ಬೀದರ್

ಭಾರತೀಯ ಬೌದ್ಧ ಮಹಾಸಭಾದಿಂದ ಒಂದು ದಿನದ ಚಿಂತನ ಶಿಬಿರ

ಬೀದರ: ಭಾರತೀಯ ಬೌದ್ಧ ಮಹಾಸಭಾ ತಾಲೂಕ ಶಾಖೆ ಬೀದರವತಿಯಿಂದ ವರ್ಷಾವಾಸ ಕಾರ್ಯಕ್ರಮ ಕುರಿತು ಒಂದು ದಿನದ ಚಿಂತನ ಶಿಬಿರವನ್ನು ನಗರದ ಸಿದ್ಧಾರ್ಥ ಪದವಿ ಕಲೇಜದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಭಂತೆ ಸಂಘರಖ್ಖಿತ ವೈಶಾಲಿ ನಗರ ಆಣದೂರರವರ್ಯು ಹಾಗು ಆಯುಷ್ಯಮಾನ ಶಿವಕುಮಾರ ಸದಾಫೂಲೆಯವರು ಅಧ್ಯಕ್ಷತೆಯನ್ನ ವಹಿಸಿಕೊಂಡಿದ್ದರು. ಭಾರತೀಯ ಬೌದ್ಧಮಹಾಸಭೆಯ ಮುಖ್ಯ ರಾಷ್ಟ್ರಿಯ ಪದಾಧಿಕಾರಿ ಹಾಗು ಕೇಂದ್ರಿಯ ಶಿಕ್ಷಕರಾಗಿ ಎಂ.ಡಿ. ಸರೋದಯ ಮತು ್ತ ರಾಜ್ಯಾಧ್ಯಕರಾದ ಮನೋಹರ ಮೋರೆಯವರು ಉದ್ಘಾಟಕರಾಗಿ ಆಗಮಿಸಿದರು.
ಕಾರ್ಯಕ್ರಮವು ಭಗವಾನ ಬುದ್ಧರಿಗೆ ಮತ್ತು ಬಾಬಾಸಾಹೇಬ ಅಂಬೇಡ್ಕರರ ಪತ್ರಿಮೆಗೆ ಪುಷ್ಟವನ್ನು ಅರ್ಪಿಸಿ ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ದೇವೆಂದ್ರ ಭಾಲ್ಕೆ ಹಾಗು ರಾಜ್ಯ ಕೋಶಾಧ್ಯಕ್ಷರಾಗಿ ರಾಜಪಾ ್ಪ ಗುನಳ್ಳಿಯವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಅತಿಥಿಯಾಗಿ ಸೂರ್ಯಕಾಂತ ಭಾವಿದೊಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ (ಸಂಸ್ಕಾರ ವಿಭಾಗ) ಧನರಾಜ ಜ್ಯೋತಿ ಮತ್ತು ವಿಠಲದಾಸ ಪ್ಯಾಗೆಯವರು ಆಗಮಿಸಿದರು. ಮೊದಲಿಗೆ ಪೂಜ್ಯ ಭಂತೇಜಿಯವರು ಸಿಗಾಲ ಸುತ್ತದ ಕುರಿತು ಧಮ್ಮದೇಸನ ನೀಡಿದರು ಹಾಗು ದಿನವಿಡಿ ನಡೆದ ಕಾರ್ಯಗಾರದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ರವರು ಹುಟ್ಟು ಹಾಕಿದ ಭಾರತೀಯ ಬೌದ್ಧ ಮಹಾಸಭೆ ಸಂವಿಧಾನದಂತೆ ಕಾರ್ಯ ನಿರ್ವಹಿಸಬೇಕೆಂದು ಸುಚಿಸಿದರು ಹಾಗು ಬೌದ್ಧ ಧಮ್ಮವನ್ನ ಪ್ರಚಾರ ಮತ್ತು