ಬೀದರ್

ಮಣಿಪುರದಲ್ಲಿ ಹಿಂಸಾಚಾರ ನಿಲ್ಲಿಸುವ ನಿಟ್ಟಿನಲ್ಲಿ ತುರ್ತು ಹೆಜ್ಜೆಗಳನ್ನಿಡಬೇಕು.

ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸುತ್ತಿರವ ಕುರಿತು.
ಗೌರವಾನ್ವತ ಮೇಡಮ್,
ಇಂದಿನ ಈ ಆಧುನಿಕ ದಿನಗಳಲ್ಲಿ ಮಣಿಪುರದಲ್ಲಿ ಅನಾಗರೀಕ ಪೈಶಾಚಿಕ ಘಟನೆ ನಡೆದಿರುವುದು ಭಾರತೀಯರನ್ನು ಆಘಾತಕ್ಕೆ ತಳ್ಳಿದೆ, ದೇಶದ ಅಂತಃಸಾಕ್ಷಿಯನ್ನು ಕಲಕಿದೆ.
ಇದಕ್ಕಿಂತ ಅಘಾತಕಾರಿ ವಿಷಯವೆಂದರೆ ಈ ಘಟನೆ ಮೇ ತಿಂಗಳಿನಲ್ಲಿ ಘಟಿಸಿದ್ದು ದೇಶದ ಪ್ರಜೆಗಳಾದ ನಮಗೆ ಜೂಲೈ ತಿಂಗಳಿನಲ್ಲಿ ತಿಳಿಯುವಂತಾಗಿದ್ದು. ಇನ್ನೂ ಅಘಾತಕಾರಿ ವಿಷಯವೇನೆಂದರೆ ಅಲ್ಲಿನ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಆ ಒಂದು ಪುಟ್ಟ ರಾಜ್ಯದಲ್ಲಿ ಎರಡು ಸಮುದಾಯಗಳ ಮಧ್ಯದ ಜನಾಂಗೀಯ ಘರ್ಷಣೆ ಮೂರು ತಿಂಗಳುಗಳು ಕಳೆದರೂ ಶಮನಗೊಳಿಸದೆ ಇರುವುದು.
ಕೇಂದ್ರ ಸರ್ಕಾರ ಆ ರಾಜ್ಯದಲ್ಲಿ ಅಂತÀರ್ಜಾಲ ಸೇವೆ ರದ್ದುಗೊಳಿಸಿದಕ್ಕಾಗಿ ಸಾಮಾಜಿಕ ಜಾಲತಾಣದ ಮುಖಾಂತ ದೇಶಕ್ಕೆ ಅಲ್ಲಿನ ಬರ್ಬರ ಹಿಂಸೆ ತಿಳಿಯದಂತಾಗಿದ್ದು ಅತ್ಯಂತ ಖೇದನೀಯ ವಿಷಯ. ನಮ್ಮದೆ ಸಹೋದರ, ಸಹೋದರಿಯರು ಪೈಶಾಚಿಕತೆಯ ನರ್ತನಕ್ಕೆ ನಲುಗಿ ಹೋದರು ನಾವುಗಳ್ಯಾರು ಅವರ ಸಹಾಯಕ್ಕೆ ಆಗಲ್ಲಿಲ ಎಂಬ ಅಪರಾಧಿಕ ಭಾವ ದೇಶದ ಪ್ರತಿಯೊಬ್ಬ ಪ್ರಜೆಗೂ ಕಾಡುತ್ತಿದೆ.
