಬಸಪ್ಪ ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ ಬಸವ ಲಿಂಗ ಪಟ್ಟದ್ದೇವರು
ನಾಡೋಜ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರಿಗೆ ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತು ಮಾಗನೂರು ಬಸಪ್ಪ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೀದರ ಸಹಯೋಗದೊಂದಿಗೆ ದಿನಾಂಕ ೨೭.೦೭.೨೦೨೩ ಶನಿವಾರ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ೨೦೨೩ನೇ ಸಾಲಿನ ‘ಶರಣ ಮಾಗನೂರು ಬಸಪ್ಪ ಪ್ರಶಸ್ತಿ’ ಡಾ. ಚನ್ನಬಸವ ಪಟ್ಟದ್ದೇವರ ರಂಗಮAದಿರದಲ್ಲಿ ನೀಡಿ ಗೌರವಿಸುತ್ತಿದೆ.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ರಾಜ್ಯದ ಅರಣ್ಯ, ಪರಿಸರ, ಜೀವಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆಯವರು ಆಗಮಿಸುತ್ತಿದ್ದಾರೆ.
ನೇತೃತ್ವವನ್ನು ಹುಲಸೂರ ಗುರು ಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಡಾ ಶಿವಾನಂದ ಮಹಾ ಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಮ.ಘ.ಚ. ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ, ವಹಿಸಲಿದ್ದು, ಸಮ್ಮುಖವನ್ನು ಪೂಜ್ಯ ಶ್ರೀ ಡಾ ಗಂಗಾAಬಿಕಾ ಅಕ್ಕ ಬಸವ ಸೇವಾ ಪ್ರತಿಷ್ಠಾನ ಬೀದರ ವಹಿಸಲಿದ್ದಾರೆ.
ಪ್ರಶಸ್ತಿ ಪ್ರದಾನವನ್ನು ಪ್ರೊ. ಶರಣಪ್ಪ ವ್ಹಿ. ಹಲಸೆ ಉಪಕುಲಪತಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶ್ರೀ ಮಾಗನೂರ ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ರಾದ ಎಂ.ಬಿ.ಸAಗಮೇಶ್ವರ ಗೌಡರು ವಹಿಸಲಿದ್ದು, ಅಭಿನಂದನ ನುಡಿಯನ್ನು ಕೆ ಆರ್ ಇ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಡಾ ಬಸವರಾಜ ಬಲ್ಲೂರ ಹಾಗೂ ಡಾ.ಎಚ್ ಎಸ್ ಮಂಜುನಾಥ ಕುರ್ಕಿ ಮಾತನಾಡಲಿದ್ದು, ಈ ಸಮಾರಂಭ ಕುರಿತು ಆಶಯ ಮಾತನ್ನು ಜಿಲ್ಲಾ ಕ.ಸಾ.ಪ.ಅಧ್ಯಕ್ಷರಾದ ಶ್ರೀ ಸುರೇಶ್ ಚನ್ನಶಟ್ಟಿ ಮಾತನಾಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ವ್ಹಿ. ವಾಮದೇವಪ್ಪ ಅಧ್ಯಕ್ಷರು ಕ.ಸಾ.ಪ. ದಾವಣಗೆರೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ ಜಿ ಶಟಕಾರ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷರಾದ ಶ್ರೀ ಬಾಬು ವಾಲಿ, ಬಸವಕೇಂದ್ರದ ಜಿಲ್ಲಾಧ್ಯಕ್ಷರಾದ ಶ್ರೀ ಶರಣಪ್ಪ ಮಿಠಾರೆ, ರಾಷ್ಟಿçÃಯ ಬಸವ ದಳದ ಜಿಲ್ಲಾಧ್ಯಕ್ಷರಾದ ಶ್ರೀ ಸೋಮಶೇಖರ್ ಪಾಟೀಲ ಗಾದಗಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಂದ್ರಕುಮಾರ ಗಂದಗೆ, ಜಾಗತಿಕ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಧನ್ನೂರ, ಡಾ ಚನ್ನಬಸವ ಪಟ್ಟದ್ದೇವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಜ ಖಂಡ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಗೀತವನ್ನು ಶಿವಕುಮಾರ ಪಾಂಚಾಳ ಹಾಗೂ ಸಂಗಡಿಗರು ನಡೆಸಿಕೊಡಲಿದ್ದು ವಚನ ನೃತ್ಯ ವನ್ನು ಉಷಾ ಪ್ರಭಾಕರ ಹಾಗೂ ತಂಡದವರು ಪ್ರಸ್ತುತ ಪಡಿಸಲಿದ್ದಾರೆ. ದಯವಿಟ್ಟು ಜಿಲ್ಲೆಯ ಕನ್ನಡಾಭಿಮಾನಿಗಳು, ಸಾಹಿತಿಗಳು, ಕಲಾವಿದರು ಹಾಗೂ ಬಸವಪರ ಸಂಘಟನೆಯ ಎಲ್ಲಹಂತದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲು ಕೋರಿದೆ.