ಪ್ರಸಾರ ಮಾಡುವ ನಾವುಗಳು ಸಿಸ್ತು ಮತ್ತು ಬದ್ಧತೆಯಿಂದ ಇರಬೇಕಾಗಿ ಸೂಚಿಸಿದರು. ಬೌದ್ಧ ಧಮ್ಮದಲ್ಲಿರುವ ಹಲವಾರು ತಪು ್ಪ ನಂಬಿಕೆಗಳು ಹಾಗು ಆಚರಣೆಗಳನ್ನು ತೊರೆಬೇಕು ಮತ್ತು ವರ್ಷವಾದ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗಾª್ರÀು ಮತ್ತು ನಗರಗಳ ಬುದ್ಧ ವಿಹಾರದಲ್ಲಿ ವರ್ಷಾವಾಸ ಕಾರ್ಯಕ್ರಮ ಆಯೋಜಿಸಿ ಬೌದ್ಧ ಉಪಾಸಕರು ದಿನ ಬುದ್ಧವಂದನೆ ಜೊತೆಗೆ ವಾರಕ್ಕೊಂದು ಸಾರಿ ಮತ್ತು ಹುಣ್ಣಿಮೆ ದಿನದಂದು ಬುದ್ಧವಿಹಾರಕ್ಕೆ ಹೋಗಬೇಕು ಮತು ್ತ ಪ್ರವಚನಗಳನ್ನು ಆಲಿಸಬೇಕಾಗಿ ತಿಳಿಸಿದರು ಮನೋಹರ ಮೋರೆಯವರು ಸಂಸ್ಥೆ ಯ ಕುರಿತು ಮಾತನಾಡುತ್ತಾ ಸಂಸ್ಥೆ ಯ ಸದಸ್ಯತ್ವದ ಕುರಿತು ತಿಳಿಸಿದರು ಹಾಗು ಎಲ್ಲರನ್ನ ಸಂಸ್ಥೆಯ ಸದಸ್ಯತ್ವ ಪಡೆಯಬೇಕಾಗಿ ಸೂಚಿಸಿದರು. ಪ್ರಾಸ್ತಾವಿಕವಾಗಿ ರಾಜಪಾ ್ಪ ಗುನಳ್ಳಿಕರಯವರು ಮಾತನಾಡಿದರು ಹಾಗು ಕಾರ್ಯಕ್ರಮದ ನಿರೂಪಣೆಯನ್ನ ಅಶೋಕ ಆಲೂರಕರ ರವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೇಯ ಪದಾಧಿಕಾರಿಗಳಾದ ಮೇಜರ ಜನರಲ್ (ಎಸ್.ಎಸ್.ಡಿ) ಸಂತೋಷ ಫೂಲೆ, ಮಂಜುಳಾ ಭಾವಿದೊಡ್ಡಿ ಹಾಗು ಮೇಜರರಾದ ಚಂದ್ರಕಲಾ ಬಡಿಗೇರ ಜೊತೆಗೆ ಜಗನ್ನಾಥ ಬಡಿಗೇರ, ಬಾಬು ಮೈನಳ್ಳಿಕರ್, ಶಂಕರರಾವ ಜ್ಯೋತಿ, ಕಂಟ್ಟೆಪಾ ್ಪ ರುದನೂರಕರ್, ವಿಜಯದಶಮಿ ಆರ್ ಗುನಳಿ ್ಳ, ಶಂಕರ ಕೊಂಡಾ, ಕೆ.ಎಸ್.ರಾಮಬಾಣ, ಪ್ರಕಾಶ ಎಕನೂರೆ, ಅಪ್ಪಣ ್ಣ ಬಿ ಶೇರಿಕಾರ, ಗೋವಿಂದ ಪೂಜಾರಿ, ಮಾರುತಿ ಕಾಂಬ್ಳೆ ಧರ್ಮೆಂದರ ಎರನಳ್ಳಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Ghantepatrike kannada daily news Paper

Leave a Reply

error: Content is protected !!