ಬೀದರ್

“ಮಕ್ಕಳಿಗೆ ಕಾಲೇಜಿಗೆ ಸೇರಿಸುವುದೊಂದೆ ಪಾಲಕರ ಕರ್ತವ್ಯ ಅಲ್ಲ;  ಸಂಸ್ಕಾರ  ಅಷ್ಟೇ ಮುಖ್ಯ”: ಬಸವರಾಜ ಜಾಬಶಟ್ಟಿ ಮಾತು

ಮಕ್ಕಳಿಗೆ ಕಾಲೇಜಿಗೆ ಸೇರಿಸಿದರೆ ಪಾಲಕರ ಕರ್ತವ್ಯ ಅಷ್ಟಕ್ಕೆ ಮುಗಿಯುವುದಿಲ್ಲ ಬದಲಾಗಿ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಕೂಡ ತಂದೆ ತಾಯಿಗಳ ಜವಾಬ್ದಾರಿ ಅದು ಎಲ್ಲರೂ ನಿರ್ವಹಿಸಬೇಕು. ಮಕ್ಕಳಿಗೆ ಕಾಲೇಜಿನಲ್ಲಾಗುವ ಪಾಠಗಳ ಬಗ್ಗೆ ಆಗಾಗ ಕೇಳಬೇಕು ಅಂದಾಗ ಮಾತ್ರ ಅವರು ಸರಿಯಾದ ರೀತಿಯಲ್ಲಿ ಓದುತ್ತಾರೆ ಕ.ರಾ.ಶಿ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶಟ್ಟಿ

ಅವರು ಕರ್ನಾಟಕ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಜೀವನ ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುತ್ತಾರೆ. ಪಾಲಕರು ನಿಮ್ಮ ಮಕ್ಕಳ ಕುಂದು ಕೊರತೆಗಳನ್ನು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ ಎಲ್ಲರೂ ಸೇರಿ ಮಕ್ಕಳ ಭವಿಷ್ಯ ರೂಪಿಸೋಣವೆಂದರು. PSAF ನ ಸೌಲಭ್ಯವನ್ನು ನಮ್ಮ ಸಂಸ್ಥೆ ನೀಡುತ್ತಿದೆ ಅದರ ಪೂರ್ಣ ಲಾಭ ಪ್ರತಿಭಾವಂತ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದರು.ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗೆ ಮಾತನಾಡುತ್ತ ಕಲ್ಯಾಣ ಕರ್ನಾಟಕ ಭಾಗದ ಒಂದು ಒಳ್ಳೆಯ ಮಹಾವಿದ್ಯಾಲಯವನ್ನು ಆಯ್ಕೆ ಮಾಡಿದ್ದಿರಿ ಇದೊಂದು ಒಳ್ಳೆಯ ನಿರ್ಧಾರ. ಈ ಯುಗವನ್ನು ತಂತ್ರಜ್ಞಾನಯುಗವೆಂದು ಕರೆಯುತ್ತಾರೆ. ಎಲ್ಲರೂ ಎಲ್ಲವನ್ನು ಕಲಿಯಬೇಕೆಂಬ ಅನಿವಾರ್ಯತೆ ಇದೆ. ಇವತ್ತು ವಿದ್ಯಾರ್ಥಿಗಳು ಶಿಸ್ತು, ಸಂಸ್ಕಾರ,ಸಂಯಮ, ಜ್ಞಾನಗಳನ್ನು ಕಲಿಯಬೇಕಾಗಿದೆ.