ಭಾರತ ಭೌಗೋಳಿಕವಾಗಿ ಜಗತ್ತಿನಲ್ಲಿ ಏಳನೆಯ ದೊಡ್ಡದೇಶ. ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ ಆರ್ಥಿಕತೆಯಲ್ಲಿ ಐದನೆಯ ದೊಡ್ಡ ದೇಶ. ಈ ಎಲ್ಲ ಮಾನಕಗಳ ಅನುಪಾತದಲ್ಲಿ ದೇಶ ಆಂತರಿಕ ಹಾಗೂ ಬಾಹ್ಯ ರಕ್ಷಣಾ ವ್ಯವಸ್ಥೆ ಹೊಂದಿದೆÉ. ಇವುಗಳು ಯಾವವು ಮಣಿಪುರದ ದುರ್ದೈವಿಗಳ ರಕ್ಷಣೆಗೆ ಬಾರದೆಯಿರುವುದು ಭಾರತಿಯರ ಕಳವಳಕ್ಕೆ ಕಾರಣವಾಗಿದೆ.
ಇಂದು ಭಾರತಿಯರಾದ ನಮಗೆ ವಿಧೇಶಿಗರು ನಿಮ್ಮ ದೇಶದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಿರುವ ಸುದ್ದಿ ನಿಜನಾ ಅಂತ ಕೇಳಿದಾಗ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಒಂದು ಪುಟ್ಟ ರಾಜ್ಯದ ಹಿಂಸಾಚಾರ ತಡೆಯಲಾಗದಕ್ಕೆ ಅಲ್ಲಿನ ಅಮಾನುಷ್ಯಕರ ಘನಘೋರ ಅಪರಾಧಿಕ ಸುದ್ದಿಗಳು ತಡೆಯಲಾಗಿತಾ? ಎಂಬ ಪ್ರೆಶ್ನೆ ಮೈನಡಗಿಸುತ್ತಿದೆ ಇದೆಲ್ಲಾ ಯಾರದಾದರು ಹುನ್ನಾರವೇ ? ಎಂಬ ಸಂಶಯಾ ಮುಡುತ್ತಿದೆ.
ನಮ್ಮ ಸರ್ಕಾರಗಳು ಹಿಂಸಾಚಾರ ತಡೆಯುವಲ್ಲಿ ವಿಫಲವಾದವೇ ? ಮಣಿಪುರದ ಮಹಿಳೆಯg,À ಮಾನ, ಪ್ರಾಣ ರಕ್ಷಿಸುವಲ್ಲಿ ವಿಫಲವಾದವೇ? ಆ ಮೂಲಕ ದೇಶದ ಪ್ರಜೆಗಳ ವಿಶ್ವಾಸ ಕಳೆಯುವಂತೆ ಮಾಡಿವೆ. ರಾಜ್ಯದ ಪೊಲೀಸ ವ್ಯವಸ್ಥೆ ರಾಷ್ಟ್ರದ ಸೈನ್ಯ ವ್ಯವಸ್ಥೆ ಈ ಹಿಂಸಾಚಾರ ತಡೆಯಲು ವಿಫಲಾಗಿವೆ. ಇದೆಲ್ಲ ಸುಸಂಸ್ಕøತ ಭಾರತ ನಮ್ಮ ದೇಶದಲ್ಲಿ ನಡೆದಿದೇಯಾ? ಎಂದು ಬೆರಗುಗೊಳಿಸುತ್ತಿದೆ.


