ಭಾರತೀಯರು ಹೆಮ್ಮೆ ಪಡುವ ಕ್ಷಣವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ
3ನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸುತ್ತಿರುವ ನಮ್ಮ ಹೆಮ್ಮೆಯ ನಾಯಕರಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಹಾಗೂ ಹೊಸ ಸರ್ಕಾರದ ಎಲ್ಲಾ ಸಚಿವರಿಗೆ ಅಭಿನಂದಿಸುತ್ತೇನೆ ಹಾಗೂ ಈ ಕ್ಷಣವನ್ನು ಪ್ರತಿ ಭಾರತೀಯರು ಹೆಮ್ಮೆ ಪಡುವ ಕ್ಷಣವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಮೋದಿಜಿಯವರಿಂದ ದೇಶದ ಉನ್ನತ್ತಿ, ರಕ್ಷಣೆ, ಆರ್ಥಿಕ ಸಧೃಢತೆ, ಬಡವರ ಕಲ್ಯಾಣ ಸಾಧ್ಯವಾಗಿದೆ, ಈ ನಿಟ್ಟಿನಲ್ಲಿಯೂ ನಮ್ಮ ಮೋದಿಜಿಯವರು ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ದಿಯ ರಥ ಇನ್ನು ವೇಗವಾಗಿ ಕೊಂಡೊಯ್ಯಲಿದ್ದಾರೆ ಎಂದು ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಜನತೆಯ ಆಶೀರ್ವಾದದಿಂದ ಸಂಸದನಾಗಿ, ಕೇಂದ್ರದಲ್ಲಿ ಮಂತ್ರಿಯಾಗಿ ಮೋದಿಜಿಯವರ ಸಹಕಾರದಿಂದ, ನನ್ನ ನಿರಂತರ ಪರಿಶ್ರಮದಿಂದ ಬೀದರ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಜನತೆ ನೋಡಿದ್ದಾರೆ, ಅವುಗಳ ಉಪಯೋಗ ಇಂದು ಪಡೆಯುತ್ತಿದ್ದಾರೆ, ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಒಂದು ರೈಲಿನ ಸಮಯ ಬದಲಾಯಿಸಲು ಆಗಿರಲಿಲ್ಲಾ ಆದರೆ ನಮ್ಮ ಸರ್ಕಾರದಿಂದ 14 ಹೊಸ ರೈಲುಗಳು, 13 ರಾಷ್ಟ್ರೀಯ ಹೆದ್ದಾರಿಗಳು, ಪಾಸಪೋರ್ಟ ಸೇವಾ ಕೇಂದ್ರ, ಬೀದರನಿಂದ ನಾಗರಿಕ ವಿಮಾನ ಪ್ರಾರಂಭ, ಎಫ್.ಎಮ್. ಕೇಂದ್ರ, ಜನರು ಕನಸಲ್ಲೂ ಊಹಿಸದ ಸೈನಿಕ ಶಾಲೆ ಬೀದರ ಕ್ಷೇತ್ರಕ್ಕೆ ತಂದಿರುವೆ ಮುಂತಾದ ಅಭಿವೃದ್ಧಿ ಕೆಲಸಗಳು ಕಳೆದ 10 ವರ್ಷದಲ್ಲಿ ಮಾಡಿರುವೆ.
ಅಧಿಕಾರವಿಲ್ಲದೆ ಇದ್ದರೂ ಸಹ ಹಿಂದಿನಂತೆ ಬೀದರ ಕ್ಷೇತ್ರದ ಅಭಿವೃದ್ದಿಗೆ ನಾನು ನನ್ನ ನಿರಂತರ ಪ್ರಯತ್ನ ಮಾಡುವೆ, ಆದಷ್ಟೂ ಕ್ಷೇತ್ರಕ್ಕೆ ಜನತೆಗೆ ಒಳಿತಾಗುವ ಕೆಲಸ ಮಾಡುವೆ, ನನಗೆ ಮತದಾನ ಮಾಡಿರುವ ಜನರಿಗೆ ರಕ್ಷಣೆ ಮಾಡುವೆ, ಎಂದಿಗೂ ಕಾರ್ಯಕರ್ತರ ಕೈ ಬಿಡುವುದಿಲ್ಲಾ, ಎಲ್ಲರೂ ಧೈರ್ಯದಿಂದ ಇರಬೇಕೆಂದು ಖೂಬಾ ತಿಳಿಸಿದ್ದಾರೆ.
ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು, ಪಕ್ಷ ಸಂಘಟನೆಯ ಜೊತೆಗೆ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ನಿತ್ಯ ನಿರಂತರ ಹೊರಾಡುವೆ, ಜನರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುವೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಸಮಸ್ತ ಬೀದರ ಲೋಕಸಭಾ ಕ್ಷೇತ್ರದ ಜನತೆಯ ಅಶೀರ್ವಾದ ನಮ್ಮ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಮೇಲಿರಲಿದೆ, ಅವರ ನೇತೃತ್ವದಲ್ಲಿ ಭಾರತವು ವಿಶ್ವದ ಮುಂದೆ ಎಲ್ಲಾ ರಂಗಗಳಲ್ಲಿ ಬೆಳೆದು ನಿಲ್ಲಲಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.