ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಕಾರ್ಯಕ್ರಮ ಮಾಜಿ ಶಾಸಕ ಮೊಳಕೇರಿ ಮೂರ್ತಿ ಅನಾವರಣ
ಬೀದರ್: ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಮಾಜಿ ಶಾಸಕ ದಿ. ಕಲ್ಯಾಣರಾವ್ ಮೊಳಕೇರಿ ಅವರ ಮೂರ್ತಿಯನ್ನು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಅನಾವರಣಗೊಳಿಸಿದರು.
ನಿಧನರಾಗಿ 30 ವರ್ಷ ಕಳೆದರೂ ಕಲ್ಯಾಣರಾವ್ ಮೊಳಕೇರಿ ಅವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಜನನಾಯಕ, ದೇಶ ಭಕ್ತ ಆಗಿದ್ದರು ಎಂದು ಬಣ್ಣಿಸಿದರು.
ಕಲ್ಯಾಣರಾವ್ ಲೇಸೆನಿಸಿಕೊಂಡು ಬದುಕಿದ್ದರು. ಆದರ್ಶ ರಾಜಕಾರಣಿ ಆಗಿದ್ದರು. ಅವರ ಕುರಿತು ಕೃತಿ ರಚಿಸಿರುವುದು ಪ್ರಶಂಸನೀಯ ಎಂದು ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ರಚಿತ ಜನನಾಯಕ ಕಲ್ಯಾಣರಾವ್ ಮೊಳಕೇರಿ ಕೃತಿ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ನುಡಿದರು.
ಕೃತಿಯಲ್ಲಿ ಲೇಖಕರು ಮೊಳಕೇರಿ ಅವರ ಜೀವನ ಹಾಗೂ ಸಾಧನೆ ಮೇಲೆ ಬೆಳಕು ಚೆಲ್ಲಿದ್ದಾರೆ. ಸಂಕ್ಷಿಪ್ತದಲ್ಲೇ ಸಮಗ್ರ ಮಾಹಿತಿ ಒದಗಿಸಿದ್ದಾರೆ ಎಂದು ಕೃತಿ ಕುರಿತು ಮಾತನಾಡಿದ ಡಾ. ರಾಮಚಂದ್ರ ಗಣಾಪುರ ಹೇಳಿದರು.
ಕಲ್ಯಾಣರಾವ್ ಅವರು ನಿಸ್ವಾರ್ಥ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಅವರು ನಮ್ಮಿಂದ ಮರೆಯಾಗದಿರಲಿ ಎನ್ನುವ ಕಾರಣಕ್ಕೆ ಕೃತಿ ರಚಿಸಿದ್ದೇನೆ ಎಂದು ಪಂಚಾಕ್ಷರಿ ಪುಣ್ಯಶೆಟ್ಟಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಶ್ರೀಮಂತ, ಪ್ರಮುಖರಾದ ಅಶೊಕಕುಮಾರ ಸೋನಜಿ, ವಿಜಯಕುಮಾರ ಲಿಂಗೋಜಿ, ಶೇಶರಾವ್ ಬಿ, ಹಣಮಂತರಾವ್ ಪಾಟೀಲ, ಶರಣಪ್ಪ ಸಂಗನಬಶೆಟ್ಟಿ, ಧರ್ಮರಾವ್ ಪಾಟೀಲ, ವಕೀಲ ರಾಜಶೇಖರ ಅಷ್ಟೂರೆ, ರೇಖಾ ಅಷ್ಟೂರೆ, ಶಿವಕುಮಾರ ಹರಪಳ್ಳಿ, ರಾಜಶೇಖರ ನಾಗಮೂರ್ತಿ, ನಾಗಶೆಟ್ಟಿ ಜ್ಯೋತೆಪ್ಪ, ಕಲ್ಯಾಣರಾವ್ ಚಳಕಾಪುರ, ಡಾ. ರಘುಶಂಖ ಭಾತಂಬ್ರಾ, ಪ್ರೊ. ಬಿ.ಕೆ. ಬಡಿಗೇರ, ಸಹಜಾನಂದ ಕಂದಗೂಳ್, ಅಮರನಾಥ ಮೊಳಕೇರಿ, ಸಿದ್ಧಲಿಂಗ ಮೊಳಕೇರಿ, ಬಸವರಾಜ ಮೊಳಕೇರಿ ಇದ್ದರು.
ಡಾ. ಚಂದ್ರಪ್ಪ ಭತಮುರ್ಗೆ ನಿರೂಪಿಸಿದರು. ಅನಿಲಕುಮಾರ ಹಂದಿಕೇರೆ ಸ್ವಾಗತಿಸಿದರು. ಪದ್ಮಾವತಿ ಕೆ. ಮೊಳಕೇರಿ ವಂದಿಸಿದರು.