ಇದೆಲ್ಲಕ್ಕೂ ಹೊರತಾಗಿ ಸಾವಿರಾರೂ ಮತಿಭ್ರಷ್ಟ ಪುರುಷರ ದಂಡು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದು ಅವರನ್ನು ರಕ್ಷಿಸಲು ಪ್ರಯತ್ನಿಸಿದ ಕುಟುಂಬಸ್ತರನ್ನು ಕೂಂದಿದ್ದು ಹಾಗೂ ಇಂತಹ ಹಿಂಸಾಚಾರದ ಘಟನೆಗಳು ತಿಂಗಳುಗಟ್ಟಲೆ ನಡೆಯುತ್ತವೆ ಎಂದರೆ ಇವುಗಳಿಗೆ ಆಕಸ್ಮಿಕ ಉಲ್ಬಣಿಸಿದ ಹಿಂಸಾಚಾರವೇನ್ನಬೇಕೂ ಇಲ್ಲ ಯೋಜಿತ ಆಕ್ರಮಣ ಎನ್ನಬೇಕೂ ? ಇದಕ್ಕೆಲ್ಲ ಯಾರನ್ನ ದೂಷಿಸಬೇಕೂ ಅತ್ಯಚಾರಕ್ಕೆ ಬಲಿಯಾದ ಮಹಿಳೆಯರು ಯಾರತ್ತ ನೋಡಬೇಕು ? ಕೊಲೆಯಾದವರ ಎಳೆ ಮಕ್ಕಳು ಯಾರನ್ನು ಕೇಳಬೇಕು ಆ ಮಹಿಳೆಯರದು ಯಾವ ಅಪರಾದ ?s ಈ ಮಕ್ಕಳದ್ದು ಏನು ತಪ್ಪು ?.
ಚುನಾಯಿತ ಸರ್ಕಾರಗಳು ಜನರ ರಕ್ಷಣೆ ಮಾಡದೆ ಇರುವುದು ಅಕ್ಷಮ್ಯ. ಸಂವೈಧಾನಿಕ ಹುದ್ದೆಯಲ್ಲಿರುವವರ ದಿವ್ಯ ಮೌನ ಅಸಂವೇದನೀಯ.
ಬೀದರ ನಗರದ ಸರ್ವಧÀರ್ಮದ ಪ್ರಜ್ಞಾವಂತ ನಾಗರಿಕರು ತಮ್ಮಲ್ಲಿ ಆಗ್ರಹಿಸುವುದೇನೆಂದರೆ ಅಲ್ಲಿನ ರಾಜ್ಯ ಸರ್ಕಾರ ವಜಾಗೊಳಿಸಿ ಮಣಿಪುರದ ಪ್ರಜೆಗಳಲ್ಲಿ ಶಾಂತಿನೆಲೆಸುವಂತೆ ಮಾಡಬೇಕು ದೇಶದ ಪ್ರಜೆಗಳಲ್ಲಿ ವಿಶ್ವಾಸ ತುಂಬಬೇಕು ಹಾಗೂ ಅಮಾನವಿಯ ಕುಕೃತ್ಯದಲ್ಲಿ ತೊಡಗಿದ ರಾಕ್ಷಸರನ್ನು ದಂಡಿಸಬೇಕು ಈ ಮೂಲಕ ದುಷ್ಟ ಶಕ್ತಿಗಳಿಗೆ ಸದೆಬಡೆದು ನಾಗರಿಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸೆಯ ಸಂದರ್ಭದಲ್ಲಿ ನಾವು ಮಾಡಬಹುದಾದ ಬಹಳ ಸಣ್ಣ ಕೆಲಸವೆಂದರೆ ಅಂತಹವನ್ನು ಮೌನದಿಂದ ನೋಡುತ್ತಾ ಕೂರದೇ, ದನಿಯೆತ್ತಿ ಪ್ರತಿಕ್ರಿಯಿಸುವುದು ಮತ್ತು ನೊಂದವರಿಗೆ ನ್ಯಾಯ ದೊರೆಯಬೇಕೆಂದು ಒತ್ತಾಯಿಸುವುದು. ಈ ಸಂದರ್ಭದಲ್ಲಿ ವಿಶೇಷವಾಗಿ ಮಣಿಪುರದಲ್ಲಿ ನಡೆಯುತ್ತಿರುವ ಆಂತರಿಕ ಕಲಹ ತಡೆದು ಶಾಂತಿ ಸ್ಥಾಪಿಸಲು ಸರ್ಕಾರ ಕೂಡಲೇ ಪರಿಣಾಮಕಾರಿಯಾದ ಪರಿಹಾರವನ್ನು ಕಂಡುಕೊಳ್ಳಬೇಕು. ಅದೇ ಸಮಯದಲ್ಲಿ ಒಟ್ಟಾರೆಯಾಗಿ ಭಾರತದಲ್ಲಿ ದಿನೇದಿನೇ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸಾಚಾರ ನಿಲ್ಲಿಸುವ ನಿಟ್ಟಿನಲ್ಲಿ ಸಮಯೋಚಿತವಾದ ಮುಂದಾಲೋಚನೆಯ ತುರ್ತು ಹೆಜ್ಜೆಗಳನ್ನಿಡಬೇಕು.

Ghantepatrike kannada daily news Paper

Leave a Reply

error: Content is protected !!