ಭಾಲ್ಕಿ ಕಾಂಗ್ರೆಸ್ ಕಛೇರಿಯಲ್ಲಿ ದಿವಂಗತ ಶ್ರೀ ರಾಜೀವ ಗಾಂಧಿಜಿ ರವರ ಹಾಗೂ ದಿವಂಗತ ಶ್ರೀ ಡಿ.ದೇವರಾಜ ಅರಸು ರವರ ಜಯಂತಿ ಆಚರಣೆ
ಭಾಲ್ಕಿ:- ಇಂದು ದಿನಾಂಕ: 20-08-2023 ರಂದು ಭಾಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಹಾಗೂ ಭಾರತ ರತ್ನ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿಜಿ ರವರ ಜಯಂತಿಯನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹಣಮಂತರಾವ ಚೌಹಾಣ ರವರು ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು. ನಂತರ ಅವರು ಭಾರತದ ತಂತ್ರಜ್ಞಾನ ಕ್ರಾಂತಿಯ ಹರಿಕಾರ, ದೇಶವನ್ನು ಸರ್ವತೋಮುಖ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ಮಾಜಿ ಪ್ರಧಾನಿಗಳಾದ ದಿವಂಗತ ಶ್ರೀ ರಾಜೀವ ಗಾಂಧಿ ಮತ್ತು ಸಾಮಾಜಿ, ಆರ್ಥಿಕ ಸುಧಾರಣೆಗಳ ಮೂಲಕ ಹಿಂದುಳಿದ ವರ್ಗಗಳ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಡಿ. ದೇವರಾಜರವರ ಬಗ್ಗೆ ಮಾತನಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಜಯಂತಿಯ ಹಾರ್ದಿಕ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ ಅಧ್ಯಕ್ಷರಾದ ಟಿಂಕು ರಾಜಭವನ ಮತ್ತು ಜೈಪಾಲ ಬೊರೊಳೆ, ಮಾಜಿ ಪುರಸಭೆ ಅಧ್ಯಕ್ಷರಾದ ಬಸವರಾಜ ವಂಕೆ, ರಾಜಕುಮಾರ ವಂಕೆ, ದತ್ತು ಪವಾರ, ಪುರಸಭೆ ಸದಸ್ಯರಾದ ಮಹೆಬೂಬಸಾಬ, ಮಾಜಿ ಪುರಸಭೆ ಸದಸ್ಯರು ಬುದಾನಂದ, ಸೇವಾದಲ ಅಧ್ಯಕ್ಷ ಗೊರಖ ಶ್ರೀಮಾಳೆ, ಚಂದು ಸಂಪಂಗೆ, ಅಶೋಕ ಬಾವಗೆ, ಪ್ರಕಾಶ ಮಾನಕಾರಿ, ಆನಂದ ಬಿರಾದಾರ, ಶಾಮ ಮೇಕಾನಿಕ್, ಸುನಿಲ ವಾಂಜ್ರೆ, ರಾಜು ಜೋಶಿ, ರಾಜು ಮಾಡಕೆ, ಬಸ್ಸು ಸಂಪಂಗೆ, ಸಂಜು ಜಾಧವ, ರಾಹುಲ ಬೌಧೆ, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.