ಬೀದರ್

ಮನೆ-ಮನಗಳಲ್ಲಿ ಬಸವ ಜ್ಯೋತಿ ಸಮಾರೋಪ

ಬೀದರ್: ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕ ಹಾಗೂ ಜಿಲ್ಲಾ ಲಿಂಗಾಯತ ಸಮಾಜ ವತಿಯಿಂದ ಶ್ರಾವಣ ನಿಮಿತ್ತ ಹಮ್ಮಿಕೊಂಡಿದ್ದ ಮನೆ-ಮನಗಳಲ್ಲಿ ಬಸವ ಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಗರದ ಬಸವ ಮಂಟಪದಲ್ಲಿ ಬುಧವಾರ ನಡೆಯಿತು.
ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ದೇವರು ಮಾತನಾಡಿ, ಬಸವಣ್ಣನವರ ತತ್ವದ ಪ್ರಚಾರ ಶ್ರಾವಣದಲ್ಲಷ್ಟೇ ಅಲ್ಲದೆ, ಎಲ್ಲ ಕಾಲದಲ್ಲೂ ನಿರಂತರ ನಡೆಯಬೇಕು. ಪ್ರತಿಯೊಬ್ಬರೂ ಅವುಗಳನ್ನು ಆಚರಣೆಗೆ ತರಬೇಕು ಎಂದು ನುಡಿದರು.
ರಾಷ್ಟ್ರೀಯ ಬಸವ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಗಾದಗಿ ನೇತೃತ್ವ ವಹಿಸಿದ್ದರು.
ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಾಂತಲಿಂಗ ಸಾವಳಗಿ ಷಟಸ್ಥಲ ಧ್ವಜಾರೋಹಣ ಮಾಡಿದರು. ಒಂದು ತಿಂಗಳು ಮನೆ ಮನೆಗಳಲ್ಲಿ ಪ್ರವಚನ ಮಾಡಿದ ಶರಣ
ಸುರೇಶಕುಮಾರ ಸ್ವಾಮಿ ಅವರನ್ನು ಸತ್ಕರಿಸಲಾಯಿತು.
ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಡಾ. ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೈರಾಜ ಖಂಡ್ರೆ, ಜಿಲ್ಲಾ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಗಂಗಶೆಟ್ಟಿ ಪಾಟೀಲ, ಉದ್ಯಮಿ ವಿವೇಕಾನಂದ ಧನ್ನೂರ, ರಾಷ್ಟ್ರೀಯ ಬಸವ ದಳದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಣೇಶ ಬಿರಾದಾರ ಯರನಳ್ಳಿ ಮುಖ್ಯ ಅತಿಥಿಯಾಗಿದ್ದರು.
ಶೀಲಾ ಸೋಮಶೇಖರ ಪಾಟೀಲ ಗಾದಗಿ ಅವರು ಗುರು ಪೂಜೆ ನೆರವೇರಿಸಿದರು. ಸುಲೋಚನಾ ಪಟ್ನೆ ಸ್ವಾಗತಿಸಿದರು. ಕಲ್ಪನಾ ಸಾವಲೆ ನಿರೂಪಿಸಿದರು. ಶಿವಕುಮಾರ ನಾವದಗಿ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!