ಮನ್ನಾಏಖೇಳಿ ಪೊಲೀಸ್ ರಿಂದ ಸುಮಾರು 118 ಕೆ.ಜಿ ಗಾಂಜಾ, 1 ಕೋಟಿ 18 ಲಕ್ಷ ರೂಪಾಯಿಯ ಗಾಂಜಾ ವಶ
ತೆಲಂಗಾಣದಿAದ ಮಹಾರಾಷ್ಟçಕ್ಕೆ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಆಗಸ್ಟ್ 22 ರಂದು ಖಚಿತ ಮಾಹಿತಿ ಮೇರೆಗೆ ಮಂಗಲಗಿ ಟೋಲ್ ಪ್ಲಾಜಾ ಹತ್ತಿರ ತೆರಳಿ ತೆಲಂಗಾಣ ಕಡೆಯಿಂದ ಬರುತ್ತಿದ್ದ ಒಂದು ಬಿಳಿ ಕಾರಿಗೆ ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚಿಸಿದಾಗ ಕಾರ ಚಾಲಕನ್ನು ವಾಹನ ನಿಲ್ಲಿಸಿದಂತೆ ಮಾಡಿ ಟೋಲ್ ಪ್ಲಾಜಾದಿಂದ ಹಿಂತಿರುಗಿಸಿಕೊAಡು ಓಡಿ ಹೋಗುತ್ತಿರುವಾಗ ಮನ್ನಾಏಖೇಳ್ಳಿ ಪಿ.ಎಸ್.ಐ.ಬಸವರಾಜ ಚಿತಕೋಟೆ ನೇತೃತ್ವದ ತಂಡವು ಬೆನ್ನಟ್ಟಿದಾಗ ಸದರಿ ಕಾರನ್ನು ಮನ್ನಾಏಖೇಳ್ಳಿಯ ಎಂ.ಆರ್.ಎಫ್.ಟೈರ್ ಶೋ ರೂಮ್ ಹತ್ತಿರ ಬಿಟ್ಟು ಇಬ್ಬರು ಆರೋಪಿತರರು ಪರಾರಿಯಾಗಿರುತ್ತಾರೆ.
ಕಾರನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿದ್ದ 118 ಕೆ.ಜಿ. ಗಾಂಜಾ ಅಂದಾಜು ಕಿಮ್ಮತ್ತು 1 ಕೋಟಿ 18 ಲಕ್ಷ ರೂಪಾಯಿತಿ ಮತ್ತು ಕಾರಿನ ಕಿಮ್ಮತ್ತು 8 ಲಕ್ಷ ಆಗಿರುತ್ತದೆ. ನಂತರ ಅದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿ ಆರೋಪಿತರ ಪತ್ತೆಗೆ ಜಾಲ ಬಿಸಲಾಗಿದೆ ಎಂದು ಹೇಳಿದರು.
ಬೀದರ ಜಿಲ್ಲೆಯ ಮಾರ್ಗವಾಗಿ ಅಂತರಾಜ್ಯಕ್ಕೆ ಅಕ್ರಮವಾಗಿ ಮಾದಕ ವಸ್ತುಗಳ ಸಾಕಾಣಿಕೆ ತಡೆಗೆ ವಿವಿಧ ಚೆಕ್‌ಪೋಸ್ಟ್ಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು ಹಾಗೂ ಗುಪ್ತಚರ ಇಲಾಖೆಯಿಂದ ಹದ್ದಿನ ಕಣ್ಣು ಇಡಲಾಗಿದ್ದು, ಇದರಿಂದ ಅಕ್ರಮವಾಗಿ ಮಾದಕ ವಸ್ತುಗಳ ಸಾಕಾಣಿಕೆ ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಹುಮನಾಬಾದ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ, ಚಿಟಗುಪ್ಪಾ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‌ಐ ತಸ್ಲೀಮಾ ಪರವಿನ್, ಬೀದರ ನೂತನ ನಗರ ಪೊಲೀಸ್ ಠಾಣೆ ಹಾಗೂ ಮನ್ನಾಎಖೇಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.ದಾಳಿಯಲ್ಲಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಯವರಿಗೆ ಪ್ರಶಂಸನಾ ಪತ್ರದೊಂದಿಗೆ ಬಹುಮಾನ ನೀಡಿ ಶ್ಲಾಘಿಸಲಾಗಿದೆ.