ಮಲ್ಲಿಕಾರ್ಜುನ ಖರ್ಗೆ ರವರಿಗೆ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಘೋಷಿಸಲಿ – ಮಹೇಶ ಗೋರನಾಳಕರ್
ಸಾಮಾಜೀಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೇಸ್ ಪಕ್ಷ ಮಾನ್ಯ ಮಲ್ಲಿಕಾರ್ಜುನ ಖರ್ಗೆ ರವರ ನಿಷ್ಠೆ, ತ್ಯಾಗ, ಪರಿಶ್ರಮ ಮತ್ತು ಅನುಭವವನ್ನು ಮರೆತು ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದೆ ದಲಿತ ಶೋಷಿತ ಸಮುದಾಯಗಳು ಕೋನೆಯ ಅವಕಾಶಕ್ಕಾಗಿ ಕಾದು ನೋಡುತ್ತಿವೆ ಅದು ಪ್ರಧಾನಿ ಹುದ್ದೆ ಖರ್ಗೆ ರವರಿಗೆ 2024 ರಲ್ಲಿ ನೀಡಬಹುದೆಂಬ ನಿರೀಕ್ಷೆಯಲ್ಲಿ ತಾಳ್ಮೆಯಿಂದ ಉಳಿದಿದಾರೆ
ಇದು ಹುಸಿಯಾದರೆ ಯಾವತ್ತೂ ದಲಿತರು ಶೋಷಿತರು ಕಾಂಗ್ರೆಸ್ ಕಡೆ ಮುಖ ಮಾಡುವುದಿಲ್ಲ ಇದನರಿತ್ತು ಕಾಂಗ್ರೆಸ್ ಲೋಕಸಭೆ ಚುನಾವಣೆಯ ಮುಂಚಿತವಾಗಿಯೇ ಖರ್ಗೆ ರವರಿಗೆ ಪ್ರಧಾನಿ ಅಭ್ಯರ್ಥಿ ಯೆಂದು ಘೋಷಣೆ ಮಾಡಿದರೆ ಮಾತ್ರ ಕಾಂಗ್ರೆಸ್ ದಲಿತ ಶೋಷಿತರ ಮತ ಪಡೆಯಲಿದೆ ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುತ್ತೆವೆಂದು ಹೇಳಿದರು ಕಾಂಗ್ರೆಸ್ ಮೇಲೆ ನಂಬಿಕೆ ಉಳಿದಿಲ್ಲ ಇದನ್ನು ತಪ್ಪಿದಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿ ದಲಿತರು ಶೋಷಿತರು ಪರ್ಯಾಯ ರಾಜಕೀಯ ಶಕ್ತಿ ನಿರ್ಮಾಣ ಮಾಡುವ ತಯಾರಿಯಲ್ಲಿದ್ದಾರೆ ಎಂದು ಆರ್.ಪಿ.ಐ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ರವರಿಗೆ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