ತಂದೆ ತಾಯಿಗಳು ಮಕ್ಕಳನ್ನ ಬೆಳಿಗ್ಗೆ ಧ್ಯಾನ, ಯೋಗಾಸನದಲ್ಲಿ ತೊಡಗಿಸಬೇಕು ಇದು ಮನಸ್ಸು ಸುಂದರಗೊಳಿಸಿ ಬುದ್ಧಿ ಚುರುಕಾಗಿಸುವುದರೊಂದಿಗೆ ಅವರ ಸಾಧನೆಗೆ ಶಕ್ತಿ ತುಂಬುತ್ತದೆ. ಆಧುನಿಕತೆ ಹೆಸರಿನಲ್ಲಿ ವಿದ್ಯಾರ್ಥಿಗಳು ದಾರಿ ಬಿಡುವ ಅನೇಕ ಪ್ರಸಂಗಗಳು ನಡೆಯುತ್ತಿವೆ ಆದರೇ ಇದು ಆಗಬಾರದು, ದುಶ್ಚಟಗಳಿಗೆ ಬಲಿಯಾಗುವುದನ್ನೂ ಪಾಲಕರು ಸೇರಿದಂತೆ ನಾವೆಲ್ಲರೂ ತಡೆಯಬೇಕು ಇದು ನಮ್ಮೆಲ್ಲರ ಕರ್ತವ್ಯ. ದೇಶಾಭಿಮಾನ ನಮ್ಮೊಳಗಿಂದ ಬರಬೇಕು ಹಾಗೂ ಅದು ಸಮಾಜಕ್ಕೆ ಪೂರಕವಾಗಿರಬೇಕು. ಮೊಬೈಲ್ ಒಳ್ಳೆಯದಕ್ಕೆ ಹೆಚ್ಚಾಗಿ ಬಳಸಬೇಕು, ಸಮಯದ ಸದುಪಯೋಗ ನಿಮ್ಮ ಜೀವನ ರೂಪಿಸುತ್ತದೆ ಅದೆ ನಿಮ್ಮನ್ನ  ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ.

ಆಯ್ದ ಕೆಲ ಪಾಲಕರು ಮಹಾವಿದ್ಯಾಲಯ ಕೊಡುತ್ತಿರುವ ಉತ್ತಮ ಶಿಕ್ಷಣ‌ ಹಾಗೂ ಸೌಲಭ್ಯಗಳ ಕುರಿತು ಮೆಚ್ಚುಗೆ ಮಾತನಾಡಿದರು. ವಿವಿಧ ಘಟಕಗಳ ಮುಖ್ಯಸ್ಥರು ತಮ್ಮ ತಮ್ಮ ವಿಭಾಗಗಳ ಪರಿಚಯ ಮಾಡಿಕೊಟ್ಟರು.

ಕ.ರಾ.ಶಿ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ನಿರ್ದೇಶಕರಾದ ಮಹೇಶಕುಮಾರ ಭದಭದೆ, ಉಪ ಪ್ರಾಚಾರ್ಯರಾದ ಅನಿಲಕುಮಾರ ಚಿಕ್ಕಮಾಣೂರ, ವಿದ್ಯಾರ್ಥಿ ಕ್ಷೇಮಾಧಿಕಾರಿ ಹಾಗೂ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಕಾಂತ ದೊಡ್ಡಮನಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ ಪಾಟೀಲ,ಐ.ಕ್ಯೂ.ಎ.ಸಿ ಸಂಯೋಜಕ ರಾಜಮೋಹನ, ಪ್ರಾಧ್ಯಾಪಕರಾದ ಡಾ. ಎಮ್. ಎಸ್. ಚೆಲ್ವಾ, ಅಶೋಕ ಹುಡೆದ್, ಡಾ. ಬಿ.ವಿ.ರವಿಚಂದ್ರ, ಡಾ. ಮಾದಯ್ಯ ಸ್ವಾಮಿ, ಡಾ. ಸೋಮನಾಥ ಮುದ್ದಾ, ಅಶ್ವಿನ ಚೌಹಾಣ, ಸೋಮೇಶ್ವರಿ ಮುದ್ದಾ, ಅನಿತಾ ಮಾರ್ಗೆ, ಶಿವಲೀಲಾ ಪಾಟೀಲ, ಶ್ರೀಕಾಂತ ಪವಾರ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!