ಬೀದರ್

ಭಾವೈಕ್ಯದ ಸೇತುವೆ ಮೊಹರಂ ಹಬ್ಬ ಆಚರಿಸಿದ ಬೀದರನ ಕೋಳಾರ ಬಿ‌ ಗ್ರಾಮದ ಜನರು

ಹಿಂದೂ-ಮುಸ್ಲಿಮರ ಭಾವೈಕತೆಯ ಮೊಹರಂ ಹಬ್ಬವನ್ನು ಇಂದು ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಡಗರದಿಂದ ಆಚರಿಸಲಾಯಿತು.

ನಗರದ ಹೊರವಲಯದಲ್ಲಿ ಬರುವ ಕೋಳಾರ ಕೆ ಗ್ರಾಮ ಸೇರಿದಂತೆ ಸುತ್ತಿಲ್ಲ ಗ್ರಾಮಗಳಲ್ಲಿ ಹಿಂದೂ ಮತ್ತು ಮುಸ್ಲಿಮರು ಒಗ್ಗೂಡಿ ತಲೆ ಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಪೀರ್ (ದೇವರು) ಕುಡುವ ಸ್ಥಳದ ದಾರಿಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆ ಗ್ರಾಮಗಳ ಹಿರಿಯರು, ಯುವಕರು, ಮಕ್ಕಳು ಅಲಾಯಿ ಹಾಡುಗಳ ಮೂಲಕ ಪೀರ್ ದೇವರ ಕಥೆಗಳನ್ನು ಸಾರುತ್ತಿದ್ದಾರೆ. ಹಾಡಿನ ಜತೆಗೆ ಕೋಲುಗಳನ್ನು ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ…ಹುಶೆನ ಸಾಬ. ಹಸನ್ ಹುಸೇನ್, ಕವಡಿ ಪೀರ್ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ.
ದೇವರಿಗೆ ಹರೆಕೆ ಹೊತ್ತ ಭಕ್ತರು ಹಲಗೆ ವಾದ್ಯಗಳ ಜತೆ ತಮ್ಮ ಸಂಬಂಧಿಕರ ಜತೆ ಬಂದು ನಾನಾ ವಿಧದ ಹೂ, ಮಾಲಾದಿ, ಬಿರಿಯಾನಿ ನೈವೇದ್ಯ ಅರ್ಪಿಸಿದರು.
ಪೀರ್ ದೇವರು ಹಿಡಿದು ಗ್ರಾಮದ ವಿವಿಧಡೆ ಸಂಚರಿಸಿ ಪೀರ್ ದೇವರು‌ ಹಿಡಿದು ಕುಣಿಯತ್ತರೆ ಜೊತೆಗೆ ಗ್ರಾಮದ ಎಲ್ಲಾ ಧರ್ಮಿಯರು ಸಂಭ್ರಮದಿಂದ ಮೋಹರಂ ಅಚರಿಸುತ್ತೆವೆ ಅನ್ನುತಾರೆ ಎಂದು ಮಾದ್ಯಮದ ಪ್ರತಿನಿದಿಯಗೆ ತಿಳಿಸಿದ ಗ್ರಾಮದ ಹಿರಿಯರು

Ghantepatrike kannada daily news Paper

Leave a Reply

error: Content is protected !!