ಬೀದರ್

ಮಣಿಪುರ ಘಟನೆ ಖಂಡಿಸಿ ಬಿಎಸ್‌ಪಿಯಿಂದ ಮನವಿ

ಮಣಿಪುರದಲ್ಲಿ ಮೇ 4, 2023 ರಂದು ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿಮೆರವಣಿಗೆ ಮಾಡಿ ನಾನಾರೀತಿ ಚಿತ್ರಹಿಂಸೆ ನೀಡುತ್ತಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದಘಟನೆಯು ಇಡೀ ದೇಶವೇ ತಲೆತಗ್ಗಿಸುವಂತಹ ಅಮಾನುಷ ಕೃತ್ಯವಾಗಿದೆ. ಈ ದೌರ್ಜನ್ಯವನ್ನು ತಡೆಗಟ್ಟಲು ಪ್ರಯತ್ನಿಸಿದಸಂತ್ರಸ್ಥೆ ಮಹಿಳೆಯ ತಮ್ಮನನ್ನು ಈ ಕಿರಾತಕರು ಕೊಲೆ ಮಾಡಿರುವುದಾಗಿ ವರದಿಯಾಗಿದೆ.ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕುಮಾರಿ ಅಕ್ಕ ಮಾಯಾವತಿ ಜೀ ಯವರುತೀವ್ರವಾಗಿ ಖಂಡಿಸಿ, ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆಗೆ ಗುರುಪಡಿಸಬೇಕೆಂದು ಒತ್ತಾಯಸಿದ್ದಾರೆ.
ಈ ದೌರ್ಜನ್ಯವನ್ನು ಕರ್ನಾಟಕ ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ.ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿಯವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಬಿಎಸ್‌ಪಿ ಒತ್ತಾಯಿಸಲಾಯಿಸಿ ಇಂದು ಜಿಲ್ಲಾಧಿಕಾರಗಳ ಮುಖಾಂತರ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ  ದಲ್ಲಿ ಜಿಲ್ಲಾಧ್ಯಕ್ಷರಾದ ಕಪೀಲ ಗೋಡಬೋಲೆ ಮತ್ತು ರಾಜ್ಯ ಕಾರ್ಯದರ್ಶಿಯಾದ ದತ್ತು ಸೂರ್ಯವಂಶಿ,
ಹಾಗೂ ಜಿಲ್ಲಾ ಸಂಯೋಜಕರಾದ ಗುಣವಂತ ಸೂರ್ಯವಂಶಿ. ಜಿಲ್ಲಾ ಉಪಾಧ್ಯಕ್ಷರು ಅಶೋಕ ಮಂಠಾಳಕರ್, ಶಕ್ತಿಕಾಂತ ಭಾವಿದೊಡ್ಡಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರು, ಸತ್ಯದೀಪ ಹಾವನೂರ, ಕಛೇರಿ ಕಾರ್ಯದರ್ಶಿ ಜಾಫರ ಖುರೆಷಿ ಇದ್ದರು

Ghantepatrike kannada daily news Paper

Leave a Reply

error: Content is protected !!